ಸಿಡಿಲಿಗೆ ಬಾಲಕಿ ಬಲಿ
ನಾಡನುಡಿ ನ್ಯೂಸ್
ಬಾಗಲಕೋಟೆ:
ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ೮ ವರ್ಷದ ಬಾಲಕಿ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಬೋದೂರ ಮೂಲದ ಮಲ್ಲಮ್ಮ ಕೋರಕೇರಿ(೮) ಮೃತ ಬಾಲಕಿ. ಇನ್ನಿಬ್ಬರಾದ ಧ್ಯಾಮವ್ವ ಗೋತಗಿ ಹಾಗೂ ಮಲ್ಲಮ್ಮ ಕನಕೇರಿ ಅವರಿಗೆ ಗಾಯಗಳಾಗಿದ್ದು ಇಳಕಲ್ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತ ಬಾಲಕಿ ಮಲ್ಲಮ್ಮ ರಜೆ ಹಿನ್ನೆಲೆಯಲ್ಲಿ ಅಜ್ಜಿಯ ಊರಿಗೆ ಬಂದಿದ್ದಳು.
ಇಳಕಲ್ ಗ್ರಾಮೀಣ ಠಾಣೆ ಪಿಎಸ್ಐ
ಬಸವರಾಜ ತಿಪ್ಪಾರೆಡ್ಡಿ ಸ್ಥಳ ವೀಕ್ಷಣೆ ನಡೆಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.