ಲಡ್ಡುಮುತ್ತಾö್ಯ ಹೆಸರು ಬಳಸದಂತೆ ಭಕ್ತಮಂಡಳಿ ಮನವಿ

ಲಡ್ಡುಮುತ್ತಾö್ಯ ಹೆಸರು ಬಳಸದಂತೆ ಭಕ್ತಮಂಡಳಿ ಮನವಿ
ಬಾಗಲಕೋಟೆ : ಮಹಾಮಹಿಮ ಶ್ರೀ ಲಡ್ಡು ಮತ್ತಾö್ಯರರ ಹೆಸರು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದನ್ನು ನಿಲ್ಲಿಸಬೇಕೆಂದು ಲಡ್ಡುಮುತ್ತಾö್ಯ ಭಕ್ತಮಂಡಳಿ ಎಚ್ಚರಿಸಿದೆ. 
೧೯೯೩ ರಲ್ಲಿ ದೇಹ ತ್ಯಾಗ ಮಾಡಿದ ಶ್ರೀ ಲಡ್ಡುಮುತ್ಯಾರವರ ಗದ್ದುಗೆಯನ್ನು ಬಾಗಲಕೋಟೆಯ ಹತ್ತಿರದ ಸೀಮಿಕೇರಿಯಲ್ಲಿ ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರವಾಗಿ ನೆಲೆ ನಿಂತಿದೆ.  ಬಾಗಲಕೋಟೆಯಲ್ಲಿ ನೆಲೆಸಿದ್ದ ಲಡ್ಡುಮುತ್ತಾರು ಪವಾಡಗಳ ಮೂಲಕ ಪ್ರಸಿದ್ದಿ ಪಡೆದಿದ್ದರು. ಬಾಗಲಕೋಟೆ ಹಾಗೂ ಸುತ್ತಮುತ್ತ ಅವರಿಗೆ ಅಸಂಖ್ಯಾತ ಭಕ್ತರಿದ್ದಾರೆ. ಇತ್ತೀಚೆಗೆ ಶ್ರೀ ಲಡ್ಡುಮುತ್ತಾರ ಅವತಾರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ತಿರುಗುವ ಫ್ಯಾನ್ ನಿಲ್ಲಿಸುವುದನ್ನು ಪವಾಡ ಎಂದು ಬಿಂಬಿಸಿ ಅದನ್ನು ಟ್ರೋಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 
"ಲಡ್ಡು ಮುತ್ತಾö್ಯನ ಅವತಾರ ಈಗಿನ ಸಂಚಾರಿ ದೇವರ" ಹಾಡು ಬಳಸಿ ಟ್ರೋಲ್ ಮಾಡಲಾಗುತ್ತಿದೆ. ಆದ್ದರಿಂದ ಸಂಬAಧಿಸಿದ ವ್ಯಕ್ತಿಗಳಿಗೆ ಟ್ರೋಲ್ ನಿಲ್ಲಿಸುವಂತೆ ಶ್ರೀಲಡ್ಡುಮುತ್ಯಾ ಭಕ್ತ ಮಂಡಳಿ ಎಚ್ಚರಿಕೆಯನ್ನು ನೀಡಿದೆ. 
ಶ್ರೀ ಲಡ್ಡುಮುತ್ಯಾರವರ ಆಶ್ರಮಕ್ಕೆ ಯಾವುದೇ ಸ್ವಾಮೀಜಿ ಅಥವಾ ಉತ್ತರಾಧಿಕಾರಿ ಎಂದು ಯಾರನ್ನೂ ನೇಮಿಸಿಲ್ಲ ಟ್ರಸ್ಟ್ ಮಾಡಿಕೊಂಡು ಸಂಸ್ಥೆಯನ್ನು ಶ್ರೀ ಲಡ್ಡುಮುತ್ಯಾ ಭಕ್ತ ಮಂಡಳಿ ಮುನ್ನಡೆಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಷಣ್ಮುಕಪ್ಪ ವಿ.ಹದ್ಲಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಸಕ್ರೋಜಿ, ಖಚಾಂಚಿ ಕುಮಾರ ಸಜ್ಜನ ಪ್ರಕಟಣೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.