ಪ್ರವಾಹಕ್ಕೆ ದಾರಿಮಾಡಿಕೊಟ್ಟವೇ ಅವೈಜ್ಞಾನಿಕ ಸೇತುವೆಗಳು...!   

* ತಂಗಡಗಿ ಸೇತುವೆಯಲ್ಲಿನ ಹೂಳಿನಿಂದ ಹಲವು ಪ್ರದೇಶಗಳಿಗೆ ಧಕ್ಕೆ  * ರಸ್ತೆಗಾಗಿ ಬೆಳಗಲ್ ಸೇತುವೆಗೆ ಧಕ್ಕೆ ಮಾಡಿದ್ದೇ ಪ್ರವಾಹದ ಎಡವಟ್ಟಿಗೆ ಕಾರಣ * ಕೊಣ್ಣೂರು ಸೇತುವೆಗೂ ಇದೇ ಆಪತ್ತು

             ಪ್ರವಾಹಕ್ಕೆ ದಾರಿಮಾಡಿಕೊಟ್ಟವೇ ಅವೈಜ್ಞಾನಿಕ ಸೇತುವೆಗಳು...!   

  
        
ಅಭಯ ಮನಗೂಳಿ 
ಬಾಗಲಕೋಟೆ:
ಶತಮಾನ ಕಂಡರಿಯದ ಪ್ರವಾಹಕ್ಕೆ ಕಳೆದ ವರ್ಷ ಜಿಲ್ಲೆ ತುತ್ತಾಗಿತ್ತು. ಐತಿಹಾಸಿಕ ಐಹೊಳೆ ೧೨೦೦ ವರ್ಷಗಳ ಇತಿಹಾಸದಲ್ಲಿ ಎಂದಿಗೂ ಮುಳಗಿರಲಿಲ್ಲ. ಆದರೆ ಕಳೆದ ವರ್ಷ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ ಜಿಲ್ಲೆಯ ೧೯೫ಕ್ಕೂ ಅಧಿಕ ಹಳ್ಳಿಗಳು ಜಲಾವೃತಗೊಂಡಿದ್ದವು. ಒತ್ತುವರಿ ಸಮಸ್ಯೆ ಒಂದು ಕಡೆ ಆಗಿದ್ದರೆ, ನದಿಗಳಲ್ಲಿ ತುಂಬಿಕೊAಡಿರುವ ಹೂಳು ಸಹ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೆ ಕಾರಣವಾಗಿತ್ತು. ಇದಕ್ಕೆ ಸಂಬAಧಿಸಿದAತೆ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು, ತಜ್ಞರು ನಾನಾ ವಿಶ್ಲೇಷಣೆಗಳನ್ನು ಮಾಡಿದ್ದು, ತಂಗಡಗಿ ಸೇತುವೆಯಿಂದ ಉಂಟಾದ ಅಪಾಯಗಳ ಕುರಿತಾಗಿ ಅಧಿಕಾರಿಗಳೇ ಸಲ್ಲಿಸಿದ ವರದಿ ಬೆಳಕಿಗೆ ಬಂದಿದೆ. 
 ಪ್ರವಾಹದ ಮೂಲವನ್ನು ಹುಡುಕುತ್ತ ಹೊರಟರೆ ಬೆಣ್ಣಿಹಳ್ಳದ ಪಾತ್ರ ಅತಿಮುಖ್ಯವಾಗಿದ್ದು, ಹೆಸರೇ ಸೂಚಿಸುವಂತೆ ಈ ಹಳ್ಳದಲ್ಲಿ ಬೆಣ್ಣಿಯಂತೆ ಹೂಳು ತುಂಬಿ ಪ್ರವಾಹ ಬಂದಾಗ ಹರಿದು ಹೋಗಿ ಅದು  ಕೃಷ್ಣಾ ನದಿ ಅಥವಾ ಸಮುದ್ರವನ್ನು ಸೇರುತಿತ್ತು. ಆದರೆ ೧೯೮೨ರಲ್ಲಿ ನಾರಾಯಣಪುರ ಜಲಾಶಯ ನಿರ್ಮಾಣಗೊಂಡ ನಂತರ ಅದು ಜಲಾಶಯದ ಹಿಂಭಾಗದಲ್ಲಿ ಸಂಗ್ರಹಗೊಳ್ಳಲು ಶುರುವಾಗಿದ್ದು, ಈ ಹೂಳಿನಿಂದಲೇ ಪ್ರವಾಹ ಉಂಟಾಗುತ್ತಿದೆ ಎಂಬ ಅನುಮಾನವನ್ನು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 
 ಕೂಡಲ ಸಂಗಮದಲ್ಲಿನ ನದಿ ಪಾತ್ರವೂ ೧೨ ಮೀಟರ್‌ನಷ್ಟು ಆಳವಿದ್ದು, ಈ ಪೈಕಿ ೮ ಮೀಟರ್‌ನಷ್ಟು ಹೂಳು ತುಂಬಿಕೊAಡಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದರೆ ಅದು ಪ್ರವಾಹಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಕೂಡಲ ಸಂಗಮಕ್ಕೆ ಹತ್ತಿರದಲ್ಲಿ ತಂಗಡಗಿ ಸೇತುವೆ ನಿರ್ಮಿಸಲಾಗಿದ್ದು, ಅಲ್ಲಿಯೂ ಭಾರೀ ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿರುವುದು ಎಲ್ಲ ಆವಾಂತರಗಳಿಗೆ ಕಾರಣ ಎನ್ನಲಾಗಿದೆ. 


 "ಐ"ಹೊಳೆ ಮುಳುಗಿದ್ದು ಇದೇ ಮೊದಲು :  ೮ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಐಹೊಳೆ ೧೨೦೦ ವರ್ಷಗಳ ಇತಿಹಾಸದಲ್ಲಿ ಎಂದಿಗೂ ಮುಳುಗಿರುವ ಉಹಾಹರಣೆ ಇಲ್ಲ.೨೦೧೯ರ ಪ್ರವಾಹ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದಿಂದ ೪೦ ಸಾವಿರ ಕ್ಯೂಸೆಕ್ ನೀರು ಬಿಟ್ಟಾಗಲೇ ಐಹೊಳೆಯಲ್ಲಿ ೧೮ ಮೀಟರ್‌ನಷ್ಟು ನೀರು ನಿಂತಿತ್ತು. ಆದರೆ ಅಧಿಕಾರಿಗಳ ಪ್ರಕಾರ ಇಷ್ಟು ಪ್ರಮಾಣದ ನೀರಿಗೆ ಐಹೊಳೆ ಮುಳುಗಲು ಸಾಧ್ಯವೇ ಇಲ್ಲ. 
 ನಾರಾಯಣಪುರ, ತಂಗಡಗಿ ಹಾಗೂ ಚಿತ್ರದುರ್ಗ-ಸೋಲಾಪುರ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಬೆಳಗಲ್ ಸೇತುವೆಯಲ್ಲಿ ಮಾಡಲಾದ ಮಾರ್ಪಾಡುಗಳ ಇಂಚಿAಚು ಅಧ್ಯಯನ ನಡೆಸಿರುವ ಅಧಿಕಾರಿಗಳು ಪ್ರವಾಹದಿಂದ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಲು ಕಾರಣವಾದ ಲೋಪಗಳನ್ನು ಹೆಕ್ಕಿ ತೆಗೆದಿದ್ದಾರೆ.  ಕೃಷ್ಣಾ ಜಲಭಾಗ್ಯ ನಿಗಮದ ವ್ಯವಸ್ಥಾಪಕರ ಕಚೇರಿಯ ತಾಂತ್ರಿಕ ಸಹಾಯಕ ಸುಧೀರ ಸಜ್ಜನ ಈ ವರದಿಯನ್ನು ಸಲ್ಲಿಸಿದ್ದಾರೆ. 
