ಮಾತು ತಪ್ಪಿದ ಮೋದಿ: ರಕ್ಷಿತಾ ಈಟಿ ಟೀಕೆ
ಬಾಗಲಕೋಟೆ: ಬಡವರಿಗೆ, ಮಧ್ಯಮ ವರ್ಗದ ಕುಟುಂಬಕ್ಕೆ ಕಡಿಮೆ ಬೆಲೆಗೆ ಅಕ್ಕಿ ನೀಡುವ ಮೂಲಕ
ಅನ್ನದ ಬಟ್ಟಿಲು ತುಂಬಲು ಮುಂದಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಟೀಕಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಕೆ.ಜಿ.ಗೆ 29 ರಂತೆ ಭಾರತ ಅಕ್ಕಿ ವಿತರಣೆ ಕೇಂದ್ರ ಸರ್ಕಾರ ಆರಂಭಿಸಿತ್ತು. ಅದರಲ್ಲೂ ಲೋಕಸಭಾ ಚುನಾವಣೆ ಸಮೀಪವಿದ್ದಾಗ ಬೃಹನ್ ನಾಟಕ ಮಾಡಿತ್ತು. ಇದೀಗ ಭಾರತ ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ದೇಶದ ಜನರಿಗೆ ತಾವು ನೀಡಿದ ಯಾವುದೇ ಭರವಸೆ ಈಡರೇರಿಸುವುದಿಲ್ಲ ಅಂತ ಮತ್ತೊಮ್ಮೆ ಮೋದಿ ಸಾಬೀತು ಪಡ್ಡಿಸಿದ್ದಾರೆ. ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣು ಎರಚುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.