ವರ್ಷದಲ್ಲಿ ಬಿಜೆಪಿ ಕಾರ್ಯಾಲಯ ನಿರ್ಮಾಣಕ್ಕೆ ಸಂಕಲ್ಪ

*ನವನಗರದಲ್ಲಿ ಡಿಸಿಎಂ ಕಾರಜೋಳ ಅವರಿಂದ ಭೂಮಿಪೂಜೆ  * ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸದ ಜೆ.ಪಿ.ನಡ್ಡಾ 

ವರ್ಷದಲ್ಲಿ ಬಿಜೆಪಿ ಕಾರ್ಯಾಲಯ ನಿರ್ಮಾಣಕ್ಕೆ ಸಂಕಲ್ಪ


      
ನಾಡನುಡಿ ನ್ಯೂಸ್ 
ಬಾಗಲಕೋಟೆ ಆ.೧೪: 
ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯ ನಿರ್ಮಾಣಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೂಮಿಪೂಜೆ ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಒಂದು ವರ್ಷದಲ್ಲಿ ಕಾರ್ಯಾಲಯ ನಿರ್ಮಾಣದ ಸಂಕಲ್ಪ ಪ್ರಕಟಿಸಿದರು. ದೆಹಲಿಯಿಂದ ವರ್ಚುವಲ್ ಮೂಲಕ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಶಿಲಾನ್ಯಾಸ ನೆರವೇರಿಸಿದರು. 
 ನವನಗರದ ೨೨ನೇ ಸೆಕ್ಟರ್‌ನಲ್ಲಿ ಕಾರ್ಯಾಲಯ ನಿರ್ಮಿಸಲಾಗುತ್ತಿದ್ದು, ಬೆಳಗ್ಗೆ ಪೂಜಾ, ಪುನಸ್ಕಾರಗಳನ್ನು ಆಯೋಜಿಸಲಾಗಿತ್ತು. ನಂತರ ಬಾಬು ಜಗಜೀವನರಾಂ  ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು ಭಾಗವಹಿಸಿ ಪಕ್ಷದ ಕಟ್ಟಡ ನಿರ್ಮಾಣಕ್ಕೆ ದಾನ ನೀಡುವುದಾಗಿ ಘೋಷಿಸಿದರು. 
 ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಈ ಹಿಂದೆಯೂ ಬಿಟಿಡಿಎ ಸಭಾಪತಿ ಆಗಿದ್ದ ವೇಳೆ ಕಡಿಮೆ ಬೆಲೆಗೆ ಉತ್ತಮ ಸ್ಥಳದಲ್ಲಿ ಜಾಗವನ್ನು ಪಕ್ಷದ ಮನವಿ ಮೇರೆಗೆ ಮಂಜೂರು ಮಾಡಿದ್ದರು. ೩.೨೦ ಕೋಟಿ ರೂ.ಗಳ ವಚ್ಚದಲ್ಲಿ ನೆಲಮಹಡಿ ಸೇರಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. 
 ಕಟ್ಟಡ ನಿರ್ಮಾಣಕ್ಕೆ ಶಾಸಕ ಮುರುಗೇಶ ನಿರಾಣಿ ಅವರು ಸಿಮೆಂಟ್ ಕೊಡಿಸುವುದಾಗಿ ಹೇಳಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಅವರು ತಲಾ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಅನೇಕ ಪ್ರಮುಖ ಕಾರ್ಯಕರ್ತರು ಕೊಡುಗೆ ನೀಡಲು ಮುಂದಾಗಿದ್ದು, ಪ್ರತಿಯೊಬ್ಬರೂ ಕಾರ್ಯಾಲಯ ನಿರ್ಮಾಣಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಹೇಳಿದರು. 
 ಬಿಜೆಪಿ ವಿಶ್ವದ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದಮೇಲೆ ಪಕ್ಷ ಮತ್ತಷ್ಟು ಬಲಾಢ್ಯವಾಗಿದೆ. ಕಾರ್ಯಕರ್ತರೇ ಪಕ್ಷದ ಜೀವ ಎಂದು ಹೇಳಿದರು. ಬಿ.ಎಲ್.ಸಂತೋಷ ಅವರು ಜಿಲ್ಲೆಗೊಂದು ಸ್ವಂತ ಕಾರ್ಯಾಲಯದ ಅಗತ್ಯತೆಯ ಚಿಂತನೆಯನ್ನು ಇಟ್ಟರು ಅವರು ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಆದ ನಂತರವೂ ಅದರ ಪ್ರಸ್ತಾಪ ಮಾಡಿದ್ದಾರೆ. ಪಕ್ಷದ ಕಾರ್ಯಚಟುವಟಿಕೆಗಳಿಗಾಗಿ ಕಾರ್ಯಾಲಯ ಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲ ಕಡೆಗಳಲ್ಲೂ ಸ್ಥಾಪನೆ ಆಗುತ್ತಿವೆ ಎಂದು ಹೇಳಿದರು. 
