ಬೇಸಿಗೆ ಎದುರಿಸಲು ಜಿಪಂ ಸರ್ವಸನ್ನದ..!
ಬಾಗಲಕೋಟೆ:ಬೇಸಿಗೆಗಾಲದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಪರಿಹಾರ ಕಂಡುಕೊಳ್ಳಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದಿAದ ಗುರುವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಸಂಘದ ಗೌರವ ಸ್ವೀಕರಿಸಿದ ಅವರು ಮಾತನಾಡಿದರು.
ಮಳೆಗಾಲ ಕೈಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಬರಗಾಲದ ಸ್ಥಿತಿಯಿದೆ. ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಲಕ್ಷಣಗಳಿವೆ. ೧೯೨ ಹಳ್ಳಲಿಗಳಲ್ಲಿ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಸಾಂಪ್ರದಾಯಿಕ ಕುಡಿಯುವ ನೀರಿನ ಮೂಲಕ್ಕೆ ಪರ್ಯಾಯವಾಗಿ ಕೊಳವೆ ಬಾವಿ ಕೊರೆಯಿಸಿ ನೀರು ಒದಗಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಹೊಸ ಕೊಳವೆಬಾವಿ ಕೊರೆಯಲು ೧.೬೦ ಲಕ್ಷ ರೂ.ಗಳ ಅನುದಾನವನ್ನೂ ಒದಗಿಸಲಾಗುತ್ತಿದೆ. ನಿಷ್ಕಿçಯಗೊಂಡಿರುವ ಕೊಳವೆಬಾವಿಗಳ ದುರಸ್ತಿಗೂ ಕ್ರಮವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶುದ್ಧ ಕುಡಿವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ನದಿ ಪಾತ್ರದಿಂದ ನೀರು ಪೂರೈಸುವ ಡಿಬಿಓಟಿ ಯೋಜನೆಗಳಿವೆ. ಮುಂದಿನ ಎರಡು ವರ್ಷಗಳಲ್ಲಿ ಈ ಗ್ರಾಮಗಳಿಗೂ ನದಿಗಳಿಂದ ನೀರು ಒದಗಿಸಲಾಗುತ್ತದೆ' ಎಂದು ವಿವರಿಸಿದರು.
`ಬಾಲ್ಯವಿವಾಹದ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಾಗಿದ್ದುö, ಬಾಲ್ಯವಿವಾಹದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕಳೆದ ವರ್ಷ ೧೧೯ ಬಾಲ್ಯ ವಿವಾಹ ನಡೆದಿದ್ದುö, ೭೭ ವಿವಾಹಗಳಿಗೆ ತಡೆಯೊಡ್ಡಲಾಗಿದೆ. ೧೯ ಪ್ರಕರಣಗಳಲ್ಲಿ ಪಾಲಕರ ವಿರುದ್ಧ ದೂರು ದಾಖಲಿಸಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ವಾಹಿನಿ ಕಸ ಸಂಗ್ರಹಣೆ ವಾಹನಗಳಿಗೆ ಮಹಿಳೆಯರನ್ನು ಚಾಲಕಿಯರನ್ನಾಗಿ ನೇಮಿಸಲಾಗಿದೆ. ೧೨೬ ಮಹಿಳೆಯರು ವಾಹನ ಚಲಾಯಿಸುತ್ತಿದ್ದಾರೆ. ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲತೆ ಒದಗಿಸಲು ಜಮಖಂಡಿಯಲ್ಲಿ ಸಂಜೀವಿನಿ ಸೂಪರ್ ಮಾರ್ಕೆಟ್ ಆರಂಭಿಸಲಾಗಿದೆ' ಎಂದರು.
`ನರೇಗಾ ಯೋಜನೆಯಲ್ಲಿ ೪೯.೨೯ ಲಕ್ಷ ಮಾನವ ದಿನ ಸೃಷ್ಟಿಸಿ ೨೪೨ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜಿಲ್ಲೆ ರಾಜ್ಯದಲ್ಲಿ ೮ನೇ ಸ್ಥಾನದಲ್ಲಿದೆ. ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಪಾಲನೆಗಾಗಿ ೭೬ ಕೂಸಿನ ಮನೆ ಆರಂಭಿಸಲಾಗಿದೆ. ಜಿಲ್ಲೆಗೆ ೧೮೦ ಗ್ರಾಪಂ ಗ್ರಂಥಾಲಯಗಳ ಪೈಕಿ ೧೬೦ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷ ೬, ೫೦೦ ವೈಯಕ್ತಿಕ ಶೌಚಾಲಯ ನಿರ್ಮಾಣ ಗುರಿಯಿದೆ. ಶಾಲೆ, ಕಾಲೇಜ್‌ಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ' ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಆನಂದ ದಲಭಂಜನ, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಡಿಎಚ್‌ಒ ಬದಲಾವಣೆ
ಜಿಲ್ಲಾ ಆರೋಗ್ಯಾಧಿಕಾರಿ ಬದಲಾವಣೆ ಬಗ್ಗೆ ಕೆಎಟಿ ಆದೇಶದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಬೇರೊಬ್ಬ ಅಧಿಕಾರಿ ನೇಮಕವಾಗಲಿದ್ದಾರೆ. ಇನ್ನುಳಿದಂತೆ ವೈದ್ಯರು ಸೇರಿದಂತೆ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿರಬೇಕೆಂಬ ಕಾರಣಕ್ಕೆ ನೇಮಕಕ್ಕೆ ತಡೆಂiೆ Æಡ್ಡಲಾಗಿದೆ. ಆನ್‌ಲೈನ್ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದರು.