ತಮ್ಮನೇ ನಿಲ್ಲಲಿ, ತಿಮ್ಮನೇ ನಿಲ್ಲಲಿ‌ ಹಿಂದುತ್ವ ಉಳಿಯಲು ವೀರಣ್ಣ ಚರಂತಿಮಠ ಗೆಲ್ಲಲಿ: ಯತ್ನಾಳ ಹೇಳಿಕೆ

ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಸನಗೌಡ ಪಾಟೀಲ ತಮ್ಮ ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರ ಎದುರಾಳಿಗಳ ‌ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು

ತಮ್ಮನೇ ನಿಲ್ಲಲಿ, ತಿಮ್ಮನೇ ನಿಲ್ಲಲಿ‌ ಹಿಂದುತ್ವ ಉಳಿಯಲು ವೀರಣ್ಣ ಚರಂತಿಮಠ ಗೆಲ್ಲಲಿ: ಯತ್ನಾಳ ಹೇಳಿಕೆ

ಬಾಗಲಕೋಟೆ:
ಅವಳಿ ಜಿಲ್ಲೆಯಲ್ಲಿ ಪಕ್ಷವನ್ನು ಹಾಳು ಮಾಡುವ ಹುಳುವೊಂದು ಹುಟ್ಟಿಕೊಂಡಿದೆ ಎಂದು ವಿಜಯಪುರ 
 ಬಸನಗೌಡ ಪಾಟೀಲ‌ ಯತ್ನಾಳ ಹರಿಹಾಯ್ದುದ್ದಾರೆ.

ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮದೆ ಪಕ್ಷದ  ಹುಳುವೊಂದು ತನ್ನ ಬಳಿ ದುಡ್ಡಿದೆ ಎಂಬ ಕಾರಣಕ್ಕೆ ಚರಂತಿಮಠ ಅವರನ್ನು ಸೋಲಸ್ತೀವಿ, ಯತ್ನಾಳ, ಕಾರಜೋಳ, ಸಿದ್ದು ಸವದಿ ಅವರನ್ನು ಸೋಲಿಸ್ತೀವಿ ಎಂದು ತಿಳಿದುಕೊಂಡಿದೆ. ಅದೇ ಈ ಬಾರಿ ಮನೆಗೆ ಹೋಗಲಿದೆ ಎಂದು ಯಾರ ಹೆಸರೂ ಪ್ರಸ್ತಾಪಿಸದೆ ಟೀಕಿಸಿದರು.

ಚರಂತಿಮಠ ಅವರನ್ನು‌ ಸೋಲಿಸಲು ಯತ್ನಿಸುತ್ತಿರುವ ಹುಳ ತಮ್ಮನ್ನಾದರೂ ನಿಲ್ಲಿಸಲಿ, ತಿಮ್ಮನಾದರೂ ನಿಲ್ಲಿಸಲಿ ಅವರ ಸಾಲ‌ ಮಾಡಿ ದುಡ್ಡು ತಂದುಕೊಟ್ಟರೆ ಅದನ್ನು ಪಡೆದು ನೀಡಬೇಕಾದವರಿಗೆ ಮತ ನೀಡಿ. ವೀರಣ್ಣ ಚರಂತಿಮಠ ಅವರು ಗೆದ್ದರೆ ಮಾತ್ರವೇ ಬಾಗಲಕೋಟೆಯಲ್ಲಿ ಹಿಂದುತ್ವ ಉಳಿಯಲಿದೆ ಎಂದರು.

ನಮ್ಮಲ್ಲೆ ಕೆಲವು ಅಪಥ್ಯಗಳಿದ್ದು, ತಾವು ಮಾತ್ರ ಕುಟುಂಬಸ್ಥರೆಲ್ಲರೂ ಚುನಾವಣೆಗೆ ನಿಲ್ಲಬೇಕು ಬಾಗಲಕೋಟೆಯಲ್ಲಿ ಚರಂತಿಮಠ ಸೋಲಬೇಕು, ವಿಜಯಪುರದಲ್ಲಿ ಯತ್ನಾಳ ಸೋಲಬೇಕೆಂದು ಕೆಲವರನ್ನು ತಯಾರು‌ ಮಾಡಿರುತ್ತಾರೆ. ಆದರೆ ಹಿಂದುತ್ವ ಉಳಿಯಲು ವೀರಣ್ಣ ಚರಂತಿಮಠ ಅವರು ಗೆಲ್ಲಬೇಕೆಂದರು.

RSS ನಿಷೇಧಿಸಬೇಕೆಂದು ಕೆಲವರು ಆಗ್ರಹಿಸುತ್ತಿದ್ದಾರೆ ಎಂದ ಮಾತಿಗೆ ನನಗೆ ಕೇಳಿದರೆ ಕಾಂಗ್ರೆಸ್ಸನ್ನೇ ನಿಷೇಧಿಸಬೇಕು.ದೇಶವನ್ನು ವಿಭಜಿಸಿರುವ ಆ ಪಕ್ಷ ದೇಶಕ್ಕೆ ಶಾಪವಾಗಿದೆ ಎಂದು ವಾಗ್ದಾಳಿ ನಡೆಸಿದರು.