ಬಿಜೆಪಿಯಿಂದ ಸುಳ್ಳಿನ ಮನೆ ನಿರ್ಮಾಣ  : ಮೇಟಿ ಟೀಕೆ

      ಬಿಜೆಪಿಯಿಂದ ಸುಳ್ಳಿನ ಮನೆ ನಿರ್ಮಾಣ  : ಮೇಟಿ ಟೀಕೆ


    
ಬಾಗಲಕೋಟ : ಭಾರತೀಯ ಜನತಾ ಪಕ್ಷ ಅಂದರೆ, ಅದೊಂದು ಸುಳ್ಳಿನ ಸುಂದರವಾದ ಮನೆ. ಅಲ್ಲಿ ಯಾರಿಗೂ ಗೌರವವಿಲ್ಲ. ಹೀಗಾಗಿ ಹಲವಾರು ಹಿರಿಯ ನಾಯಕರೇ ಇಂದು ಕಾಂಗ್ರೆಸ್ ಪಕ್ಷದತ್ತ ಬರುತ್ತಿದ್ದಾರೆ. ಈ ಬಾರಿ ಚುನಾವಣೆಲ್ಲಿ ಸುಳ್ಳಿನ ಮನೆಯಾಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಾಗಲಕೋಟ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ. ಮೇಟಿ ಟೀಕಿಸಿದರು.
ತಾಲೂಕಿನ ಮುಚಖಂಡಿ ತಾಂಡಾದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ, ಜನತೆಗೆ ಭರವಸೆ ನೀಡಿತ್ತು. ಯಾವ ಭರವಸೆಯೂ ಇಡೇರಿಸದೇ ಜನತೆಗೆ ಮೋಸ ಮಾಡಿದೆ. ಪ್ರವಾಹ, ಕೊರೊನಾದಿಂದ ಸಂಕಷ್ಟದಲ್ಲಿ ಇರುವ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿಕೊಂಡರೆ, ಆ ಪಕ್ಷದ ಸಂಸದರೊಬ್ಬರು, ರೈತರಿಗೇ ಅವಮಾನ ಮಾಡುವ ರೀತಿ ಮಾತನಾಡಿದ್ದಾರೆ. ಆದರೆ, ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದೆ. ಉದ್ಯಮಿಗಳ ಸಾಲ ಮನ್ನಾ ಮಾಡಿದರೆ ಬಡವರ ಹೊಟ್ಟೆ ತುಂಬುತ್ತದೆಯೇ ಎಂದು ಪ್ರಶ್ನಿಸಿದರು.
ಕಳೆದ ಬಾರಿ ನನ್ನ ಅಧಿಕಾರದ ಅವಧಿಯಲ್ಲಿ ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಚಖಂಡಿ ತಾಂಡಾ-೧ ರಲ್ಲಿ ೭೫ ಲಕ್ಷ ರೂ.ನಲ್ಲಿ ರಸ್ತೆ ಡಾಂಬರೀಕರಣ, ದುರ್ಗಾದೇವಿ ದೇವಸ್ಥಾನದಿಂದ ತಾಂಡಾ ವರೆಗೆ ೨೦ ಲಕ್ಷ ರೂ.ನಲ್ಲಿ ಸಿಸಿ ರಸ್ತೆ ನಿರ್ಮಾಣ, ವಿವಿಧೆಡೆ ೪೦ ಲಕ್ಷ ರೂ.ನಲ್ಲಿ ಸಿಸಿ ರಸ್ತೆ ನಿರ್ಮಾಣ, ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ೫೦ ಲಕ್ಷ ಅನುದಾನ ನೀಡಿದ್ದೇನೆ. ಗ್ರಾಮದ ೬೦ ಜನ ಫಲಾನುಭವಿಗಳಿಗೆ ಆಶ್ರಯ ಮನೆ ಮಂಜೂರು ಮಾಡಿದ್ದೇನೆ. ೨೦ ಜನರಿಗೆ ಸೋಲಾರ ದೀಪ, ೨೨ ಜನರಿಗೆ ಎಲ್‌ಪಿಜಿ ಗ್ಯಾಸ್ ಮತ್ತು ಒಲೆ ವಿತರಿಸಿದ್ದು, ಗ್ರಾಮದಲ್ಲಿ ಹೈಮಾಸ್ಕ ಕಂಬ ಹಾಗೂ ದೀಪ ಅಳವಡಿಕೆ ಮಾಡಲಾಗಿದೆ. ಇಂತಹ ಹಲವಾರು ಯೋಜನೆಗಳ ಮೂಲಕ ತಾಂಡಾ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ವಿವರಿಸಿದರು.
