ವ್ಯಕ್ತಿ ಹೊಟೆಯಲ್ಲಿ ಸಿಕ್ಕಿತು 187 ನಾಣ್ಯ: ಬಾಗಲಕೋಟೆಯಲ್ಲೊಂದು ಅಪರೂಪದ ಶಸ್ತ್ರಚಿಕಿತ್ಸೆ
ವೃದ್ಧನೊಬ್ಬ ೧೮೭ ನಾಣ್ಯಗಳನ್ನು ನುಂಗಿ ಅಚ್ಚರಿ ಮೂಡಿಸಿದ್ದಾನೆ. ವೈದ್ಯರು ಶಸ್ತ್ತಚಿಕಿತ್ಸೆ ಮಾಡಿ ಹೊರತೆಗೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ವ್ಯಕ್ತಿಯೊಬ್ಬ ನುಂಗಿದ್ದ ೧೮೭ ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ವೈದ್ಯರು ಹೊರತೆಗೆದಿರುವ ಅಪರೂಪದ ಶಸ್ತ್ರಚಿಕಿತ್ಸೆ ಬವಿವ ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.
೫೮ ವರ್ಷದ ವೃದ್ಧನೊಬ್ಬ ೫ ರೂಪಾಯಿಯ ೫೬ ನಾಣ್ಯ, ೨ ರೂಪಾಯಿಯ ೫೧ ನಾಣ್ಯ ಹಾಗೂ ೧ ರ ೮೦ ನಾಣ್ಯಗಳು ಸೇರಿ ಒಟ್ಟು ೧೮೭ ನಾಣ್ಯಗಳನ್ನು ನುಂಗಿ ವೈದ್ಯ ಲೋಕಕ್ಕೆ ಸವಾಲೆನಿಸಿದ್ದ.
ಈತನಿಗೆ ನಗರದ ಕುಮಾರೇಶ್ವರ ಆಸ್ಪತ್ರೆ ವೈದ್ಯರಾದ ಡಾ.ಈಶ್ವರ ಕಲಬುರಗಿ, ಡಾ.ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಸದ ಡಾ.ಅರ್ಚನಾ, ಡಾ.ರೂಪಾ ಹುಲಕುಂದೆ ಅವರುಗಳು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕಾಯಿನ್ ಗಳನ್ನು ಹೊರತೆಗೆದಿದ್ದಾರೆ. ಆದರೆ ಯಾವ ಕಾರಣಕ್ಕೆ ವ್ಯಕ್ತಿ ಇಷ್ಟು ಕಾಯಿನ್ ಗಳನ್ನು ನುಂಗಿದ್ದ ಎಂಬುದು ನಿಗೂಢವಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಹೀಗೆ ಮಾಡಿದ್ದಾನೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಕುಟುಂಬಸ್ಥರು ಅನುಮಾನಗೊಂಡು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಆಗ ಎಕ್ಸರೇಯಲ್ಲಿ ನಾಣ್ಯಗಳು ಪತ್ತೆಯಾಗಿದೆ. ವ್ಯಕ್ತಿ ಜೀವ ಅಪಾಯದಲ್ಲಿರುವುದನ್ನು ಅರಿತ ವೈದ್ಯರು ಎಂಡೋಸ್ಕೋಪಿ ಸಹಾಯದಿಂದ ನಾಣ್ಯಗಳನ್ನು ಹೊರತೆಗೆದಿದ್ದಾರೆ.
ಚಿಕಿತ್ಸೆ ನೀಡಿ ವ್ಯಕ್ತಿಜೀವ ಉಳಿಸಿದ ವೈದ್ಯರ ತಂಡವನ್ನು ಬವಿವ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷು ಅಶೋಕ ಸಜ್ಜನ, ಪ್ರಾಂಶುಪಾಲ ಡಾ.ಅಶೋಕ ಮಲ್ಲಾಪುರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮೇಲಿ ಅಭಿನಂದಿಸಿದ್ದಾರೆ.