ಈದ್ ಮಿಲಾದ್: ಬಾಗಲಕೋಟೆಯಲ್ಲಿ ಅ.೯ ಮತ್ತು ೧೨ರಂದು ಬೃಹತ್ ಮೆರವಣಿಗೆ

ಈದ್ ಮಿಲಾದ್: ಬಾಗಲಕೋಟೆಯಲ್ಲಿ ಅ.೯ ಮತ್ತು ೧೨ರಂದು ಬೃಹತ್ ಮೆರವಣಿಗೆ

ಬಾಗಲಕೋಟೆ: 
ಈದ ಮಿಲಾದ್ ಪ್ರಯುಕ್ತ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ಅ.೭ರಿಂದ ವಿವಿಧ ಕಾರ್ಯಕ್ರಮಗಳು ಆರಂಭಗೊAಡಿವೆ. ಅ.೯ ಮತ್ತು ೧೨ ರಂದು ನವನಗರ ಮತ್ತು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. 


 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಹಾಜಿ ಬಾವಾಸಾಹೇಬ ಖಾಜಿ ಅವರು, ಹಜರತ್ ಮುಮಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಂ ಅವರ ಜನ್ಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನವನಗರದ ಅಂಜುಮನ್ ಶಾದಿ ಮಹಲ್‌ನಲ್ಲಿ ಅ.೭ ರಿಂದ ೯ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. 
 ಅ.೭ ರಂದು ವಿದ್ಯಾರ್ಥಿಗಳಿಗೆ ಕುರಾನ್ ತಿಲಾವತ್, ನಾತ್ ವ ವಾಕ್ ಸ್ಪರ್ಧೆಗಳನ್ನು ಸಂಘಟಿಸಲಾಗಿದ್ದು, ಅ.೮ರಂದು ಮಧ್ಯಾಹ್ನ ೩ಕ್ಕೆ ನಡೆಯಲಿರುವ ಮಹಿಳೆಯರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಸಮನ್ವಯ ಅಧಿಕಾರಿ ಜಾಸ್ಮೀನ್ ಕಿಲ್ಲೆದಾರ ಅಧ್ಯರ‍್ಷತೆ ವಹಿಸಲಿದ್ದಾರೆ. ನವನಗರದ ಮದರಸಾ ದಾರೂಲ್ ಉಲುಮ್‌ನ ಮೊಹತರಮಾ ಅಲೀಮಾ ಬಶೀರಾಬೇಗಂ ಹಾಗೂ ಇಳಕಲ್ಲಿನ ಜಾಮೀಯಾ ತಾಲೀಮ್ ಉಲ್-ಕುರಾನ ಅರೇಬಿಕ್ ಶಾಳೆಯ ಮುಖ್ಯಶಿಕ್ಷಕಿ ಮೊಹತರಮಾ ಹಾಜರಾ ಪರವೀನ್ಗಗ್ ಎಸ್.ಖಾಜಿ ಅವರು ಪ್ರವಚನ ನೀಡಲಿದ್ದಾರೆ ಎಂದು ವಿವರಿಸಿದರು. 
  ಅ.೯ರಂದು ಮಧ್ಯಾಹ್ನ ೧೨ ಗಂಟೆಗೆ ನವನಗರದಲ್ಲಿ ನಗರಸಭೆ ಸಮುದಾಯಭವನದಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಎಲ್‌ಐಸಿ ವೃತ್ತ, ಅಂಬೇಡ್ಕರ ಭವನ, ನವನಗರ ಉದ್ಯಾನವನ, ನೂರಾಲಿ ಮಸೀದಿ, ಸರ್ಕಾರಿ ಐಟಿಐ ಕಾಲೇಜು ಸರ್ಕಲ್, ಹೊಸ ಹಾಗೂ ಹಳೆ ಶೆಡ್ ಸರ್ಕಲ್, ಸೆಕ್ಟರ್ ನಂ. ೪೫, ಸೆ.೨೮ ಮತ್ತು ೩೧ರ ಮುಖ್ಯರಸ್ತೆ, ಸೆ.೫೩ರವರೆಗಿನ ರಸ್ತೆ, ಮದೀನಾ ಮಸೀದಿ, ಸರ್ಕಾರಿ ಉರ್ದು ಶಾಲೆಯಿಂದ ಅಂಜುಮನ್ ಶಾದಿ ಮಹಲ್‌ನಲ್ಲಿ ಸಮಾವೇಶಗೊಳ್ಳಲಿದೆ. ಅಂದು ಸಂಜೆ ೭ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಮಾಜಾಫ್ ಬೇಪಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಸೀರತ್ ಕಮಿಟಿ ಅಧ್ಯಕ್ಷ ಮಹ್ಮದಗೌಸ ಎಂ.ಖಾಝಿ, ಸಫಾ ಖಿದಮತ್ ಟ್ರಸ್ಟ್ ಅಧ್ಯಕ್ಷ ಮುಫ್ತಿ ಉಮರ ಫಾರೂಖ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 
 ಅ.೧೨ರಂದು ಹಳೆ ಬಾಗಲಕೋಟೆಯಲ್ಲಿ ಬೆಳಗ್ಗೆ ೧೦ ಗಂಟೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹಳೇ ಅಂಜುಮನ್ ಸಂಸ್ಥೆಯಿAದ ಆರಂಭಗೊಳ್ಳುವ ಮೆರವಣಿಗೆ ಕಿಲ್ಲಾ ಚಾವಡಿ ಕಟ್ಟಿ, ಹಳೇ ಅಂಚೆ ಕಚೇರಿ, ವಲ್ಲಭಬಾಯ್ ಚೌಕ್, ಪಂಕಾ ಮಸೀದಿ, ಕಪ್ಪಡ್ ಬಜಾರ್, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ, ರೈಲು ನಿಲ್ದಾಣ ರಸ್ತೆ, ಬಿಲಾಲ್ ಮಸೀದಿ, ತರಕಾರಿ ಮಾರುಕಟ್ಟೆ, ಹಳೇ ಅಂಚೆ ಕಚೇರಿ, ಪಂಖಾ ಮಸೀದಿಗೆ ಆಗಮಿಸಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.  
 ಅಂದು ಸಂಜೆ ಪಂಖಾ ಮಸೀದಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಅವರು ಭಾಗವಹಿಸಲಿದ್ದು, ಬಿಟಿಡಿಎ ಮಾಜಿ ಅಧ್ಯಕ್ಷ ಜಾಕೀರ ಮೊಕಾಶಿ, ಡಾ.ಶಫಿವುಲ್ಲಾ ಇನಾಮದಾರ, ಸಂತೋಷ ಹಿಕ್ರಾಣಿ, ಬಂದೇನವಾಜ ರಬಕವಿ, ಅಬ್ದುಲ್ ಮಜೀದ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
 ಅಂಜುಮನ್ ಸಂಸ್ಥೆ ಚೇರ್ಮನ್ ಮೌಲಾನಾ ಮಹಮ್ಮದಗೌಸ ಎಂ.ಖಾಜಿ, ಕಾರ್ಯದರ್ಶಿ ರಾಜಅಹ್ಮದ ಮೆಹಬೂಬಸಾಬ ಬದಾಮಿ, ಸದಸ್ಯ ಅಯ್ಯೂಬಖಾನ್ ಬಾಗೇವಾಡಿ ಉಪಸ್ಥಿತರಿದ್ದರು.