ಮಕ್ಕಳ ಕಳ್ಳರು ವದಂತಿ: ಬೆನ್ನಟ್ಟಿದ ಜನ ಇನ್ನೊವಾ ಕಾರು ಪಲ್ಟಿ..!

ಮಕ್ಕಳ ಕಳ್ಳರ ವದಂತಿ ಜಿಲ್ಲೆಯಿಂದ, ಜಿಲ್ಲೆಗೆ ಹಬ್ಬುತ್ತಿದ್ದು, ಶನಿವಾರ ಇನ್ನೊವಾ ವಾಹನದಲ್ಲಿ ಬಂದವರನ್ನೂ ಜನ ಮಕ್ಕಳ ಕಳ್ಳರೆಂದು ಭಾವಿಸಿ ಬೆನ್ನಟ್ಟಿದ್ದಾರೆ ಎಂದು ಹೇಳಲಾಗಿದೆ. ವಾಹನ ಪಲ್ಟಿಯಾಗಿ ಮೂವರು ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.

ಮಕ್ಕಳ ಕಳ್ಳರು ವದಂತಿ: ಬೆನ್ನಟ್ಟಿದ ಜನ ಇನ್ನೊವಾ ಕಾರು  ಪಲ್ಟಿ..!

ಬಾಗಲಕೋಟೆ:
ಇನ್ನೊವಾ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಸ್ಥಳೀಯರು ಮಕ್ಕಳ ಕಳ್ಳರು ಎಂದು ಭಾವಿಸಿ ಬೆನ್ನಟ್ಟಿದ ಪರಿಣಾಮ ವಾಹನ ಪಲ್ಟಿಯಾಗಿರುವ ಘಟನೆ ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಬೀಳಗಿ ಕಡೆಯಿಂದ ಜನ ವಾಹನವನ್ನು ಬೆನ್ನಟ್ಟಿ ಬಂದಿದ್ದು, ಬಾಗಲಕೋಟೆ ತಾಲೂಕಿನ ಸಂಗೊಂದಿ ಗ್ರಾಮದ ಬಳಿ ಇನ್ನೊವಾ ಕಾರು ಪಲ್ಟಿಯಾಗಿರುವ ಮಾಹಿತಿ ಲಭ್ಯವಾಗಿದೆ.

ಕಾರು ಪಲ್ಟಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಅವರ ದಾಖಲೆಗಳನ್ನು ಪರಿಶೀಲಿಸಿದ್ದು, ವಾಹನ ಪಲ್ಟಿಯಾಗಿ ತಲೆಭಾಗಕ್ಕೆ ಪೆಟ್ಟಾಗಿರುವುದರಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಸ್ವಲ್ಪ ಚೇತರಿಸಿಕೊಂಡ ನಂತರ ಅವರು ಇಲ್ಲಿಗೆ  ಏಕೆ ಆಗಮಿಸಿದ್ದರು, ಜನರು ಅವರನ್ನು ಬೆನ್ನಟ್ಟಿದ್ದು ಏಕೆ ಎಂಬೆಲ್ಲ ಮಾಹಿತಿಯನ್ನು ಕಲೆ ಹಾಕಲಾಗುವುದು  ಎಂದು ಪೊಲೀಸ್ ಮೂಲಗಳು ತಿಳಿಸಿವೆ.