 ಪ್ರಧಾನಿ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ೨೦ ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಜಗತ್ತಿನ ಯಾವುದೇ ರಾಷ್ಟçದಲ್ಲೂ ಈ ರೀತಿ ಘೋಷಿಸಿಲ್ಲ. ಅದು ನಿಜವಾದ ಫಲಾನುಭವಿಗಳಿಗೆ ತಲುಪುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. 
 ಬೀಳಗಿ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಈ ಮೊದಲೇ ಪಕ್ಷದ ಕಾರ್ಯಾಲಯ ನಿರ್ಮಾಣವಾಗಬೇಕಿತ್ತು. ಈ ಅದು ಕೈಗೂಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸೀಮೆಂಟ್ ಕೊಡಿಸುವುದಾಗಿ ಹೇಳಿದರು. ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ಕಟ್ಟಡ ನಿರ್ಮಾಣಕ್ಕೆ ಎಲ್ಲ ಕಾರ್ಯಕರ್ತರು ಸಹಕಾರ ನೀಡಬೇಕಂದು ಮನವಿ ಮಾಡಿದರು. 
 ಪಕ್ಷದ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಮಾತನಾಡಿ, ಈ ಹಿಂದೆ ಪಕ್ಷಕ್ಕೆ ಕಾರ್ಯಾಲಯವೇ ಇರುತ್ತಿರಲಿಲ್ಲ. ಪರಿವಾರದ ಎಲ್ಲ ಸಂಘಟನೆಗಳು ಒಂದೇ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇಂದು ಪಕ್ಷ ಬೆಳೆದಿದ್ದು, ಅಧಿಕಾರವೂ ದೊರೆತಿದೆ. ಅಧಿಕಾರದಲ್ಲಿರುವವರು ಮತ್ತು ಕಾರ್ಯಕರ್ತರವೂ ವೈಚಾರಿಕತೆಯನ್ನೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಮತ್ತೋರ್ವ ಕಾರ್ಯದರ್ಶಿ ವಿನಯ ಬಿದರೆ ಮಾತನಾಡಿ, ಸಿದ್ಧಾಂತ ಒಪ್ಪಿ ಬಂದವರ ಮನೆಗಳೇ ಈ ಹಿಂದೆ ಕಾರ್ಯಾಲಯಗಳಾಗಿರುತ್ತಿದ್ದವು. ಈ ಪಕ್ಷ ಬೆಳೆದಿದ್ದು, ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರಿದ್ದಾರೆ ಎಂದು ಹೇಳಿದರು. 
 ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ತಾವು ಶಾಸಕರಾಗಿದ್ದ ಸಂದರ್ಭದಲ್ಲೂ ಪಕ್ಷದ ಕಚೇರಿ ನಿರ್ಮಾಣಕ್ಕೆ ಪ್ರಯತ್ನಿಸಿದ್ದನ್ನು ಸ್ಮರಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ವಂದಿಸಿ ಸರ್ವರ ಸಹಕಾರ ಕೋರಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ನಿರೂಪಿಸಿದರು. 
 ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ,ಮಾಜಿ ಸದಸ್ಯರಾದ ಜಿ.ಎಸ್.ನ್ಯಾಮಗೌಡ, ನಾರಾಯಣಸಾ ಭಾಂಡಗೆ,  ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶೀಲವಂತರ, ಎಂ.ಕೆ.ಪಟ್ಟಣಶೆಟ್ಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ವಿಭಾಗ ಸಹಪ್ರಭಾರಿ ಬಸವರಾಜ ಯಂಕAಚಿ, ಪಕ್ಷದ ನಗರ ಘಟಕದ ಅಧ್ಯಕ್ಷ ಬಸವರಾಜ ಅವರಾದಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.