 ನಾರಾಯಣಪುರ ಜಲಾಶಯದ ಪೂರ್ಣ ಸಂಗ್ರಹಣಾ ಮಟ್ಟ ೪೯೨.೨೫೬ ಮೀಟರ್ ಇದ್ದು, ಸ್ಟೀಲ್‌ವೇ ಮಟ್ಟ ೪೮೦.೨೫ ಮೀಟರ್‌ನಷ್ಟು ಇದೆ. ಸ್ಟೀಲ್‌ವೇ ಮೇಲೆ ೧೨ ಮೀಟರ್ ಎತ್ತರದ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಆಲಮಟ್ಟಿ ಸಮೀಪ ನದಿಯ ತಳಮಟ್ಟ ೪೮೮ ಮೀಟರ್ ನಷ್ಟಿದೆ. ಪ್ರವಾಹದ ಸಮಯದಲ್ಲಿ ಆಣೆಕಟ್ಟಿನ ಗೇಟ್‌ಗಳನ್ನು ಎತ್ತರಿಸಿ ಅಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಿದಲ್ಲಿ ಹಿನ್ನೀರಿನ ಮಟ್ಟವನ್ನು ಆಲಮಟ್ಟಿ ಹತ್ತಿರ ೪೯೨.೨೫೨ ಮೀಟರ್ ಕೆಳಗಡೆ ಕಾಪಾಡಿಕೊಂಡು ಯಾವುದೇ ಗ್ರಾಮಗಳಿಗೆ ನೀರು ಹೋಗದಂತೆ ತಡೆಯಬಹುದು ಎಂಬುದನ್ನು ನಾರಾಯಣಪುರ ಜಲಾಶಯ ನಿರ್ಮಾಣ ಯೋಜನೆಯ ಮೂಲ ವಿನ್ಯಾಸದಲ್ಲಿ ಉಲ್ಲೇಖಿಸಲಾಗಿತ್ತು. 
 ಆದರೆ ತಂಗಡಗಿ ಸೇತುವೆ ಹತ್ತಿರ ತುಂಬಿದ ಹೂಳಿನ ಪರಿಣಾಮವಾಗಿ ಹೂಳಿನಿಂದಾಗಿ ನೀರು ಹರಿದು ಹೋಗದೇ ಇರುವುದರಿಂದ ೨೦೧೯ರ ಆಗಸ್ಟ್ ತಿಂಗಳಿನಲ್ಲಿ ನಾರಾಯಣಪುರ ಜಲಾಶಯದ ೧೨ ಗೇಟ್‌ಗಳನ್ನು ತೆಗೆದು ೪೮೮ ಮೀಟರ್ ಮಟ್ಟದಲ್ಲಿ ನೀರು ಹರಿಸುತ್ತಿದ್ದು, ಸೇತುವೆ ಹಿಂದುಗಡೆ ಅಂದರೆ ಕೂಡಲ ಸಂಗಮದ ಹತ್ತಿರ ೪೯೫ ಮೀಟರ್ ಹಾಗೂ ಆಲಮಟ್ಟಿ ಆಣೆಕಟ್ಟಿನ ಕೆಳಗಡೆ ೫೦೭.೫ ಮೀಟರ್ ಮಟ್ಟದಲ್ಲಿ ನೀರು ನಿಂತಿತ್ತು. ಇದು ನದಿ ತಳಮಟ್ಟದಿಂದ ಸುಮಾರು ೨೦ ಮೀಟರ್ ಎತ್ತರದಷ್ಟು ಹಾಗೂ ಜಲಾಶಯದ ಸಂಗ್ರಹಣ ಮಟ್ಟಕ್ಕಿಂತ ೧೫ ಮೀಟರ್ ಎತ್ತರಕ್ಕೆ ನೀರು ಸಂಗ್ರಹಗೊAಡಿತ್ತು. ತಂಗಡಗಿ ಜಲಾಶಯ ಹಾಗೂ ಒಟ್ಟಾರೆ ನದಿಯ ಹೂಳು ಈ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ. 

