ಡಿ-ಬಾಸ್ ಆರೋಗ್ಯಕ್ಕಾಗಿ‌ ತುಳಸಿಗಿರೀಶನಿಗೆ ಪ್ರಾರ್ಥಿಸಿದ ಅಭಿಮಾನಿಗೆ ವಾರದಲ್ಲೆ ಬಂತು ಕರೆ

ಬಾಗಲಕೋಟೆಯ ದುರ್ಗೇಶ ದರ್ಶನ್ ಅವರ ಪಕ್ಕಾ ಅಭಿಮಾನಿ. ನೆಚ್ಚಿನ ನಟನಿಗಾಗಿ ಹರಕೆ ತೀರಿಸಿದ ಒಂದೇ ವಾರ್ದಲ್ಲಿ ಕಾಕತಾಳೀಯ ಎಂಬಂತೆ ಅವರ ಕರೆ ಬಂದಿದ್ದು, ಈ ಶನಿವಾರ ದುರ್ಗೇಶನನ್ನು ನಟ ದರ್ಶನ ಭೇಟಿ ಮಾಡಿದ್ದಾರೆ.

ಡಿ-ಬಾಸ್ ಆರೋಗ್ಯಕ್ಕಾಗಿ‌ ತುಳಸಿಗಿರೀಶನಿಗೆ ಪ್ರಾರ್ಥಿಸಿದ ಅಭಿಮಾನಿಗೆ ವಾರದಲ್ಲೆ ಬಂತು ಕರೆ

ನಾಡನುಡಿ ವಿಶೇಷ
ಬಾಗಲಕೋಟೆ:
ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿಯೊಬ್ಬ ತುಳಸಿಗೇರಿಯ ಆಂಜನೇಯನಿಗೆ ಬೇಡಿಕೊಂಡಿದ್ದ ಹರಕೆ ತೀರಿಸಿದ ವಾರದೊಳಗಾಗಿ ಅಭಿಮಾನಿಗೆ ದೇವರು ಭಾಗ್ಯದ ಬಾಗಿಲು ತೆರೆದಿರುವ ಅಪರೂಪದ ಘಟನೆ ನಡೆದಿದೆ.

ವೃತ್ತಿಯಲ್ಲಿ ಟೈಲ್ಸ್ ಜೋಡಣೆ ಕಾರ್ಮಿಕನಾಗಿರುವ ದುರ್ಗಪ್ಪ ಅಂಬಿಗೇರ ಕಳೆದ ವಾರ್ವಷ್ಟೇ ತನ್ನ ನೆಚ್ಚಿನ ನಟ ದರ್ಶನಗಾಗಿ ಬೇಡಿಕೊಂಡಿದ್ದ ಹರಕೆ ತೀರಿಸಲು ಸುಕ್ಷೇತ್ರ ತುಳಸಿಗೇರಿಯಲ್ಲಿ ೧೦೧  ಟೆಂಗಿನಕಾಯಿಗಳನ್ನು ಒಡೆದಿದ್ದ, ಈ ವಿಚಾರ ನಟ ದರ್ಶನ್ ಗೆ ತಿಳಿದಿಲ್ಲವಾದರೂ ದುರ್ಗೇಶ ಅಂಬಿಗೇರಗೆ ಕರೆ ಬಂದಿದ್ದು  ಆಂಜನೇಯನ ದಿನವಾದ ಶನಿವಾರದಂದೇ ಭೇಟಿ‌ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ದರ್ಶನ ಭೇಟಿ ಮಾಡಿರುವ ದುರ್ಗೇಶ ದೇವರು ಕೊಟ್ಟ ವರ ಎಂದು ಖುಷಿಪಟ್ಟಿದ್ದಲ್ಲದೇ ನೆಚ್ಚಿನ ನಟನನ್ನು ಕಂಡು ಪುಳಕಿತರಾಗಿದ್ದಾರೆ.

ದರ್ಶನ ಆರೋಗ್ಯಕ್ಕಾಗಿ ಹರಕೆ:ಎರಡು ವರ್ಷಗಳ ಹಿಂದೆ ಮೈಸೂರು ಬಳಿ‌ ಅಪಘಾತ ಸಂಭವಿಸಿ ನಟ ದರ್ಶನ ಕೈ ಮುರಿದುಕೊಂಡಿದ್ದರು.ಆಗ ದರ್ಶನ ಬೇಗ ಗುಣಮುಖರಾದರೆ ತುಳಸಿಗಿರೀಶನಿಗೆ ೧೦೧ ಕಾಯಿಗಳನ್ನು ಒಡೆಯುವುದಾಗಿ ಅಭಿಮಾನಿ ದುರ್ಗೇಶ ಬೇಡಿಕೊಂಡಿದ್ದರು.
ದುರ್ಗೇಶ ಗುಣಮುಖನಾದರೂ ದುರ್ಗೇಶಗೆ ಹರಕೆ ತೀರಿಸಲು ಎರಡು ವರ್ಷದ ಅವಧಿಯಲ್ಲಿ ಸಾಧ್ಯವಾಗಿರಲಿಲ್ಲ. ಶ್ರಾವಣದ ಮೊದಲ ಶನಿವಾರವಷ್ಟೇ ದುರ್ಗೇಶ ಸ್ನೇಹಿತರ ಜತೆಗೂಡಿ ಟೆಂಗಿನಕಾಯಿಗಳನ್ನು ಒಡೆದಿದ್ದ. 

