ಪ್ರಕರಣಗಳ ಇತ್ಯರ್ಥಕ್ಕೆ ಬೃಹತ್ ಇ-ಲೋಕ ಅದಾಲತ್: ನ್ಯಾ. ಅರವಿಂದಕುಮಾರ
ಬಾಗಲಕೋಟೆ ಆ.೨೮:
ಕೋವಿಡ್-೧೯ ಭೀತಿ ಹಿನ್ನಲೆಯಲ್ಲಿ ಇತ್ಯರ್ಥ್ಯವಾಗದ ಲೋಕ ಅದಾಲತ್ ಪ್ರಕರಣಗಳನ್ನು ಸೆಪ್ಟೆಂಬರ ೧೯ ರಂದು ನಡೆಯುವ ಮೆಗಾ ಇ-ಲೋಕ ಅದಾಲತ್ ಮೂಲಕ ಇತ್ಯರ್ಥ್ಯಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ, ನ್ಯಾ. ಅರವಿಂದಕುಮಾರ ತಿಳಿಸಿದರು.
ಶುಕ್ರವಾರ ಜಿಲ್ಲಾ ನ್ಯಾಯಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇ-ಲೋಕ ಅದಾಲತ್ ಅನುಷ್ಠಾನ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನಿAದ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಕಳೆದ ೬ ತಿಂಗಳುಗಳ ಕಾಲ ನ್ಯಾಯಾಲಯದಲ್ಲಿ ಲೋಕ ಅದಾಲತ್ ಮೂಲಕ ಯಾವುದೇ ರೀತಿಯ ಪ್ರಕರಣಗಳು ಇತ್ಯರ್ಥಪಡಿಸಲು ಸಾದ್ಯವಾಗಿಲ್ಲ. ಆದ್ದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಬರದೇ ಮನೆಯಲ್ಲಿಯೇ ಕುಳಿತು ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸೆಪ್ಟೆಂಬರ ೧೯ ರಂದು ದೇಶದಲ್ಲಿಯೇ ಪ್ರಥಮ ಬಾರಿಗೆ ಇ-ಲೋಕ ಅದಾಲರ್ ಮೂಲಕ ಪ್ರಾರಂಭ ಮಾಡಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸುವ ಕೊಡುವ ಉದ್ದೇಶ, ದ್ಯೇಯ ವಾಕ್ಯವಾಗಿದೆ. ಈ ಇ-ಅದಾಲತ್ ಪ್ರಾರಂಭಿಸುವ ಉದ್ದೇಶದಿಂದ ವಿಮಾ ಕಂಪನಿಗಳ ಮೇಲಾಧಿಕಾರಿಗಳ ಜೊತೆ ಸಂಪರ್ಕ ಮಾಡಿ ಪರಿಹಾರ ನೀಡಲು ತೊಂದರೆಗಳ ಬಗ್ಗೆ ಚರ್ಚಿಸಿ ಪರಿಹಾರ ಬರದೇ ತೊಂದರೆಗೊಳದಾದವರಿಗೆ ತುರ್ತಾಗಿ ಪರಿಹಾರ ಸಿಗುಂತೆ ಮಾಡಲಾಗುತ್ತಿದೆ. ಅಲ್ಲದೇ ಕಳೆದ ೪ ತಿಂಗಳುಗಳಿAದ ವಕೀಲರುಗಳಿಗೆ ಆದ ತೊಂದರೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ ಲೀಗಲ್ ಸರ್ವಿಸಸ್ ಕಮಿಟಿಯ ಅಧ್ಯಕ್ಷರಾದ ಅಲೋಕ ಆರಾದ್ಯ ಅವರು ಮೆಗಾ ಇ-ಅದಾಲತ್ ಬಗ್ಗೆ ಮಾಹಿತಿ ನೀಡಿದರು.
ಸಣ್ಣ ಪುಟ್ಟ ಪ್ರಕರಣಗಳಿದ್ದಲ್ಲಿ ಇನ್ನು ಮುಂದೇ ಕೋರ್ಟಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಕೀಲರ ಕಚೇರಿ ಇಲ್ಲವೇ ಮನೆಯಲ್ಲಿಯೇ ಇದ್ದು, ಮೊಬೈಲ್ ಆಪ್ ಮೂಲಕ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿದರೆ ಅವರಿಗೆ ನ್ಯಾಯವನ್ನು ದೊರೆಕಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ, ತಾಲೂಕವಾರು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿ ಸಭೆ ಮಾಡಿ ಸಾಧಕ ಬಾದಕಗಳ ಬಗ್ಗೆ ವಿಮರ್ಶೆ ಮಾಡಲಾಗಿದೆ. ಅಲ್ಲದೇ ವಕೀಲರು ಹಾಗೂ ಬಾರ್ ಕೌನ್ಸಲಿಂಗ್‌ನ ಅಧ್ಯಕ್ಷರ ಜೊತೆ ಸಮಾಲೋಚನೆ ಮಾಡಲಾಗಿದೆ. ಅದಕ್ಕೆ ಅವರು ಸಹಕಾರ ನೀಡಲು ತಿಳಿಸಿದ್ದಾರೆ ಎಂದರು.
ವಿಡಿಯೋ ಕಾನ್ಪರೇನ್ಸ್ ನಂತರ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಮಾತನಾಡಿ ಇ-ಲೋಕ್ ಅದಾಲತ್‌ಗೆ ಸೆಪ್ಟೆಂಬರ ೧೮ ವರೆಗೆ ನೊಂದಣಿ ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ ೧೯ ರಂದು ಏಕ ಕಾಲಕ್ಕೆ ಇ-ಲೋಕಅದಾಲರ್ ನಡೆಸಲಾಗುತ್ತಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ನಿರ್ದೇಶನದ ಮೇರೆಗೆ ಬಾಗಲಕೋಟೆ ಜಿಲ್ಲೆ ಹಾಗೂ ಅದೀನ ನ್ಯಾಯಾಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಇತ್ಯರ್ಥವಾಗದ ಒಟ್ಟು ೪೨,೦೯೭ ಪ್ರಕರಣಗಳು ಇವೆ. ಇದರಲ್ಲಿ ಸಿವಿಲ್ ೨೪,೨೪೫ ಪ್ರಕರಣಗಳು, ಕ್ರಿಮಿನಲ್ ೧೭,೮೫೨ ಪ್ರಕರಣಗಳಿದ್ದು, ಇವುಗಳನ್ನು ಇ-ಲೋಕ ಅದಾಲತ್‌ನಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಸಿಪಿಓ ಕಡಕೋಳ ಉಪಸ್ಥಿತರಿದ್ದರು.