ಜನರ ನೆಮ್ಮದಿಗೆಡಿಸಿದ್ದ ಕಳ್ಳ ಅಂದರ್..!

ಜನರ ನೆಮ್ಮದಿಗೆಡಿಸಿದ್ದ ಕಳ್ಳ ಅಂದರ್..!


ಬಾಗಲಕೋಟೆ:
ನಗರದ ವಿದ್ಯಾಗಿರಿ ಹಾಗೂ ನವನಗರಗಳಲ್ಲಿ ನಿರಂತರ ಕಳ್ಳತನದ ಮೂಲಕ ಕೈಚೆಳಕ ತೋರುತ್ತಿದ್ದ ಅಂತರ್‌ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಲಾಪುರ ಜಿಲ್ಲೆ ಗಿಡಂಗಲಾಜ್ ತಾಲೂಕಿನ ಹಲಕರಣಿ ಗ್ರಾಮದ ಅಜಿತ ಶಿವರಾಯ ಧನಗರ ಬಂಧಿತ ಆರೋಪಿ.
ಈತ ನವನಗರದ ವಾಂಬೆ ಕಾಲೋನಿ, ವಿದ್ಯಾಗಿರಿ ಹಾಗೂ ರೂಪ್‌ಲ್ಯಾಂಡ್‌ಗಳಲ್ಲಿ ನಡೆದ ಕಳ್ಳತನಗಳಲ್ಲಿ ಭಾಗಿಯಾಗಿದ್ದ. ಬಂಧಿತನಿAದ ೧೮೦ ಗ್ರಾಂ ಚಿನ್ನ ಹಾಗೂ ೭೦೦ ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಿದ್ದರಿಂದ ಜನ ಭೀತಿಗೆ ಒಳಗಾಗಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ವೈ.ಅಮರನಾಥ ರೆಡ್ಡಿ ಅವರು ನವನಗರ ಸಿಪಿ ಆರ್.ಎಸ್.ಬಿರಾದಾರ, ಪಿಎಸ್‌ಐಗಳಾದ ಕುಮಾರ ಹಿತ್ತಲಮನಿ, ಎನ್.ಪಿ.ನಿಂಗನೂರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ತಂಡ ಆರೋಪಿಯನ್ನು ಪತ್ತೆ ಮಾಡಿದ್ದು ಎಎಸ್‌ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ, ಡಿಎಸ್‌ಪಿ ಪಂಪನಗೌಡ ಅವರ ಮಾರ್ಗದರ್ಶನದಲ್ಲಿ ಕಳುವಾಗಿದ್ದ ಚಿನ್ನಾಭರಣ ವಶಪಡಿಸಿಕೊಂಡಿದೆ.
ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ಎಂ.ಎA.ಬೆಳ್ಳುಬ್ಬಿ, ಕೆ.ಎನ್.ದಂದರಗಿ, ಎಲ್.ಆರ್.ನದಾಫ್, ಮಂಜು ಸಂಗೋದಿ, ಎಸ್.ಬಿ.ಸೇಬಗೊಂಡ, ಎಸ್.ಎಸ್.ನಿಂಗೋಳ್ಳಿ, ವೈ.ಎಚ್.ಭಗವತಿ, ಎಲ್.ಎಸ್.ತೆಗ್ಗಿ, ಜೆ.ಬಿ.ಮೈಘೂರ, ಜೆ.ಎಲ್.ದಳವಾಯಿ, ಎಸ್.ಪಿ.ಲಮಾಣಿ ಮತ್ತಿತರರು ಇದ್ದರು. ತನಿಖಾ ತಂಡದ ಕಾರ್ಯವನ್ನು ಎಸ್‌ಪಿ ಅಮರನಾಥ ರೆಡ್ಡಿ ಶ್ಲಾಘಿಸಿದ್ದಾ