ಬವಿವ ಸಂಘದ ಅಧ್ಯಕ್ಷ, ಹಾಲಕೆರೆ ಶ್ರೀಗಳು ಲಿಂಗೈಕ್ಯ: ಸಿಎಂ ಸೇರಿ ಗಣ್ಯರ ಕಂಬನಿ
ಬಾಗಲಕೋಟೆ:
ಬ.ವಿ.ವ ಸಂಘದ ಗೌರವಾನ್ವಿತ ಅಧ್ಯಕ್ಷರು,ಶಿವಯೋಗ ಮಂದಿರ ವಿಶ್ವಸ್ಥ ಮಂಡಳಿ ಅದ್ಯಕ್ಷರು,ಹಾಲಕೇರೆ ಶ್ರೀ ಅಭಿನವ ಅನ್ನದಾನೇಶ್ವರ ಶ್ರೀ ಸಂಗನಬಸವ ಮಹಾಸ್ವಾಮಿಗಳು ಸೋಮವಾರ ನಸುಕಿನ ಜಾವ ಲಿಂಗೈಕ್ಯರಾದರು,ಬೆಂಗಳೂರನ ಅಪೋಲೊ ಆಸ್ಪತ್ರೆಯಲ್ಲಿ ಹ್ರದಯಸಂಬಂಧಿ ಶಸ್ತ್ರಚಿಕಿತ್ಸೆ ನಡಸಲಾಗಿತ್ತು ಅದು ಫಲಕಾರಿಯಾಗದೆ ಅಗಲಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದರು,ಪಾರ್ಥಿವ ಶರೀರ ಬಳ್ಳಾರಿ,ಹೊಸಪೇಟೆ ಮಾರ್ಗವಾಗಿ ರೋಣ ತಾಲೂಕಿನ ಹಾಲಕೇರಿ ತಲುಪಲಿದ್ದು ಅವರ ಸದಿಚ್ಛೆಯಂತೆ ಅಲ್ಲಿಯೇ ಅಂತಿಮ ಕ್ರೀಯಾದಿಗಳು ನಡೆಯಲಿವೆ.
ಬದಾಮಿ,ಬಾಗಲಕೋಟೆ, ಶಿವಯೋಗ ಮಂದಿರ,ನಂದಿಕೇಶ್ವರದಲ್ಲಿ ಶೋಕ ಮಡುಗಟ್ಟಿದೆ,ಗಟ್ಟಿನಿಲುವಿನ ಮಠಾಧಿಪತಿ,ಅಪೂರ್ವ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ಬ.ವಿ.ವ ಸಂಘದ ಕಾರ್ಯಾಧ್ಯಕ್ಷ,ಶಾಸಕ ಡಾ.ವೀರಣ್ಣ ಚರಂತಿಮಠ ಕಂಬನಿ ಮಿಡಿದಿದ್ದಾರೆ.