  ರಸ್ತೆಗಾಗಿ ಸೇತುವೆಗೆ ಧಕ್ಕೆ...!: ನದಿ ಹರಿಯುವ ವಿಚಾರದಲ್ಲಿ ಬ್ಯಾರೇಜ್, ಬಾಂದಾರ, ಕೆರೆ ಹೀಗೆ ಎಲ್ಲವೂ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ವಿಚಾರದಲ್ಲಿ ಕೊಂಚ ಎಡವಟ್ಟು ಮಾಡಿಕೊಂಡರೂ ಅದು ಸೃಷ್ಠಿಸುವ ಆವಾಂತರ ಮಾತ್ರ ಬಹುದೊಡ್ಡದು. ಜಿಲ್ಲೆಯ ಒಂದೊAದು ಭಾಗದಲ್ಲಿ ಒಂದೊAದು ಸಮಸ್ಯೆಯಿದೆ. ಅನೇಕ ವಿಚಾರದಲ್ಲಿ ಇಲ್ಲ ಯಾವುದೇ ತಪ್ಪುಮಾಡದಿದ್ದರೂ ಪಕ್ಕದ ರಾಜ್ಯಗಳು, ಅಲ್ಲಿನ ನೀತಿಗಳಿಂದಾಗಿಯೂ ನಾವು ಕಷ್ಟ ಅನುಭವಿಸಿರುವ ಉದಾಹರಣೆಗಳಿವೆ. ಕಳೆದ ವರ್ಷ ಸಂಭವಿಸಿದ ಪ್ರವಾಹಕ್ಕೆ ನಿರ್ದಿಷ್ಟ ಕಾರಣ ಉಲ್ಲೇಖಿಸಲು ಸಾಧ್ಯವಿಲ್ಲ. ಆದರೆ ಒಂದೊAದು ಭಾಗದಲ್ಲಿ ಒಂದೊAದು ರೀತಿಯ ಕಾರಣಗಳಿದ್ದು, ಅವುಗಳಿಗೆ ತಜ್ಞರು, ಅಧಿಕಾರಿಗಳು ನೀಡಿರುವ ತಾಂತ್ರಿಕ ಕಾರಣಗಳನ್ನು ಎಳ್ಳಷ್ಟು ನಿರ್ಲಕ್ಷಿಸುವಂತ್ತಿಲ್ಲ. 
 ಕಮತಗಿಯಿಂದ ಹಿಡಿದು ಐಹೊಳೆಯವರೆಗೆ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ೧೪ ಹಳ್ಳಿಗಳಿಗೆ ನೀರು ಹೊಕ್ಕಲು ತಂಗಡಗಿ ಬ್ಯಾರೇಜಿನ ಹೂಳು ಹಾಗೂ ಚಿತ್ರದುರ್ಗ-ಸೋಲಾಪುರ ಹೆದ್ದಾರಿ ರಸ್ತೆಯನ್ನು ಚತುಷ್ಪಥವನ್ನಾಗಿಸುವ ಸಂದರ್ಭದಲ್ಲಿ ಮಾಡಿದ ಎಡವಟ್ಟು ಕೂಡ ಕಾರಣ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. 
  ಈ ಹೆದ್ದಾರಿಗೆ ಹೊಂದಿಕೊAಡAತೆ ಬೆಳಗಲ್ ಬಳಿ ಮಲಪ್ರಭಾ ನದಿಗೆ  ಒಂದು ಸೇತುವೆಯನ್ನು ನಿರ್ಮಿಸಲಾಗಿದ್ದು, ಆರೇಳು ವರ್ಷಗಳ ಹಿಂದೆ ರಸ್ತೆಯನ್ನು ಚತುಷ್ಪತವನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಮತ್ತೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ ಈ ಸೇತುವೆಯ ಬೀಮ್‌ಗಳನ್ನು ತೀರ ಕೆಳಮಟ್ಟದಲ್ಲಿ ನಿರ್ಮಿಸಿ, ಅದರ ತೊಬುಗಳನ್ನು ಚಿಕ್ಕದಾಗಿಸಲಾಗಿದೆ. ಕೆಲವು ತೊಬುಗಳು ಸಂಪೂರ್ಣವಾಗಿ ಮುಚ್ಚಿದ್ದು, ಅದೇ ಸಂದರ್ಭದಲ್ಲಿ ಮಲಪ್ರಭೆಯಿಂದ ಹೆಚ್ಚಿನ ನೀರು ಹರಿಬಿಟ್ಟದ್ದರಿಂದ ಹೆಚ್ಚಿನ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. 
 ೨೦೦೯ರಲ್ಲೂ ಬೆಣ್ಣಿಹಳ್ಳದಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿತ್ತು. ಬೆಣ್ಣೆಹಳ್ಳವು ಮಲಪ್ರಭಾ ನದಿಯನ್ನು ಐಹೊಳೆ ಗ್ರಾಮದ ಪೂರ್ವದಲ್ಲೇ ಸೇರ್ಪಡೆಗೊಂಡಿದ್ದರೂ ಅಂದು ಸಮಸ್ಯೆ ಉಲ್ಭಣಿಸಿರಲಿಲ್ಲ. ೨೦೧೯ರಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಸಮಸ್ಯೆ ಉಲ್ಬಣಗೊಂಡಿತ್ತು. ಬೆಳಗಲ್ ಸೇತುವೆಗೆ ಮಾಡಿದ ಧಕ್ಕೆಯೇ ಇದಕ್ಕೆ ಕಾರಣ ಎಂದು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
 ಮಲಪ್ರಭಾ ನದಿಪಾತ್ರದಲ್ಲಿ ವಿಜಯಪುರ, ಹುಬ್ಬಳ್ಳಿಯನ್ನು ಸಂಪರ್ಕಿಸುವ ಕೊಣ್ಣೂರ ಸೇತುವೆ ಕೂಡ ಅವೈಜ್ಞಾನಿಕವಾಗಿದೆ ಎಂದು ವರದಿ ಹೇಳಿದ್ದು, ಬೆಣ್ಣಿಹಳ್ಳಕ್ಕೆ ನಿರ್ಮಿಸಿರುವ ಸೇತುವೆಗೆ ಒದಗಿಸಲಾಗಿ ತೊಬುಗಳು ಕಡಿಮೆ ಆಗಿವೆ. ನದಿ ಪಾತ್ರಕ್ಕೆ ಅಗಲವಾಗಿಲ್ಲ. ಮಣ್ಣಿನ ಏರಿ ಪ್ರದೇಶವೇ ವಿಸ್ತಾರವಾಗಿದ್ದು, ತೂಬುಗಳನ್ನು ಅಗಲಗೊಳಿಸಿ ಇನ್ನೂ ಹೆಚ್ಚಿನ ತೂಬುಗಳನ್ನು ನಿರ್ಮಿಸಿದ್ದರೆ ರಭಸದ ನೀರು ಸರಳವಾಗಿ ಹೋಗುವುದಲ್ಲದೇ ಅದು ಹೂಳನ್ನು ಕೊಚ್ಚಿಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಈ ಅಂಶವನ್ನು ಸೇತುವೆ ನಿರ್ಮಿಸುವಾಗ ಪರಿಗಣಿಸಿಲ್ಲ. ಅಷ್ಟು ಮಾತ್ರವಲ್ಲ ಹೂಳು ತೆಗೆಯುವುದರಿಂದ ಸಮಸ್ಯೆ ಪರಿಹಾರ ಎಂದು ಭಾವಿಸಲಾಗಿದೆ. ಆದರೆ ಹೂಳು ತೆಗೆಯುವ ಆರ್ಥಿಕ ಸಾಮರ್ಥ್ಯ ಯಾವ ರಾಜ್ಯಕ್ಕೂ ಇಲ್ಲ ಎಂದು ತಾಂತ್ರಿಕ ವರದಿ ಸ್ಪಷ್ಟವಾಗಿ ಹೇಳಿದೆ. 
