ನರೇಗಾ ಅಡಿ ಮಾನವ ದಿನಗಳನ್ನು ಹೆಚ್ಚಿಸಿ- ಗ್ರಾಮೀಣ ಕೂಲಿ ಕಾರ್ಮಿಕರ ಆಗ್ರಹ
ನಾಡನುಡಿ ನ್ಯೂಸ್
ಬಾಗಲಕೋಟೆ:
ಉದ್ಯೋಗ ಖಾತರಿ ಕಾನೂನಿನ ಅಡಿಯಲ್ಲಿ ಮಾನವ ದಿನಗಳನ್ನು ೨೦೦ ದಿನಕ್ಕೆ ಹೆಚ್ಚಿಸುವುದರ ಜತೆಗೆ ಆಹಾರಧಾನ್ಯ ವಿತರಣೆಯನ್ನು ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನವನಗರದ ಜಿಲ್ಲಾಡಳಿತ ಭವನದೆದುರು ಪ್ರತಿಭಟನೆ ನಡೆಸಿತು.
ಲಾಕ್ಡೌನ್ ಮತ್ತು ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ಗ್ರಾಮಗಳಿಗೆ ಮರಳಿದ್ದಾರೆ. ಈಗಾಗಲೇ ೧೦೦ ಮಾನವ ದಿನಗಳು ಪೂರ್ಣಗೊಂಡಿದ್ದು, ಈಗಲೇ ಅದನ್ನು ೨೦೦ ದಿನಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ರೇಷನ್ ನಲ್ಲಿ ಇನ್ನೂ ಆರು ತಿಂಗಳ ಕಾಲ ಹೆಚ್ಚಿನ ೫ ಕೆಜಿ ಆಹಾರಧಾನ್ಯ ವಿತರಣೆಯನ್ನು ಮುಂದವರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.