Follow Up: ಮರ್ಯಾದಾ ಹತ್ಯೆ: ಕೊನೆ ಬಾರಿ ಪ್ರೇಮಿಗಳು ಮುಖಾಮುಖಿ ಆಗಿದ್ದು ಹೆಣವಾದಮೇಲೆ..!

Follow Up: ಮರ್ಯಾದಾ ಹತ್ಯೆ: ಕೊನೆ ಬಾರಿ ಪ್ರೇಮಿಗಳು ಮುಖಾಮುಖಿ ಆಗಿದ್ದು ಹೆಣವಾದಮೇಲೆ..!


ಬಾಗಲಕೋಟೆ:
ಬೇವಿನಮಟ್ಟಿ ಗ್ರಾಮದ ಅಪ್ರಾಪ್ತೆ ಮತ್ತು ವಿಶ್ವನಾಥನ ಕೊಲೆ ಪ್ರಕರಣ ಅತ್ಯಂತ ಭಯಂಕರವಾಗಿ ನಡೆದಿದೆ. 

ಕಾಸರಗೂಡಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವಿಶ್ವನಾಥನಿಗೆ ನೆಲಗಿ ಅಪ್ರಾಪ್ತೆಯ ಮೂಲಕ ಕರೆ ಮಾಡಿಸಿದ ಆಕೆ ಕುಟುಂಬಸ್ಥರು ನರಗುಂದಕ್ಕೆ ಬಂದರೆ ಅಲ್ಲಿಯೇ ಮದುವೆ ಮಾಡಿಸಿ ಜತೆಗೆ ಕಳುಹಿಸುವುದಾಗಿ ಹೇಳಿದ್ದಾರೆ.

(ಕೊಲೆಯಾದ ವಿಶ್ವನಾಥ‌‌ ನೆಲಗಿ)

ಸೆ.೩೦ರ ರಾತ್ರಿ ಆತ ಬರುವುದನ್ನೇ‌ ಕಾಯುತ್ತ ನಿಂತಿರುವ ಆರೋಪಿಗಳು ,ಅವನನ್ನು ಅಪಹರಿಸಿ ವಾಹನದಲ್ಲಿ ಎತ್ತಿಹಾಕಿದ್ದಾರೆ.

ಇತ್ತ ಮತ್ತೊಂದು ವಾಹನದಲ್ಲಿದ್ದ ಅಪ್ರಾಪ್ತೆ ಜತೆಗೆ ನಾಜೂಕಾಗಿಯೇ ಮಾತಾಡಿಸುತ್ತಿದ್ದ ಆರೋಪಿಗಳು ವಿಶ್ವನಾಥ ಮತ್ತೊಂದು ತಂಡಕ್ಕೆ‌ ಸಿಕ್ಕಿರುವುದು ಖಚಿತವಾಗುತ್ತಿದ್ದಂತೆ ತಮ್ಮ ವರಸೆ ಬದಲಾಯಿಸಿ ಆತನನ್ನು ಮರೆಯುವಂತೆ ಟಾರ್ಚರ್ ಮಾಡಿದ್ದಾರೆ. ಆಕೆ ಒಪ್ಪದಿದ್ದಾಗ ಬಟ್ಟೆಯಿಂದ ಆಕೆಯ ಕತ್ತು ಹಿಸುಕಿ ಕೊಲೆ‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದು ವಾಹನದಲ್ಲಿದ್ದ ಆರೋಪಿಗಳು ವಿಶ್ವನಾಥನ ಮರ್ಮಾಂಗಕ್ಕೆ ಹೊಡೆದಿದ್ದಾರೆ ಎನ್ನಲಾಗಿದ್ದು, ಆಗಲೂ ಆತ ಸಾಯದಿದ್ದಾಗ ಕಲ್ಲಿನಿಂದ ಜಜ್ಜಿದ್ದಾರೆ ಎಂದು ಹೇಳಲಾಗಿದೆ.

ನಂತರ ಆರೋಪಿಗಳು ಸಾಕ್ಷಿ ನಾಶಕ್ಕಾಗಿ ಅರೆನಗ್ನಾವಸ್ತೆಯಲ್ಲಿ ಎರಡೂ ಶವಗಳನ್ನು ನದಿಗೆ ಬಿಸಾಡಿದ್ದು, ಶವಗಳು ಈವರೆಗೆ ಪತ್ತೆಯಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಇನ್ನುಳಿದ ನಾಲ್ವರ ಬಂಧನವಾಗಬೇಕಿದೆ.

ಮಗಳ ಅಪಹರಣದ ಕತೆ ಕಟ್ಟಿದ್ದ ಅಪ್ಪನೇ ಇಲ್ಲಿ ಮಗಳು ಹಾಗೂ ಆಕೆಯ ಪ್ರಯಕರನಿಗೆ ಮುಹೂರ್ತ ಇಟ್ಟಿದ್ದು, ಮೊಬೈಲ್ ಕಾಲ್ ಡಿಟೇಲ್ಸ್ ಮೂಲಕ ಪೊಲೀಸರಿಗೆ ಸುಳಿವು ಸಿಕ್ಕ ನಂತರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದವರಿಸಿದ್ದಾರೆ.