           



ತಂಗಡಗಿ ಸೇತುವೆ ತೆರವಿನಿಂದ ಪರಿಹಾರ :ಕೂಡಲಸಂಗಮ, ಐಹೊಳೆ, ಕಮತಗಿ ಸೇರಿ ಬಾದಾಮಿ, ಹುನಗುಂದ ಭಾಗದ ಹಲವು ಪ್ರದೇಶಗಳನ್ನು ಪ್ರವಾಹದಿಂದ ಮುಕ್ತಿಗೊಳಿಸಲು ತಂಗಡಗಿ ಸೇತುವೆಯನ್ನು ತೆರವುಗೊಳಿಸಲು ನಿಗಮದ ತಾಂತ್ರಿಕ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ನಾರಾಯಣಪುರ ಜಲಾಶಯ, ತಂಗಡಗಿಯಲ್ಲಿನ ಹೂಳು ತೆವುಗೊಳಿಸಿ, ಬೆಳಗಲ್ ಸೇತುವೆಯನ್ನು ಎತ್ತರಿಸುವುದರಿಂದ ಪ್ರವಾಹ ತಡೆಯಲು ಸಾಧ್ಯವಿಲ್ಲ. ಅದರ ಬದಲಾಗಿ ತಂಗಡಗಿ ಸೇತುವೆಯನ್ನು ತೆರವುಗೊಳಿಸಿ ಕೂಡಲ ಸಂಗಮದ ಹಿಂದುಗಡೆಯೇ ಮತ್ತೊಂದು ಸೇತುವೆಯನ್ನು ನಿರ್ಮಿಸಬೇಕು. ಇದರಿಂದಾಗಿ ಪ್ರವಾಹ ಸಂದರ್ಭದಲ್ಲಿ ಗೇಟ್‌ಗಳನ್ನು ತೆರೆದಿಟ್ಟರೆ ಹೂಳು ಹರಿದುಕೊಂಡು ಹೋಗುತ್ತದೆ ಎಂಬುದು ವರದಿಯ ಸಾರಾಂಶವಾಗಿದೆ. ಹೀಗೆ ಮಾಡಿದಲ್ಲಿ ಅಲಮಟ್ಟಿ ಜಲಾಶಯದಿಂದ ಬರುವ ನೀರು ನಾರಾಯಣಪುರ ಜಲಾಶಯಕ್ಕೆ ಸರಾಗವಾಗಿ ಹರಿದುಕೊಂಡು ಹೋಗುತ್ತದೆ. ಕೂಡಲ ಸಂಗಮ ದೇಗುಲ, ಐಹೊಳೆ ಮುಳುಗುವುದು ಸಹ ತಪ್ಪುತ್ತದೆ. ಮುದ್ದೇಬಿಹಾಳ ತಾಲೂಕಿನ ೧೪ ಹಳ್ಳಿಗಳು ಮುಳುಗುವುದನ್ನು ತಪ್ಪಿಸಬಹುದಾಗಿದ್ದು, ಒಂದೊಮ್ಮೆ ನಾರಾಯಣಪುರ ಜಲಾಶಯದಲ್ಲಿ ಸಂಗ್ರಹಣೆಯಾಗಿರುವ ಹೂಳು ಕೊಚ್ಚಿಕೊಂಡು ಹೋದರೆ ಅದರ ಸಾಮರ್ಥ್ಯವು ಅಂದಾಜು ೧೦ ಟಿಎಂಸಿಯಷ್ಟು ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ.