ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿದರೆ ಕೇಸ್ ಫಿಕ್ಸ್..!
ಬಾಗಲಕೋಟೆ: ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಹಾಗೂ ಶನಿವಾರ ಮತ್ತು ಭಾನುವಾರ ವಾರ್ಯಂತ ಕಪ್ರ್ಯೂ ಜಾರಿ ಮಾಡಲಾಗಿದ್ದು, ನಿಯಮ ಉಲ್ಲಂಘನೆಯಾದಲ್ಲಿ ನಿರ್ಧಾಕ್ಷಣ್ಯವಾಗಿ ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಜರುಗಿದ ಕಂದಾಯ, ಪೊಲೀಸ್, ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೈಟ್ ಕಪ್ರ್ಯೂ 9.30 ಗಂಟೆಗೆ ಜಾರಿಯಾಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ವಿಕೆಂಡ್ ದಿನಗಳಾದ ಶನಿವಾರ ಮತ್ತು ರವಿವಾರದಂದು ಯಾವುದೇ ರೀತಿಯ ಅಂಗಡಿ ಮುಗ್ಗಟ್ಟುಗಳು ತೆರೆಯುವಂತಿಲ್ಲ. ಬಾರ್ ಅಂಗಡಿಗಳು ತೆರೆಯುವಂತಿಲ್ಲ. ವಿಕೆಂಡ್ ಮತ್ತು ನೈಟ್ ಕಪ್ರ್ಯೂ ಅವಧಿಯಲ್ಲಿ ಜನರ ಓಡಾಟವನ್ನು ನಿಷೇಧಿಸಿದೆ. ವಾರದ ಸಂತೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಪಾಲನೆಯಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮಜರುಗಿಸುವಂತೆ ಆಯಾ ತಾಲೂಕಿನ ತಹಶೀಲ್ದಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರಿಗೆ ಸೂಚಿಸಿದರು.
ಆಸ್ಪತ್ರೆಗೆ ಹೋಗುವ ರೋಗಿಗಳಿಗೆ, ವಸತಿ ನಿಲಯಗಳಲ್ಲಿ ಅಡುಗೆ ಕೆಲಸ ಮಾಡುವವರಿಗೆ ಪೊಲೀಸರು ಯಾವುದೇ ರೀತಿಯ ತೊಂದರೆ ಕೊಡಬಾರದು. ವಸತಿ ನಿಲಯಗಳಲ್ಲಿ ಅಡುಗೆ ಮಾಡುವವರು ಗುರಿತಿನ ಚೀಟಿ ಹಾಕಿಕೊಂಡು ಓಡಾಡಬಹುದಾಗಿದೆ. ಹೋಟೆಲ್ ಡಿಲೆವರಿ ಬಾಯ್, ತರಕಾರಿ, ವಕೀಲರಿಗೆ ಅಗತ್ಯ ಕೆಲಸಗಳಿಗೆ ತೆರೆಳಲು ಅವಕಾಶ ನೀಡುವಂತೆ ತಿಳಿಸಿದರು. ಎಪಿಎಂಸಿ ಮಾರ್ಕೇಟ್‍ನಲ್ಲಿ ಯಾವುದೇ ರೀತಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಗೆ ಅವಕಾಶ ಕೊಡಬಾರದು. ಉಲ್ಲಂಘನೆಯಾದಲ್ಲಿ ಎಪಿಎಂಸಿಗೆ ಸಂಬಂಧಿಸಿದವರ ಮೇಲೆಯೇ ಕೆಸ್ ದಾಖಲಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ವಿಕೆಂಡ್ ಮತ್ತು ನೈಟ್ ಕಪ್ರ್ಯೂ ಅವಧಿಯಲ್ಲಿ ಅನಾವಶ್ಯಕವಾಗಿ ಓಡಾಡುವವರ ಮೇಲೆ ಕೆಪಿ ಆಕ್ಟ ಮೇಲೆ ಕೇಸ್ ದಾಖಲಿಸಿ. ಬಾದಾಮಿ ಬಶಂಕರಿ, ಕೂಡಲ ಸಂಗಮ, ಮಹಾಕೂಟ, ಚಿಕ್ಕಸಂಗಮ, ತುಳಸಿಗೇರಿ ಆಂಜನೇಯ, ಮುಖಚಂಡಿ ವೀರಭದ್ರೇಶ್ವರ ದೇವಸ್ಥಾನಗಳ ಮೇನ್ ಗೆಟ್‍ಗೆ ಬ್ಯಾರಿಕೇಟ್ ಹಾಕಲು ಪೊಲೀಸರಿಗೆ ಸೂಚಿಸದರು. ಯಾವುದೇ ರೀತಿಯ ಧಾರ್ಮಿಕ ಸ್ಥಳಗಳಲ್ಲಿ ಜಾತ್ರೆ, ಶರಣಮೇಳಕ್ಕೆ ಅವಕಾಶವಿರುವದಿಲ್ಲ. ಅಧಿಕಾರಿಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಡಿವಾಯ್‍ಎಸ್‍ಪಿ ನಂದರೆಡ್ಡಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ತಾ.ಪಂ ಇಓ ಶಿವಾನಂದ ಕಲ್ಲಾಪೂರ, ನಗರಸಭೆ ಪೌರಾಯುಕ್ತ ವಿ.ಮುನಿಶಾಮಪ್ಪ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಪಿಐಗಳು ವಿಸಿ ಮೂಲಕ ಪಾಲ್ಗೊಂಡಿದ್ದರು.
