ಜಿಲ್ಲೆಯಲ್ಲಿ ಶೇ.೭೪.೫೯ ರಷ್ಟು ಪಿಯುಸಿ ಫಲಿತಾಂಶ, ರಾಜ್ಯಕ್ಕೆ ೭ನೇ ಸ್ಥಾನ
ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.೭೪.೫೯ ರಷ್ಟು ಫಲಿತಾಂಶ ಬರುವ ಮೂಲಕ ರಾಜ್ಯಕ್ಕೆ ೭ನೇ ಸ್ಥಾನ ಪಡೆದುಕೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರಿ ತಿಳಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ ಜು ೧೪ : ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.೭೪.೫೯ ರಷ್ಟು ಫಲಿತಾಂಶ ಬರುವ ಮೂಲಕ ರಾಜ್ಯಕ್ಕೆ ೭ನೇ ಸ್ಥಾನ ಪಡೆದುಕೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರಿ ತಿಳಿಸಿದ್ದಾರೆ.
ಜಿಲ್ಲೆಯ ೩೭ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ೨೨೮೫೯ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ೧೮೩೮೯ ಹೊಸ ವಿದ್ಯಾರ್ಥಿಗಳಲ್ಲಿ ೧೩೭೧೭, ಪುನರಾವರ್ತಿತ ೩೧೧೭ ವಿದ್ಯಾರ್ಥಿಗಳ ಪೈಕಿ ೧೦೨೫, ಖಾಸಗಿ ೧೩೫೩ ವಿದ್ಯಾರ್ಥಿಗಳ ೨೫೦ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶೇ.೬೫.೫೮ ರಷ್ಟು ಫಲಿತಾಂಶ ಬಂದಿರುತ್ತದೆ,
ಬಾಗಲಕೋಟೆ ಜಿಲ್ಲೆ ಶೇ.೭೪.೫೯ ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ೭ನೇ ಸ್ಥಾನದಲ್ಲಿದೆ. ಕಳೆದ ೨೦೧೯ರಲ್ಲಿಯೂ ಸಹ ಶೇ.೭೪.೨೬ ರಷ್ಟು ಫಲಿತಾಂಶದಿAದ ೭ನೇ ಸ್ಥಾನ, ೨೦೧೮ ರಲ್ಲಿ ಶೇ.೭೦.೪೯ ರಷ್ಟು ಫಲಿತಾಂಶದಿAದ ೧೨ನೇ ಸ್ಥಾನ, ೨೦೧೭ ರಲ್ಲಿ ಶೇ.೬೩.೧೧ ರಷ್ಟು ಫಲಿತಾಂಶದಿAದ ೧೦ನೇ ಸ್ಥಾನ, ೨೦೧೬ರಲ್ಲಿ ಶೇ.೬೫.೯೧ ಫಲಿತಾಂಶದಿAದ ೧೦ನೇ ಸ್ಥಾನ, ೨೦೧೫ರಲ್ಲಿ ಶೇ.೭೦.೪೦ ರಷ್ಟು ಫಲಿತಾಂಶದಿAದ ೧೧ನೇ ಸ್ಥಾನ, ೨೦೧೪ರಲ್ಲಿ ಶೇ.೫೯.೫೧ ಫಲಿತಾಂಶದಿAದ ೧೨ನೇ ಸ್ಥಾನ, ೨೦೧೩ರಲ್ಲಿ ಶೇ.೫೫.೦೫ ಫಲಿತಾಂಶದಿAದ ೧೫ನೇ ಸ್ಥಾನ, ೨೦೧೨ರಲ್ಲಿ ಶೇ.೫೩.೭೦ ಫಲಿತಾಂಶದಿAದ ೧೯ನೇ ಸ್ಥಾನ ಹಾಗೂ ೨೦೧೧ರಲ್ಲಿ ಶೇ.೪೩.೭೭ ಫಲಿತಾಂಶದಿAದ ೧೬ನೇ ಸ್ಥಾನ ಪಡೆದುಕೊಂಡಿತ್ತು.
ವಿವಿಧ ವಿಭಾಗಗಳಲ್ಲಿ :
ಕಲಾವಿಭಾಗದಲ್ಲಿ ೭೨೯೧ ವಿದ್ಯಾರ್ಥಿಗಳ ಪೈಕಿ ೪೫೩೨ ಜನ ತೇರ್ಗಡೆ ಹೊಂದುವ ಮೂಲಕ ಶೇ.೬೨.೧೬ ರಷ್ಟು, ವಾಣಿಜ್ಯ ವಿಭಾಗದಲ್ಲಿ ೫೨೨೫ ವಿದ್ಯಾರ್ಥಿಗಳ ಪೈಕಿ ೪೧೯೪ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.೮೦.೨೭ ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ೫೮೭೩ ವಿದ್ಯಾರ್ಥಿಗಳ ಪೈಕಿ ೧೩೭೧೭ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.೮೪.೯೮ ರಷ್ಟು ಫಲಿತಾಂಶ ಬಂದಿರುತ್ತದೆ. ಒಟ್ಟಾರೆಯಾಗಿ ಶೇ.೭೪.೫೯ ರಷ್ಟು ಫಲಿತಾಂಶ ಬಂದಿರುತ್ತದೆ.
ಲಿAಗವಾರು ಫಲಿತಾಂಶ :
ಕಲಾ ಗಂಡು ವಿಭಾಗದಲ್ಲಿ ಒಟ್ಟು ೫೬೯೬ ವಿದ್ಯಾರ್ಥಿಗಳ ಪೈಕಿ ೨೪೬೩, ವಾಣಿಜ್ಯ ವಿಭಾಗದಲ್ಲಿ ೨೭೮೨ ಪೈಕಿ ೧೯೮೧, ವಿಜ್ಞಾನ ವಿಭಾಗದಲ್ಲಿ ಒಟ್ಟು ೩೩೭೬ ಪೈಕಿ ೨೬೬೧ ಸೇರಿ ಒಟ್ಟು ೧೧೮೫೪ ಗಂಡು ವಿದ್ಯಾರ್ಥಿಗಳ ಪೈಕಿ ೭೦೧೫ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.೫೯.೧೮ ರಷ್ಟು ಫಲಿತಾಂಶವಾಗಿರುತ್ತದೆ. ಅದೇ ರೀತಿ ಹೆಣ್ಣು ಮಕ್ಕಳ ಕಲಾ ವಿಭಾಗದಲ್ಲಿ ೪೩೭೪ ಪೈಕಿ ೨೩೮೧, ವಾಣಿಜ್ಯ ವಿಭಾಗದಲ್ಲಿ ೩೨೨೬ ಪೈಕಿ ೨೫೭೨, ವಿಜ್ಞಾನ ವಿಭಾಗದಲ್ಲಿ ೩೪೦೫ ಪೈಕಿ ೨೭೨೪ ಸೇರಿ ಒಟ್ಟು ೧೧೦೦೫ ವಿದ್ಯಾರ್ಥಿಗಳ ಪೈಕಿ ೭೯೭೭ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.೭೨.೪೯ ರಷ್ಟು ಫಲಿತಾಂಶವಾಗಿರುತ್ತದೆ. ಈ ಬಾರಿಯೂ ಪುರುಷರಿಗಿಂತ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.
ಮಾದ್ಯಮವಾರು ಫಲಿತಾಂಶ :
ಕನ್ನಡ ಮಾದ್ಯಮ ಕಲಾ ವಿಭಾಗದಲ್ಲಿ ೧೦೦೨೧ ವಿದ್ಯಾರ್ಥಿಗಳ ಪೈಕಿ ೫೧೨೩, ವಾಣಿಜ್ಯ ವಿಭಾಗದಲ್ಲಿ ೫೩೩೨ ವಿದ್ಯಾರ್ಥಿಗಳ ಪೈಕಿ ೩೯೫೮, ವಿಜ್ಞಾನ ವಿಭಾಗದಲ್ಲಿ ಇಬ್ಬರ ಪೈಕಿ ಒಬ್ಬರು ಸೇರಿ ಒಟ್ಟು ೧೫೩೫೫ ವಿದ್ಯಾರ್ಥಿ ಪೈಕಿ ಒಟ್ಟು ೯೦೮೨ ವಿದ್ಯಾರ್ಥಿಗಳು ತೇರ್ಗಡೆಹೊಂದುವ ಮೂಲಕ ಶೇ.೫೯.೧೫ ಫಲಿತಾಂಶವಾಗಿರುತ್ತದೆ. ಇಂಗ್ಲೀಷ ಮಾದ್ಯಮ ಕಲಾ ವಿಭಾಗದಲ್ಲಿ ೪೯ ಪೈಕಿ ೨೧, ವಾಣಿಜ್ಯ ವಿಭಾಗದಲ್ಲಿ ೬೭೬ ಪೈಕಿ ೫೦೫, ವಿಜ್ಞಾನ ವಿಭಾಗದಲ್ಲಿ ೬೭೭೯ ಪೈಕಿ ೫೩೮೪ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.೭೮.೭೬ ರಷ್ಟು ಫಲಿತಾಂಶವಾಗಿರುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಫಲತಾಂಶವನ್ನು ಅವರ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂ.ಎಸ್ ಮೂಲಕ ತಿಳಿಸಲಾಗಿದೆ. ಮೊಬೈಲ್ ನಂಬರ ಇಲ್ಲದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜುಗಳಲ್ಲಿ ಫಲಿತಾಂಶದ ವಿವರ ನೀಡಲಾಗುತ್ತಿದ್ದು, ನೋಟಿಸ್ ಬೋರ್ಡನಲ್ಲಿ ಫಲಿತಾಂಶ ಪ್ರಕಟಿಸಲಾಗುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.