ಸಂಪುಟ ವಿಸ್ತರಣೆ: ಯತ್ನಾಳ್ ನಂತರ ಈಗ ಸವದಿ ಗುಡುಗು
ನಾಡನುಡಿ ನ್ಯೂಸ್ ಬಾಗಲಕೋಟೆ:
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಸಮಾಧಾನ ಹೊರಹಾಕಿರುವುದರ ಮಧ್ಯೆಯೇ ಮತ್ತೋರ್ವ ಶಾಸಕರು ಪಕ್ಷದ ವಿರುದ್ಧ ಗುಡುಗಿದ್ದಾರೆ.
ಪಕ್ಷ ನಿಷ್ಠರಿಗೆ ಮಣೆ ಹಾಕದಿರುವುದಕ್ಕೆ ಅಸಮಾಧಾನ ಹೊರಹಾಕಿರುವ ತೇರದಾಳದ ಶಾಸಕ ಸಿದ್ದು ಸವದಿ ಅವರು #ಹೌದಪ್ಪ ಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿದರೆ ಪಕ್ಷಕ್ಕೂ ಒಳ್ಳೆಯದು ಎಂದು ಮೊಣಚು ಬರಹದ ಮೂಲಕ ಪಕ್ಷದ ನಾಯಕರನ್ನು ತಿವಿದಿದ್ದಾರೆ.
ಫೇಸ್ಬುಕ್ ನಲ್ಲಿ ಬರಹ ಪ್ರಕಟಿಸಿರುವ ಅವರು, ಪಕ್ಷ, ಸಿದ್ಧಾಂತಕ್ಕೆ ನಿಷ್ಠರಾಗಿದ್ದು, ಯಾವುದೇ ತ್ಯಾಗಕ್ಕೆ ಸಿದ್ಧರಾಗಿರುವವರನ್ನು ಬಿಟ್ಟು ಹೌದಪ್ಪಗಳಿಗೆ ಮಣೆ ಹಾಕುತ್ತಿರೋದು ಸರಿಯಲ್ಲ ಎಂದವರು ಗುಡುಗಿದ್ದಾರೆ.