ಕ್ಷೀರ ಭಾಗ್ಯ ವಂಚನೆಗೆ ಯತ್ನ: ಪೊಲೀಸರಿಂದ ದಾಳಿ 

ಕ್ಷೀರ ಭಾಗ್ಯ ವಂಚನೆಗೆ ಯತ್ನ: ಪೊಲೀಸರಿಂದ ದಾಳಿ 
ಬಾಗಲಕೋಟೆ: ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿಯನ್ನು ಮಹಾರಷ್ಟç ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲು ಸಿದ್ಧತೆಯಲ್ಲಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಸಿದ್ದಪ್ಪ ಶಿವಯೋಗಪ್ಪ ಕಿತ್ತಲಿ ಎಂಬಾತ ಮಹಾರಾಷ್ಟçಕ್ಕೆ ಸಾಗಿಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಈತ ಮಹಾಲಿಂಗಪುರದ ಶ್ರೀಶೈಲ್ ಅಂಗಡಿ ಎಂಬಾತನಿAದ ಹುನಗುಂದ ಹಾಗೂ ಬಾದಾಮಿ ತಾಲೂಕಿನಲ್ಲಿ ಕ್ಷೀರಭಾಗ್ಯಕ್ಕೆ ಪೌಡರ್ ಪೂರೈಕೆ ಮಾಡುವ ಉಪಗುತ್ತಿಗೆ ಪಡೆದಿದ್ದ. 
ಆದರೆ ಕೆಲ ಶಾಲಾ ಅಧಿಕಾರಿಗಳೊಂದಿಗೆ ಈ ಇಬ್ಬರು ಶಾಮೀಲಾಗಿ ಅಕ್ರಮವಾಗಿ ಹಾಲಿನಪೌಡರ್, ರಾಗಿ ಹಿಟ್ಟು ಹಾಗೂ ಅಡುಗೆ ಎಣ್ಣೆ ಪ್ಯಾಕೆಟ್‌ಗಳನ್ನು ದಾಸ್ತಾನು ಮಾಡಿರುವ ಮಾಹಿತಿ ಅರಿತ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು ಕಾಯಾಚರಣೆ ನಡೆಸಿದ್ದಾರೆ. 
ಕಾರ್ಯಾಚರಣೆ ವೇಳೆ ಸೂಳಿಕೇರಿಯಲ್ಲಿರುವ ಸಿದಪ್ಪ ಕಿತ್ತಲಿಯ ಮನೆ ಮುಂಭಾಗದ ಶೆಡ್ಡಿನಲ್ಲಿ ದಾಸ್ತಾನು ಮಾಡಿದ್ದ ೧೭.೯೦ ಲಕ್ಷ ರೂ. ಮೌಲ್ಯದ ೪೪೭೫ ಕೆಜಿ ಹಾಲಿನ ಪೌಡರ್, ೧೯,೫೦೦ ರೂ. ಮೌಲ್ಯದ ೩೨೫ ಕೆಜಿ ರಾಗಿಹಿಟ್ಟು ಸೇರಿ ೧೮.೧೪ ಲಕ್ಷ ಮೌಲ್ಯದ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಬುಲೇರೋ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ವೈ.ಅಮರನಾಥ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.