ಸ್ಮಾರ್ಟ್ ಕ್ಲಾಸ್ ಹೆಸರಿನಲ್ಲಿ ಧೋಖಾ; ದೆಹಲಿ ಕಂಪನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಖಡಕ್ ಆದೇಶ
ನಾಡನುಡಿ ನ್ಯೂಸ್
ಬಾಗಲಕೋಟೆ ಫೆ.೨೦:
ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣದ ವೇಳೆ ಮಾಡಿಕೊಂಡಿದ್ದ ಒಪ್ಪಂದವನ್ನು ಪಾಲಿಸದ ದೆಹಲಿಯ ಎಜು ಕಂಪ್ ಸಲೂಷನ್ಸ್ ಲಿಮಿಟೆಡ್, ಎಜು ಸ್ಮಾರ್ಟ್ ಸರ್ವಿಸಸ್ ಪ್ರೆöÊವೆಟ್ ಕಂಪನಿಗಳು ಗ್ರಾಹಕರಿಂದ ಪಡೆದಿದ್ದ ೪.೮೦ ಲಕ್ಷ ರೂ.ಗಳನ್ನು ವಾಪಸ್ ಮಾಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ನಗರದ ಸಜ್ಜಲಶ್ರೀ ವಿದ್ಯಾವರ್ಧಕ ಸಂಘವು ತನ್ನ ಶಾಲೆಯ ೩೦೦ ವಿದ್ಯಾರ್ಥಿಗಳಿಗಾಗಿ ಐದು ವರ್ಷದ ಅವಧಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲು ೨೦೧೨ರಲ್ಲಿ ಈ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಉಪಕರಣಗಳನ್ನು ಖರೀದಿಸಿತ್ತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಪೂರೈಸಬೇಕು ಅದಕ್ಕಾಗಿ ಸಂಘ ತ್ರೆöÊಮಾಸಿಕ ೬ ಸಾವಿರ ರೂ.ಗಳಂತೆ ೪.೮೦ ಲಕ್ಷ ರೂ.ಗಳನ್ನು ಪಾವತಿಸುವ ಒಪ್ಪಂದ ಮಾಡಿಕೊಂಡಿತ್ತು.
ಆದರೆ ಕೆಲವೆ ತಿಂಗಳಲ್ಲಿ ಕಂಪ್ಯೂಟರ್‌ಗಳಲ್ಲಿ ದೋಷ ಕಂಡು ಬಂದತು. ಎರಡು ವರ್ಷಗಳಲ್ಲಿ ಎಲ್ಲ ಕಂಪ್ಯೂಟರ್‌ಗಳಲ್ಲೂ ದೋಷ ಕಂಡು ಬಂದವು. ಸಾಕಷ್ಟು ಬಾರಿ ಈ ಕುರಿತು ಕಂಪನಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಅಲ್ಲದೇ ಪೂರ್ಣ ಶುಲ್ಕ ತುಂಬಿಸಿಕೊAಡಿದ್ದರಿAದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಸಿಗದೆ ಸಾಕಷ್ಟು ತೊಂದರೆ ಆಯಿತು. ಶಾಲೆ ಮುಚ್ಚಬೇಕಾಯಿತು ಎಂದು ಸಂಘದ ಅಧ್ಯಕ್ಷ ಅಪ್ಪಾಸಾಹೇಬ ಬಳಗಾನೂರ ಮತ್ತು ಕಾರ್ಯದರ್ಶಿ ಸಿದ್ದಪ್ಪ ಕೋರಿ ಅವರು ೨೦೧೭ರಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಉಓಹವು, ಎರಡು ತಿಂಗಳಲ್ಲಿ ಪೂರ್ಣ ಶುಲ್ಕ, ಮಾನಸಿಕ ವ್ಯಥೆಗಾಗು ೫ ಸಾವಿರ ರೂ. ಹಾಗೂ ಪ್ರಕರಣಚ ಖರ್ಚಿಗಾಗಿ ೨ ಸಾವಿರ ರೂ.ಗಳನ್ನು ಪಾವತಿಸಬೇಕು. ತಪ್ಪಿದಲ್ಲಿ ಆದೇಶ ದಿನಾಂಕದಿAದ ಶೇ.೧೮ ರ ಬಡ್ಡಿ ಸಮೇತ ವಾಪಸ್ ಕೊಡಬೇಕೆಂದು ಆದೇಶಿಸಿದೆ. ಆಯೋಗದ ಅಧ್ಯಕ್ಷೆ ಕೆ.ಶಾರದಾ, ಸದಸ್ಯರಾದ ರಂಗನಗೌಡ ದಂಡಣ್ಣವರ, ಸುಮಂಗಲಾ ಹದ್ಲಿ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.