ದರ್ಶನ ಕರೆ ಬಂದಿದ್ದು ಹೇಗೆ..? ಈ ನಡುವೆ ಉತ್ತರ ಕರ್ನಾಟಕದ ಅಭಿಮಾನಿಗಳನ್ನು ನಟ ದರ್ಶನ್  ಭೇಟಿ ಮಾಡಲು ನಿರ್ಧರಿಸಿದ್ದು, ಅದರಂತೆ ಉತ್ತರ ಕರ್ನಾಟಕ ದರ್ಶನ ಅಭಿಮಾನಿಗಳ ಸಂಘಕ್ಕೆ ಶನಿವಾರ ಬಂದು ಭೇಟಿ ಮಾಡುವಂತೆ ತಿಳಿಸಲಾಗಿತ್ತು. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ೭-೮ ಅಭಿಮಾನಿಗಳು ಬರಲು ಅವಕಾಶ ಮಾಡಿಕೊಡಲಾಗಿತ್ತು. ಶನಿವಾರ ತೆರಳಿದ ಅಭಿಮಾನಿಗಳಿಗಾಗಿ ದರ್ಶನ ಪಲಾವ್ ಹಾಗೂ ಸಿಹಿ ತಿಂಡಿಯ ವ್ಯವಸ್ಥೆ ಕಲ್ಪಿಸಿದ್ದರು. ನಂತರ ಅಭಿಮಾನಿಗಳನ್ನು ಅವರು ಭೇಟಿ‌ ಮಾಡಿದರು ಎಂದು ದುರ್ಗೇಶ ನಾಡನುಡಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ದರ್ಶನ್ ಎಂದರೆ ಎಲ್ಲಿಲ್ಲದ ಅಭಿಮಾನ:ನಟ ದರ್ಶನ್ ಕಂಡರೆ ದುರ್ಗೇಶ ಅಂಬಿಗೇರಗೆ ಎಲ್ಲಿಲ್ಲದ ಅಭಿಮಾನ. ದರ್ಶನ ಅಭಿನಯದ ಶೌರ್ಯ ಚಿತ್ರದ ಕೊನೆ ಶೋ ವೀಕ್ಷಿಸಿದ್ದ ದುರ್ಗೇಶ ನಂತರ ಅವರ ಹಾರ್ಡ್ ಕೋರ್ ಫ್ಯಾನ್ ಆಗಿದ್ದಾರೆ‌‌. ಅಲ್ಲಿಂದ ದರ್ಶನ ಯಾವುದೇ ಚಿತ್ರ ಬಂದರೂ ಮೊದಲ ಶೋ ವೀಕ್ಷಿಸುವ ದುರ್ಗೇಶ ತನ್ನ ಜತೆಗೆ ಬರುವ ಇತರ ಕಾರ್ಮಿಕರ ಖರ್ಚನ್ನೂ ತಾವೇ ನೋಡಿಕೊಳ್ಳುತ್ತಾರೆ. ಡಿ ಬಾಸ್ ಗಾಗಿ ಕಾರ್ಮಿಕರು ಒಂದು ದಿನ ಕೆಲಸ ಬಿಟ್ಟು ತಮ್ಮ ಜತೆಗೆ ಚಿತ್ರ ವೀಕ್ಷಿಸಲು ಆಗಮಿಸುವಾಗ ಬಾಸ್ ಗಾಗಿ‌ ಅವರ ಖರ್ಚು ನೋಡಿಕೊಳ್ಳುವುದು ನಮಗೆ ದೊಡ್ಡ ಮಾತಲ್ಲ ಎನ್ನುತಾರೆ.

ದರ್ಶನಗಾಗಿ ಖಡಕ್ ರೊಟ್ಟಿ:ನಟ ದರ್ಶನಗೆ ಬಾಗಲಕೋಟೆಯಿಂದ ಅಭಿಮಾನಿಗಳಾದ ವಿನಾಯಕ‌ ಹಾಗೂ ಮಂಜುನಾಥ ಅವರು ೧೦೦ ಜೋಳದ ರೊಟ್ಟಿ ಹಾಗೂ ಶೇಂಗಾ ಚಟ್ನಿ ಹೊಯ್ದಿದ್ದು, ನೆಚ್ಚಿನ ನಟನಿಗೆ ತಲುಪಿಸಿ ಬಂದಿದ್ದಾರೆ.