ಉಮಾಶ್ರೀ ಮನೆಗೆ ಕನ್ನ ಹಾಕಿದ್ದ ಇಬ್ಬರು ಕಳ್ಳರ ಬಂಧನ
ಮಾಜಿ ಸಚಿವೆ, ಚಿತ್ರನಟಿ ಉಮಾಶ್ರೀ ಅವರ ಮನೆ ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಮಾಜಿ ಸಚಿವೆ ಉಮಾಶ್ರೀ ಅವರ ಮನೆಗೆ ಕನ್ನ ಹಾಕಿದ್ದ ಇಬ್ಬರು ಪೊಲೀಸರನ್ನು ಬಂಧಿಸುವಲ್ಲಿ ತೇರದಾಳ ಪೊಲೀಸರು ಯಶಸ್ವಿ ಆಗಿದ್ದಾರೆ.
ದುಷ್ಕೃತ್ಯ ಎಸಗಿದ ಇಬ್ಬರು ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ ೧.೯೪ ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಜಮಖಂಡಿಯ ಯಲ್ಲಪ್ಪ ಈರಪ್ಪ ಗಡ್ಡಿ ಹಾಗೂ ಮುಧೋಳದ ದುರ್ಗಪ್ಪ ಫಕೀರಪ್ಪ ವಾಲ್ಮೀಕಿ ವಾಲ್ಮೀಕಿ ಬಂಧಿತ ಆರೋಪಿಗಳು.
ಬಂಧಿತರು ನ.೨ ರಂದು ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ಎಸೆಗಿ ೨ ಲಕ್ಷ ರೂ.ಗಳನ್ನು ದೋಚಿದ್ದರು. ಎಸ್ ಪಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಬನಹಟ್ಟಿ ಠಾಣೆ ಸಿಪಿಐ ಕರುಣೇಶಗೌಡ ಹಾಗೂ ತೇರದಾಳ ಪಿಎಸ್ ಐ ವಿಜಯ ಕಾಂಬಳೆ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇಬ್ಬರೂ ಆರೋಪಿಗಳು ರೂಢಿಗತ ಕಳ್ಳರಾಗಿದ್ದು, ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿ ಆಗಿದ್ದರು ಎಂದು ತಿಳಿದು ಬಂದಿದೆ.