ರಾಮಣ್ಣ ತಳೇವಾಡ ಸೇರಿ ೭ ಜನ ಬಿಜೆಪಿಯಿಂದ ಉಚ್ಚಾಟನೆ
ಬಾಗಲಕೋಟೆ:
ಮುಧೋಳ ನಗರಸಭೆಯಲ್ಲಿ ಬಹುಮತವಿದ್ದರೂ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗದ ಕಾರಣ ರಾಮಣ್ಣ ತಳೇವಾಡ ಸೇರಿದಂತೆ ಪಕ್ಷದ ೭ ಮುಖಂಡರನ್ನು ಉಚ್ಚಾಟಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಮುಖಂಡರಾದ ಬಸವರಾಜ ಮಾನೆ, ಪುಂಡಲೀಕ ಭೋವಿ, ನಗರಸಭೆ ಸದಸ್ಯರಾದ ಸುರೇಶ ಕಾಂಬಳೆ, ಸುನೀತಾ ಭೋವಿ, ಪಾರ್ವತೆವ್ವ ಹರಗಿ, ಸದಾಶಿವ ಜೋಶಿ ಅವರನ್ನು ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗನಗೌಡ ಕಾತರಕಿ, ನಗರ ಘಟಕದ ಅಧ್ಯಕ್ಷ ಕರಬಯ್ಯ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.