ಪತ್ನಿ ಸಾವಿಗೆ ಕಾರಣನಾದ ಪತಿಗೆ ಜೈಲು ಶಿಕ್ಷೆ

ಪತ್ನಿ ಸಾವಿಗೆ ಕಾರಣನಾದ ಪತಿಗೆ ಜೈಲು ಶಿಕ್ಷೆ
 
ಬಾಗಲಕೋಟೆ: ಪತ್ನಿಗೆ ಕಿರುಕುಳ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪಿ ಪತಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೧ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ರೂ.ಗಳ ದಂಡ ವಿಧಿಸಿದೆ. 
ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ಟಗುಡ್ಡದ ಭೀಮಪ್ಪ ರಾಮಪ್ಪ ವಡ್ಡರ ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತ ಬೇರಯೊಬ್ಬಳ ಜತೆಗೆ ಅನೈತಿಕ ಸಂಬAಧ ಹೊಂದಿರುವ ಆರೋಪವಿತ್ತು. ಹೀಗಾಗಿ ತನ್ನ ಪತ್ನಿ ತಾಯವ್ವಳಿಗೆ ಮನೆಯಲ್ಲಿ ಇರದಂತೆ ೩-೪ ತಿಂಗಳ ಕಾಲ ಕಿರುಕುಳ ನೀಡುತ್ತಿದ್ದ ಕೊನೆಗೆ ಆಕೆ ಇನಾಂ ಯರಗೊಪ್ಪದ ತನ್ನ ತವರು ಮನೆಗೆ ತೆರಳಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆ ೨೦೧೭ರಲ್ಲಿ ಜರುಗಿತ್ತು. ಅಂದಿನ ಪಿಎಸ್.ಐ ಎಸ್.ಎಂ.ಅವಜಿ ಅವರು ಆರೋಪಿತನ ವಿರುದ್ಧ ತನಿಖೆ ಕೈಗೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಅವರು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ೧ ವರ್ಷ ಕಾರಾಗೃಹ ವಾಸ ಹಾಗೂ ೫ ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ. ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಅವರು ಪ್ರಕರಣದಲ್ಲಿ ವಾದ ಮಂಡಿಸಿದ್ದರು.