ಮದುವೆ ಸಿಜನ್ ಇರುವದರಿಂದ ಬಟ್ಟೆ ಮತ್ತು ಚಿನ್ನದ ಅಂಗಡಿಗಳಿಗೆ ಜನರು ಹೆಚ್ಚಾಗಿ ಬರುತ್ತಿದ್ದು, ಇಂತಹ ಸ್ಥಳಗಳಲ್ಲಿ ಅಧಿಕಾರಿಗಳು ಆಗಿದ್ದಾಂಗೆ ಪರಿಶೀಲನೆ ನಡೆಸುವದರ ಜೊತೆಗೆ ಹೆಚ್ಚಿನ ನಿಗಾವಹಿಸಬೇಕು. ಕೋವಿಡ್ ನಿಯಮ ಪಾಲನೆಯಾಗದಿದ್ದಲ್ಲಿ ಅಂಗಡಿಗಳನ್ನು ಸೀಜ್ ಮಾಡಲು ಕ್ರಮವಹಿಸಬೇಕು.
ಬಾಕ್ಸ್ . . .
ಶನಿವಾರ, ಭಾನುವಾರ ವಿಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಬಾಗಲಕೋಟೆ ನಗರದ ಎಲ್ಲಾ ಕಿರಾಣಿ ಹಾಗೂ ಸಗಟು ವರ್ತಕರು, ವ್ಯಾಪಾರಸ್ಥರು ತಮ್ಮ ಹಂತದಲ್ಲಿ ಸಭೆ ನಡೆಸಿ, ಸ್ವ-ಇಚ್ವೆಯಿಂದ ಶನಿವಾರ ಮತ್ತು ಭಾನುವಾರ ವಿಕೆಂಡ್ ಕಪ್ರ್ಯೂ ಸಮಯದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣ ಬಂದ ಮಾಡಲು ತಿರ್ಮಾನಿಸಿದ್ದಾರೆ. ಕಾರಣ ಸಾರ್ವಜನಿಕರು ತಮಗೆ ಅಗತ್ಯ ವಸ್ತುಗಳನ್ನು ಸೋಮವಾರದಿಂದ ಶುಕ್ರವಾರ ವರೆಗೆ ಮಾತ್ರ ನಿಗದಿತ ಸಮಯದಲ್ಲಿ ಸಾಮಾಜಿಕ ಅಂತರ್ ಕಾಯ್ದುಕೊಂಡು, ಎನ್-95 ಮಾಸ್ಕ್ ಧರಿಸಿ, 2 ಡೋಜ್ ಲಸಿಕೆ ಹಾಕಿಕೊಂಡವರು ಅಗತ್ಯ ವಸ್ತುಗಳನ್ನು ಖರೀದಿಸಬೇಕು. ವಿಕೆಂಡ್ ಕಪ್ರ್ಯೂ ಕಾರಣ ಶನಿವಾರ ಮತ್ತು ಭಾನುವಾರ ಎಲ್ಲ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಮುಚ್ವಲಾಗಿರುತ್ತದೆ.
*- ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ*