ಹಿಂದೂಗಳ ಜನಸಂಖ್ಯೆಯಲ್ಲಿ ಭಾರಿ ಕುಸಿತ

ಹಿಂದೂಗಳ ಜನಸಂಖ್ಯೆಯಲ್ಲಿ ಭಾರಿ ಕುಸಿತ
ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಲೇ ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿ ವರದಿ ಈಗ ಬಾರಿ ಸಂಚಲನ ಸೃಷ್ಟಿಸಿದೆ. ಈ ವರದಿಯಂತೆ ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದ್ದು ಮಿಸ್ಲಿಂರ ಜನಸಂಖ್ಯೆ ಹೆಚ್ಚುತ್ತಿರುವದು ದಾಖಲಾಗಿದೆ. 
ಧಾರ್ಮಿಕ ಅಲ್ಪಸಂಖ್ಯಾತರ ಪಾಲು  ದೇಶ-ದೇಶಗಳ ನಡುವ ವಿಶ್ಲೇಷಣೆ ಎಂಬ ವರದಿಯನುಸಾರ ಭಾರತದಲ್ಲಿ ಹಿಂದುಗಳ ಸಂಖ್ಯೆ ೧೯೫೦ ಮತ್ತು ೨೦೧೫ರ ನಡುವೆ ಶೇ.೭.೮೨ ರಷ್ಟು ಕುಸಿದು ಶೇ.೭೮.೦೬ಕ್ಕೆ ಇಳಿದಿದೆ. ಇದೇ ವೇಳೆ ಮುಸ್ಲಿಂರ ಜನಸಂಖ್ಯೆಯಲ್ಲಿ ಶೇ.೪೩.೧೫ರಷ್ಟು ಏರಿಕೆಯಾಗಿದೆ ಅವರ ಪ್ರಮಾಣ ಶೇ.೦೯ರಷ್ಟಾಗಿದೆ. ಇದೇ ರೀತಿ ಕ್ರೆöÊಸ್ತರ ಸಂಖ್ಯೆಯಲ್ಲಿ ಶೇ.೫.೪ರಷ್ಟು ಏರಿಕೆಯಾಗಿದ್ದಲ್ಲದೇ ಅವರ ಪ್ರಮಾಣ ಶೇ.೨.೩೬ರಷ್ಟಾಗಿದೆ. 
ನೆರೆಯ ಪಾಕಿಸ್ಥಾನ,ಅಫಘಾನಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಗೂ ಭೂತಾನನಲ್ಲಿ ಬಹುಸಂಖ್ಯಾತರ ಜನಸಂಖ್ಯೆಯಲ್ಲಿ ಬಹುಪಾಲು ಏರಿಕೆಯಾಗಿದೆ. ಆದರೆ ಮಾಲ್ಡಿವ್ಸ್ನಲ್ಲಿ ಬಹುಸಂಖ್ಯಾತ ಮುಸ್ಲಿಮರ ಜನಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಮುಸ್ಲಿಂರೇತರ ಐದು ಪ್ರಮುಖ ದೇಶಗಳಲ್ಲಿ ಶ್ರೀಲಂಕಾ ಹಾಗೂ ಭೂತಾನ್‌ನಲ್ಲಿ ಮಾತ್ರ ಬಹುಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರ ಸಂಖ್ಯೆಯಲ್ಲಿ ಶೇ.೧೮ರಷ್ಟು ಹೆಚ್ಚಾಗಿದೆ. ಭಾರತೀಯ ಉಪಖಂಡದಲ್ಲೆ ಇದು ಅತಿದೊಡ್ಡ ಹೆಚ್ಚಳ.