ಪೊಲೀಸ್ ಎಂದರೆ ಭಯ ಬೇಡ : ಅಮರನಾಥ ರೆಡ್ಡಿ

ಪೊಲೀಸ್ ಎಂದರೆ ಭಯ ಬೇಡ : ಅಮರನಾಥ ರೆಡ್ಡಿ
ಬಾಗಲಕೋಟೆ : ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿ ಹೊರತು ಜನರಿಗೆ ಭಯ ಹುಟ್ಟಿಸಲು ಅಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.
ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪ್ರಧಾನವಾಗಿದ್ದರಿಂದ ಹಿರಿಯರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸದೇ ಕೃಷಿ ಮಾಡಿಕೊಂಡು ಬರುತ್ತಿದ್ದುದರಿಂದ ಮುತ್ತಾತ, ಅಜ್ಜನ ಕಾಲದಿಂದಲೂ ಅನಕ್ಷರಸ್ಥರಾಗಿರುವದರಿಂದ ಸರಕಾರದ ಯೋಜನೆಗಳು ಹಾಗೂ ಗ್ರಾಮ ಅಭಿವೃದ್ದಿಗೆ ಸಂಬAಧಿಸಿದ ವಿಷಯಗಳು ತಿಳಿಯದೇ ಇದ್ದುದರಿಂದ ಅಭಿವೃದ್ದಿ ಕಾರ್ಯಗಳು ಕುಂಟಿತಗೊಳ್ಳುತ್ತಿದ್ದವು ಎಂದರು.
ಒAದು ವೇಳೆ ಜನ ಮುಂಚೂಣಿಯಲ್ಲಿ ಹೋದರೆ, ಪೊಲೀಸ್ ಹಾಗೂ ಕೋರ್ಟ ಎಂಬ ಭಯದಿಂದ ಹಿಂಜರಿಯುತ್ತಿದ್ದರು. ಆಡು ಭಾಷೆಯಲ್ಲಿ ಹೇಳುವುದಾದರೆ ಪೊಲೀಸ್ ಮುಂದೆ ಹಾಯಬಾರದು ಕೋರ್ಟನ ಹಿಂದೆ ಹಾಯಬಾರದು ಎಂಬ ನುಡಿಗಟ್ಟಿನಂತೆ ಅನುಸಿರುತ್ತಿದ್ದರು. ಈ ಹಿನ್ನಲೆಯಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಪ್ರತಿಯೊಬ್ಬರೂ ಜಾಗೃತರಾಗಿದ್ದು, ಎಲ್ಲ ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸುವಂತಾಗಿದ್ದಾರೆ. ಇದಕ್ಕೆಲ್ಲ ಶಿಕ್ಷಣ ಮೂಲಾಧಾರವಾಗಿದ್ದು, ಆ ದೃಷ್ಠಿಯಿಂದ ಆಡಳಿತ ವ್ಯವಸ್ಥೆ ಇಂದು ಗ್ರಾಮಗಳತ್ತ ಬಂದು ಗ್ರಾಮ ವಾಸ್ತವ್ಯದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವAತಾಗಿದೆ ಎಂದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಸೈಬರ್ ಕ್ರೆöÊಮ್, ರಸ್ತೆ ಸುರಕ್ಷತೆ ಕ್ರಮಗಳ ಸೇರಿದಂತೆ ವಿವಿಧ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪೊಲೀಸ್ ವೃತ್ತ ಅಧಿಕ್ಷಕರ ಎಚ್.ಆರ್.ಪಾಟೀಲ, ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶರಣಬಸಪ್ಪ ಸಂಗಳದ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.