ಕಾರಿನಲ್ಲಿ ಸಾಗಿಸುತ್ತಿದ್ದ ೩೦ ಲಕ್ಷ ರೂ.ಹಣ ಜಪ್ತಿ..!

ಕಾರಿನಲ್ಲಿ ಸಾಗಿಸುತ್ತಿದ್ದ ೩೦ ಲಕ್ಷ ರೂ.ಹಣ ಜಪ್ತಿ..!


ಬಾಗಲಕೋಟೆ: ಬಾಗಲಕೋಟೆಯ ಐಬಿ ಹತ್ತಿರ ಫೋರ್ಡ್ ಪಿಗೋ ಕಂಪನಿಯ ಕಾರ್ ನಂ.ಕೆಎ-48 ಎಂ-8821 ನಲ್ಲಿದ್ದ 30 ಲಕ್ಷ ರೂ.ಗಳ ನಗದನ್ನು ಪರಿಶೀಲನೆ ವೇಳೆಯಲ್ಲಿ ಪೊಲೀಸ್‍ರು ವಶಪಡಿಸಿಕೊಂಡಿದ್ದಾರೆ. 


            ಸದರಿ ವಾಹನವನ್ನು ಪೊಲೀಸರು ಸಂಶಯಾಸ್ಪದವೆಂದು ತಿಳಿದು ಹಿಡಿದು ಪರಿಶೀಲಿಸಿದಾಗ 30 ಲಕ್ಷ ರೂಪಾಯಿಯ ನಗದು ದೊರೆತಿರುತ್ತದೆ. ಈ ಹಣವು ಯೂನಿಯನ್ ಬ್ಯಾಂಕ್‍ನ ಇತರ ಬ್ರಾಂಚ್‍ಗಳಿಗೆ ನೀಡಲು ಸಾಗಿಸುತ್ತಿರುವುದಾಗಿ ವಾಹನ ಚಾಲಕ ತಿಳಿಸಿದ್ದು, ಚುನಾವಣಾ ಆಯೋಗದ ಕರ್ನಾಟಕ ಎಲೆಕ್ಷನ್ ಎಕ್ಸ್ಪೆಂಡಿಚರ್ ಮಾನಿಟರಿಂಗ್ ಆಪ್‍ನಲ್ಲಿ ಇದು ನಮೂದು ಆಗಿರುವುದಿಲ್ಲ. ಪ್ರಕರಣವನ್ನು ಅಧ್ಯಕ್ಷರು ಜಿಲ್ಲಾ ಹಣಕಾಸು ಮುಟ್ಟುಗೋಲು ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಇವರಿಗೆ ಪರಿಶೀಲನೆಗಾಗಿ ಸಲ್ಲಿಸಿದೆ.