ಮತದಾರರಿಂದ ಮತ್ತೊಮ್ಮೆ ಸೇವೆಗೆ ಅವಕಾಶ- ಶಿವಾನಂದ ಉದುಪುಡಿ ವಿಶ್ವಾಸ

ಬ್ಯಾಂಕ್ ಉಪಾಧ್ಯಕ್ಷನಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ಮರು ಬಯಕೆ ಬಯಸಿರುವ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಮತದಾರರಿಂದ ಮತ್ತೊಮ್ಮೆ ಸೇವೆಗೆ ಅವಕಾಶ- ಶಿವಾನಂದ ಉದುಪುಡಿ ವಿಶ್ವಾಸ

ನಾಡನುಡಿ ನ್ಯೂಸ್
ಬಾಗಲಕೋಟೆ ನ.೨:
ಸಹಕಾರಿ ಕ್ಷೇತ್ರದಲ್ಲಿನ ನನ್ನ ಹೋರಾಟ, ಕೊಡುಗೆಗಳನ್ನು ಮತದಾರರು ಗಮನಿಸಿದ್ದು, ನನ್ನ ಗೆಲವು ನಿಶ್ಚಿತ ಎಂದು ಡಿಸಿಸಿ ಬ್ಯಾಂಕ್ ಹಾಲಿ ಉಪಾಧ್ಯಕ್ಷ, ಪಟ್ಟಣ ಸಹಕಾರಿ ಮತ್ತು ಬಿನ್ ಶೇತ್ಕಿ ಸಹಕಾರಿ ಸಂಘಗಳ ಅಭ್ಯರ್ಥಿ ಶಿವಾನಂದ ಉದುಪುಡಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಚಾರದ ವೇಳೆ ನನಗೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲ ಸಹಕಾರಿ ಬ್ಯಾಂಕುಗಳು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

೧೭೧ ಸಂಘಗಳ ಅರ್ಹತೆ ಹೊಂದಿದವು, ೯೪ ಸಂಘಗಳಿಗೆ ನಾನು ಮತದಾನ ಅರ್ಹತೆ ಧಕ್ಕಿಸಿಕೊಟ್ಟಿದ್ದೇನೆ ಎಂದು‌ ಹೇಳಿದರು.

ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳ ಸಾಲ ವಸೂಲಾತಿಗೆ ಒಂದು ಒಕ್ಕಟವನ್ನೂ ರಚಿಸಲಾಗಿದೆ. ರಾಜ್ಯದಲ್ಲೇ ಇದು ಅಪರೂಪ. ೧ ಕೋಟಿ ರೂ.ಗಳ ಲಾಭದಲ್ಲಿ ಸಂಸ್ಥೆ ಇದೆ ಎಂದರು.
ಜಿಲ್ಲೆಯ ೪೯ ಸಂಘಗಳಿಗೆ ತಲಾ ೨ ಲಕ್ಷ ರೂ.ಗಳಂತೆ ಕಟ್ಟಡ ನಿಧಿಯನ್ನು ಕೊಡಿಸಿದ್ದೇನೆ.ಅದನ್ನು ೫ ಲಕ್ಷಕ್ಕೆ ಹೆಚ್ಚಿಸುವ ಗುರಿಯಿದೆ. ನಬಾರ್ಡ್ ಮೂಲಕ ಕಡಿಮೆ ಬಡ್ಡಿಯಲ್ಲಿ ಹಣ ಕೊಡಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

ಇದಲ್ಲದೇ ೨೫ ಸಂಘಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ತಲಾ ೨.೫೦ ಲಕ್ಷ ರೂ.ಗಳವರೆಗೆ ಸಹಾಯಧನ ಒದಗಿಸುವುದಾಗಿ ತಿಳಿಸಿದರು.

ರವೀಂದ್ರ ಕಲಬುರಗಿ ಉಪಸ್ಥಿತರಿದ್ದರು