ಕಾವೇರಿ-೨ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಿ: ಭಾಂಡಗೆ
ಬಾಗಲಕೋಟೆ:
ಕಾವೇರಿ-೨ ತಂತ್ರಾoಶ ಅನುಷ್ಠಾನಗೊಳಿಸಿ ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿರುವುದರಿಂದ ಬಾಗಲಕೋಟೆ ನವನಗರದ ಸಂತ್ರಸ್ತರಿಗೆ ತೊಂದರೆಯುoಟಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ದೂರಿದ್ದಾರೆ.
ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿರುವ ಅವರು ಬಾಗಲಕೋಟೆಯ ನವನಗರದಲ್ಲಿ ಮನೆ, ನಿವೇಶನಗಳಿಗೆ ನಗರಸಭೆಯಿಂದ ಖಾತಾ ಆಗಲಿ, ಪಿಐಡಿ ಸಂಖ್ಯೆಯನ್ನಾಗಲಿ ನೀಡಿಲ್ಲ. ನವನಗರವನ್ನು ಬಿಟಿಡಿಎಯಿಂದ ನಿರ್ವಹಣೆ ಆಗುತ್ತಿದ್ದು, ಇ ಆಸ್ತಿ ನೋಂದಣಿಗೆ ಬೇಕಾದ ದಾಖಲೆಗಳು ಸೃಷ್ಟಿಯಾಗಿರುವುದಿಲ್ಲ. ಸ್ಥಳೀಯ ಸಂಸ್ಥೆಗಳು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದ್ದು, ಅಲ್ಲಿಯವರೆಗೆ ಕಾವೇರಿ-೨ ಕಡ್ಡಾಯ ಆದೇಶದಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕಾವೇರಿ-೨ ಅನುಷ್ಠಾನದಿಂದಾಗಿ ನವನಗರದಲ್ಲಿ ನಿವೇಶನಗಳ ಮಾರಾಟ, ಖರೀದಿ ಸ್ಥಗಿತಗೊಂಡಿದ್ದು, ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯವನ್ನೂ ಪಡೆಯದಂತ ಸ್ಥಿತಿ ಉಂಟಾಗಿದೆ. ಕೂಡಲೇ ಈ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.