ಅಲ್ಲದೇ ಮುಚಖಂಡಿ ತಾಂಡಾ-೨ರಲ್ಲಿ ನನ್ನ ಅವಧಿಯಲ್ಲಿ ಸಿಸಿ ರಸ್ತೆ ಅಭಿವೃದ್ಧಿಗಾಗಿ ೨ ಕೋಟಿಯಷ್ಟು ಅನುದಾನ ನೀಡಿದ್ದೇನೆ.  ಆದರೆ, ಬಿಜೆಪಿ ಸರ್ಕಾರದಿಂದ ತಾಂಡಾ ಅಭಿವೃದ್ಧಿಗಳು ಕೂಂಠಿತಗೊAಡಿದ್ದು, ಈ ಬಾರಿ ನನ್ನ ಮೇಲೆ ವಿಶ್ವಾಸವಿಟ್ಟ ಮತ ನೀಡಿ ಗೆಲ್ಲಿಸಿ. ತಾಂಡಾ ಅಭಿವೃದ್ಧಿಗೆ ಶ್ರಮಿಸುವೆ ಎಂದು ಮನವಿ ಮಾಡಿದರು. ಇದೇ ವೇಳೆ ಮುಚಖಂಡಿ ತಾಂಡಾದ ಹಲವಾರು ಪ್ರಮುಖರು ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. 
ಭೈರಮಟ್ಟಿ ಗ್ರಾಮಸ್ಥರು ಕಾಂಗ್ರೆಸ್ ಸೇರ್ಪಡೆ :ಭೈರಮಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ೧೦೦ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತರನ್ನು ಹಾಗೂ ರೆಡ್ಡಿ ಸಮುದಾಯದ ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾದರು.
ಮುಖಂಡರಾದ ಬಸವಂತಪ್ಪ ಮೇಟಿ, ಸಂಗಮೇಶ ದೊಡ್ಡಮನಿ, ನಿಂಗಪ್ಪ ಕೋಟಿ, ಲಕ್ಷö್ಮಣ್ಣಾ ದಡ್ಡಿ, ಜೆಟ್ಟೆಪ್ಪ ಮಾದಾಪೂರ, ಗುರುಬಸಪ್ಪ ವಡ್ರಕಲ್, ಪ್ರಭು ಅಳವಂಡಿ, ಮಲ್ಲಣ್ಣಾ ಬಳೂಲದ, ಬಸವರಾಜ ಬಳಲೂದ, ಗೌಡಪ್ಪ ವಡ್ರಕಲ್, ಯಂಕಣ್ಣಾ ಗೌಡರ, ಶಂಕರಗೌಡ ಹಳ್ಳೂರ, ಬಸವಂತಪ್ಪ ಹಣಸನಗೌಡರ, ಯಂಕಣ್ಣ ಕುರಹಟ್ಟಿ, ಯಂಕಣ್ಣ ಭರಮಗೌಡರ, ಮಲ್ಲಣ್ಣ ಭರಮಗೌಡರ ಸೇರಿದಂತೆ ಹಲವರು ಇದ್ದರು. ರೆಡ್ಡಿ ಸಮುದಾಯದ ಪ್ರಮುಖ ಕಲ್ಲು ಹಳ್ಳೂರ ಸಮ್ಮುಖದಲ್ಲಿ ೫೦ ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸೆಕ್ಟರ್ ನಂ.೪೬ರ ಪ್ರಮುಖರು ಸೇರ್ಪಡೆ :ನವನಗರದ ಸೆಕ್ಟರ್ ನಂ.೪೬ ನೂರಾರು ಯುವಕರು, ಹಿರಿಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಎಚ್.ವೈ. ಮೇಟಿ ಅವರು, ಪಕ್ಷಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.