ನಿಂತ ಲಾರಿಗೆ ಟಿಟಿ ಢಿಕ್ಕಿ: ೧೩ ಜನ ಸ್ಥಳದಲ್ಲೇ ಸಾವು
ಹಾವೇರಿ: ನಿಂತ ಲಾರಿಗೆ ಹಿಂದಿನಿAದ ಜೋರಾಗಿ ಬಂದು ಟೆಂಪೂ ಟ್ರಾವೆಲರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ೧೩ ಜನ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ವ್ಯಾಪ್ತಿಯ ಪುಣೆ-ಬೆಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಜರುಗಿದೆ.
ಮೃತಪಟ್ಟವರನ್ನು ಶಿವಮೊಗ್ಗ ಜಿಲ್ಲೆ ಭದ್ರವಾತಿಯ ಎಮ್ಮಿಹಟ್ಟಿ ಗ್ರಾಮದವರು ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ದೇವಸ್ಥಾನದ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಗುರುವಾರ ತಡರಾತ್ರಿ ೩.೩೦ಕ್ಕೆ ಘಟನೆ ಸಂಭವಿಸಿದೆ. ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ೧೫ ಜನರಲ್ಲಿ ೧೩ ಜನ ಮೃತಪಟ್ಟಿದ್ದು, ಇಬ್ಬರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.