ಶೆಟ್ಟರ್ ಮುಂದೆ ಗ್ರೀನ್‌ಫುಡ್ ಹಗರಣ ಬಯಲು

ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೭:
ನವನಗರದಲ್ಲಿರುವ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಗ್ರೀನ್‌ಫುಡ್ ಸಂಸ್ಥೆಗೆ ನೀಡಿರುವ ಭೂಮಿ ವಿಚಾರವಾಗಿ ನಡೆದಿರುವ ಹಗರಣ ಕುರಿತು ಕೆಂಡಾಮAಡಲರಾದ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರ ಮುಂದೆ ಅಸಮಾಧಾನ ಹೊರಹಾಕಿದ ಘಟನೆ ಶುಕ್ರವಾರ ನಡೆದಿದೆ.
ಸಚಿವರು ಬಾಗಲಕೋಟೆಗೆ ಭೇಟಿ ನೀಡಿದ ವೇಳೆ ಕೈಗಾರಿಕಾ ಪ್ರದೇಶದ ಪರಿಶೀಲನೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಗ್ರಿನ್‌ಫುಡ್ ಸಂಸ್ಥೆಗೆ ನೀಡಲಾಗಿರುವ ಭೂಮಿ ವಿಚಾರದ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
೨೦೦೫ರಲ್ಲಿ ಗ್ರೀನ್‌ಫುಡ್ ಸಂಸ್ಥೆಗೆ ಪ್ರತಿ ಎಕರೆಗೆ ೧ ಲಕ್ಷ ರೂ.ಗಳಂತೆ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ ನಿಯಮ ಉಲ್ಲಂಗಿಸಿ ೧೫ ರಿಂದ ೭ಒ ಲಕ್ಷ ರೂ.ಗಳವರೆಗೆ ಪ್ರತಿ ಎಕರೆ ಭೂಮಿಯನ್ನು ಇತರರಿಗೆ ಉಪಗುತ್ತಿಗೆ ನೀಡಿದೆ. ವಿವಾದಿತ ಜಾಗವನ್ನು ಅಭಿವೃದ್ಧಿಯೂ ಪಡಿಸಿಲ್ಲ. ರಸ್ತೆ, ವಿದ್ಯುತ್ ದೀಪಗಳೂ ಇಲ್ಲ ಎಂದು ಹೇಳಿ ಸರ್ಕಾರದಿಂದಲೇ ನಡೆದಿರುವ ಹಗರಣದ ಬಗ್ಗೆ ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಜಗದೀಶ ಶೆಟ್ಟರ್ ಗ್ರೀನ್‌ಫುಡ್ ಸಂಸ್ಥೆಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸದರಲ್ಲದೇ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಶೀಘ್ರದಲ್ಲಿ ಸಭೆ ನಡೆಸಲಾಗುವುದು, ಸಭೆಯಲ್ಲಿ ಇದಕ್ಕೆ ಸಂಬAಧಿಸಿದ ದಾಖಲೆಗಳನ್ನು ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಗೆ ಆಹ್ವಾನಿಸಿದರೆ ನಾನೂ ಸಹ ಭಾಗವಹಿಸಿ ಇನ್ನಷ್ಟು ಮಾಹಿತಿ ಒದಗಿಸುತ್ತೇನೆ ಎಂದು ಶಾಸಕ ಚರಂತಿಮಠ ತಿಳಿಸಿದರು.