ಕನ್ನಡ ಸಂಘಟನೆಗಳನ್ನು ವಿರೋಧಿಸುವವರಿಗೆ ವಿಜಯ ಮೋರೆಗೆ ಆದ ಸ್ಥಿತಿಯೇ ಬರಲಿದೆ: ಕರವೇ ಅಧ್ಯಕ್ಷ ಬದ್ನೂರ ಎಚ್ಚರಿಕೆ
ಬಿಜೆಪಿ ಪಕ್ಷ ಕೇವಲ ಒಡೆದಾಳುವ ನೀತಿಯಲ್ಲಿದ್ದು, ಯತ್ನಾಳ, ಭಾಂಡಗೆ, ರೇಣುಕಾಚಾರ್ಯ ಸೇರಿ ಇತರರು ಕ್ಷಮೆಯಾಚಿಸದಿದ್ದರೆ ತಕ್ಕಪಾಠ ಕಲಿಸಲಾಗುವುದು ಎಂದು ರಮೇಶ ಬದ್ನೂರ ಎಚ್ಚರಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಬಿಜೆಪಿ ಪಕ್ಷ ಸಮಾಜವನ್ನು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಅಂಥ ಪಕ್ಷದ ಅಯೋಗ್ಯರಿಂದ ನಾಡುನುಡಿಯ ಪಾಠ ಕಲಿಯುವ ದುಸ್ಥಿತಿ ಕನ್ನಡ ಸಂಘಟನೆಗಳಿಗಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸನಗೌಡ ಪಾಟೀಲ ಯತ್ನಾಳ, ನಾರಾಯಣಸಾ ಭಾಂಡಗೆ, ರೇಣುಕಾಚಾರ್ಯರಂಥವರು ಯಾರದೋ ಒಲೈಕೆಗೆ ಕನ್ನಡ ಸಂಘಟನೆಗಳನ್ನು ಅವಮಾನಿಸುತ್ತಿರುವ ದುರದೃಷ್ಟಕರ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಬಗ್ಗೆ ಮಾತಾಡುವ ನಾರಾಯಣಸಾ ಭಾಂಡಗೆ ತಮ್ಮ ಸಮಾಜಕ್ಕೆ, ಬಾಗಲಕೋಟೆಗೆ ಏನ್ ಕೊಡುಗೆ ನೀಡಿದ್ದಾರೆ ಎಂಬುದರ ಬಹಿರಂಗ ಚರ್ಚೆ ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮಿತಿಮೀರಿದ್ದು, ಬಿಜೆಪಿಗೆ ಕನ್ನಡ ಅಭಿಮಾನವಿದ್ದರೆ ಆ ಸಂಘಟನೆಯನ್ನು ನಿಷೇಧಿಸಬೇಕೆಂದು ಸವಾಲೆಸೆದರು.
ನಾರಾಯಣಸಾ ಭಾಂಡಗೆ ಅವರು ಕನ್ನಡ ಸಂಘಟನೆಗಳ ಕ್ಷಮೆಯಾಚಿಸಬೇಕು.ಇಲ್ಲವಾದಲ್ಲೀ ವಿಜಯಮೋರೆಗೆ ಆದ ಸ್ಥಿತಿ ಕನ್ನಡ ಸಂಘಟನೆಗಳನ್ನು ವಿರೋಧಿಸುತ್ತಿರುವವರಿಗೆ ಆಗುತ್ತದೆ ಎಂದು ಎಚ್ಚರಿಸಿದರು.