ತುಳಸಿಗೇರಿ ಕಾರ್ತಿಕೋತ್ಸವ: ದೇವರನ್ನೇ ದಿಗ್ಬಂಧನಕ್ಕೆ ಒಳಪಡಿಸಿದ ಪೊಲೀಸರು...!

ತುಳಸಿಗೇರಿಯಲ್ಲಿ ಕಾರ್ತಿಕೋತ್ಸವ ನಿಮಿತ್ತ ಬೆರೆಳೆಣಿಕೆ ಭಕ್ತರ ಮಧ್ಯೆ ನಡೆದ ಪೂಜೆಯ ವಿಡಿಯೋ ಸಹಿತ Exclusive ವರದಿ ಇಲ್ಲಿದೆ ನೋಡಿ.

ನಾಡನುಡಿ ನ್ಯೂಸ್
ಬಾಗಲಕೋಟೆ:
ಕೋವಿಡ್ ನೆಪದಲ್ಲಿ ಪೊಲೀಸರು ದೇವರನ್ನೆ ದಿಗ್ಬಂಧನಕ್ಕೆ ಒಳಪಡಿಸಿರುವ ಘಟನೆ ಸುಕ್ಷೇತ್ರ ತುಳಸಿಗೇರಿಯಲ್ಲಿ ನಡೆದಿದೆ.

ನಿಗದಿಯಂತೆ ಇಂದು ತುಳಸಿಗೇರಿಯಲ್ಲಿ ಕಾರ್ತಿಕೋತ್ಸವ ನೆರವೇರಬೇಕಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆಯುವುದನ್ನು ಅರಿತು ಕಾರ್ತಿಕೋತ್ಸವವನ್ನು ನಿರ್ಬಂಧಿಸಿದಲ್ಲದೇ ಭಕ್ತರ ದರ್ಶನಕ್ಕೂ ಅವಕಾಶ ನೀಡದೆ ನಿರಾಕರಿಸಲಾಗಿದೆ.

ಕಾರ್ತಿಕೋತ್ಸವ ಹೊರತು ಪಡಿಸಿದರೂ ಪ್ರತಿ ಶನಿವಾರ ತುಳಸಿಗಿರೀಶನ ದರ್ಶನಕ್ಕೆ ಸುತ್ತಮುತ್ತಲಿನ ಭಾಗದಿಂದ ಭಕ್ತರು ಆಗಮಿಸುತ್ತಾರೆ ಆದರೆ ಈ ಬಾರಿ ದೇವಸ್ಥಾನದ ಬಾಗಿಲನ್ನೇ ಮುಚ್ಚಿರುವುದು ಭಕ್ತರಿಗೆ ತೀವ್ರ ಬೇಸರ ಮೂಡಿಸಿದೆ.

ಕಾರ್ತಿಕೋತ್ಸವದ ದಿನಾಂಕ ಮೊದಲೇ ಗೊತ್ತಿತ್ತು ಅಲ್ಲದೇ ಮುಜರಾಯಿ ಇಲಾಖೆ ಅಡಿಯಲ್ಲಿ ಈ‌ ದೇವಸ್ಥಾನವಿರುವುದರಿಂದ‌ ಕೋವಿಡ್ ನಿಯಮಗಳನ್ನು ಪಾಲಿಸಿಯೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಹುದಿತ್ತು.‌ ಅದನ್ನು ಬಿಟ್ಟು ದೇವರನ್ನು ದಿಗ್ಬಂಧನಕ್ಕೆ ಒಳಪಡಿಸಿರುವ ಕ್ರಮ‌ ಸರಿಯಲ್ಲ ಎಂದು ಗ್ರಾಮಸ್ಥರು, ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ದೇವಸ್ಥಾನಕ್ಕೆ ಭಕ್ತರು ಆಗಮಿಸದಂತೆ ತಡೆಯಲು‌ ಬ್ಯಾರಿಕೇಡ್ ಅಳವಡಿಸಲು ತಹಶಿಲ್ದಾರ ಜಿ.ಎಸ್.ಹಿರೇಮಠ ಆಗಮಿಸಿದ್ದ ವೇಳೆಯೂ ಗ್ರಾಮಸ್ಥರು ವಾಗ್ವಾದ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಮಾತ್ರವೇ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದ್ದು, ಇನ್ನುಳಿದಂತೆ ಹೊರಗಿನವರು ಗ್ರಾಮ ಪ್ರವೇಶಿಸದಂತೆ ನಾಕಾಬಂದಿ ಹಾಕಲಾಗಿದೆ.