ವೀರಶೈವ-ಲಿಂಗಾಯತರಿಗೆ ಮೀಸಲಾತಿ ಕೊಡಿ: ಶಾಸಕ ಡಾ.ವೀರಣ್ಣ ಚರಂತಿಮಠ

ವೀರಶೈವ-ಲಿಂಗಾಯತರಿಗೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಧ್ವನಿಗೂಡಿಸಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸಮರ್ಥಿಸಿದ್ದಾರೆ

ವೀರಶೈವ-ಲಿಂಗಾಯತರಿಗೆ ಮೀಸಲಾತಿ ಕೊಡಿ: ಶಾಸಕ ಡಾ.ವೀರಣ್ಣ ಚರಂತಿಮಠ

ನಾಡನುಡಿ ನ್ಯೂಸ್ 

ಬಾಗಲಕೋಟೆ:

ವೀರಶೈವ-ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಧ್ವನಿಗೂಡಿಸಿದ್ದಾರೆ.

ರಾಜ್ಯದಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ವೀರೈವ-ಲಿಂಗಾಯತ ಸಮುದಾಯದಾಗಿದ್ದು, ಶೇ.೧೬ ಮೀಸಲಾತಿ ನೀಡಬೇಕೆಂದು ಹೇಳಿದರು.

ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿರುವಂತೆ ವೀರಶೈವ-ಲಿಂಗಾಯತರಲ್ಲೂ ಬಡವರಿದ್ದಾರೆ. ಅವರಿಗೂ ಅವಕಾಶ ಸಿಗಬೇಕೆಂಬ ಕಾರಣಕ್ಕಾಗಿಯೇ ಸರ್ಕಾರ ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ. ಬಿಎಸ್ ವೈ ಅವರ ನಿಲುವನ್ನು ಸ್ವಾಗತಿಸುವುದಾಗಿ ಹೇಳಿದರು.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಆಗಿರುವುದು ಆ ಸಮುದಾಯದ ಅಭಿವೃದ್ಧಿಗೆ ಬೆಳಗಾವಿ ಗಡಿ, ಭಾಷಿಕರ ವಿಚಾರಕ್ಕೆ ಇದು ಸಂಬಂಧವಿಲ್ಲ.ಹೀಗಾಗಿ ಸರ್ಕಾರದ ತೀರ್ಮಾನ ಸರಿಯಾಗಿದೆ ಎಂದರು.