ಸೋತು ಸುಣ್ಣವಾಗಿ ದೇಶ ವಿಭಜನೆಗೆ ಇಳಿಯುತ್ತಿದೆ ಕಾಂಗ್ರೆಸ್..!
ಬಜೆಟ್ ಪ್ರತಿಕ್ರಿಯೆ ನೀಡುತ್ತ ಸಂಸದ ಡಿ.ಕೆ.ಸುರೇಶ ನೀಡಿರುವ ದಕ್ಷಿಣ ಭಾರತ ಪ್ರತ್ಯೇಕತೆಯ ಹೇಳಿಕೆ ಈಗ ಬಿಜೆಪಿಗೆ ಆಹಾರವಾಗಿದೆ. ಇದನ್ನು ಮುಂದಿರಿಸಿಕೊಂಡು ನಿರಂತರ ವಾಗ್ದಾಳಿ ಮುಂದುವರಿಸಿದೆ.
ಬಾಗಲಕೋಟೆ:ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಕರ್ನಾಟಕ ತನ್ನ ಸಾಮಾಜಿಕ ಜಾಲತಾಣದ ವಾಗ್ದಾಳಿ ಮುಂದವತಿಸಿದೆ.
ಕೆಳಗಿನನಂತೆ ಪಟ್ಟಿ ಮಾಡಿ ಕಾಂಗ್ರೆಸ್ ವೈಫಲ್ಯಗಳನ್ನು ಬಿಜೆಪಿ ಎತ್ತಿ ತೋರಿ ಟ್ವಿಟ್ ಮಾಡಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಎರಡು ಪಕ್ಷಗಳ ನಡುವೆ ಸೋಷಿಯಲ್ ಮೀಡಿಯಾ ವಾರ್ ಜೋರಾಗುತ್ತಲೇ ಇದೆ.
ಇತಿಹಾಸದ ೫ ಅಂಶಗಳನ್ನು ಒಟ್ಟಿ ಮಾಡಿ ಕಾಂಗ್ರೆಸ್ ದೇಶ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿ ಟ್ವೀಟ್ ಮಾಡಲಾಗಿದ್ದು, ಕೊನೆಯ ಪ್ಯಾರಾದಲ್ಲಂತೂ ಕಾಂಗ್ರೆಸ್ಸಿನ ತುಕ್ಡೆ, ತುಕ್ಡೆ ಗ್ಯಾಂಗ್ ಗುಲಾಮರು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಾಲ ಬಿಚ್ಚುತ್ತಿದ್ದಾರೆ. ಸೊತು ಸುಣ್ಣವಾಗಿರುವ ಕಾಂಗ್ರೆಸ್ ದೇಶ ವಿಭಜಿಸುವ ಕುತಂತ್ರಕ್ಕೆ ಇಳಿಯುತ್ತಿದೆ ಎಂದು ಆರೋಪಿಸಲಾಗಿದೆ.