ಜಿಲ್ಲೆಯಲ್ಲಿ ಯಾರಿಗೆಲ್ಲ ಕಮಲ ಟಿಕೆಟ್ ಪಕ್ಕಾ...? ಇಲ್ಲಿದೆ ನೋಡಿ ಲೇಟೆಸ್ಟ್ ಡಿಟೇಲ್ಸ್..!

ಜಿಲ್ಲೆಯಲ್ಲಿ ಯಾರಿಗೆಲ್ಲ ಕಮಲ ಟಿಕೆಟ್ ಪಕ್ಕಾ...? ಇಲ್ಲಿದೆ ನೋಡಿ ಲೇಟೆಸ್ಟ್ ಡಿಟೇಲ್ಸ್..!


ಬಾಗಲಕೋಟೆ: 
ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಹಲವರಿಗೆ ಟಿಕೆಟ್ ಬದಲಾವಣೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಜಿಲ್ಲೆಯಲ್ಲಿ ಯಾವುದೇ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಲ್ಲ ಎಂಬ ವರದಿ ಮೂಲಗಳಿಂದ ಲಭಿಸಿದೆ. 
 ಮುಧೋಳದಿಂದ ಸಚಿವ ಗೋವಿಂದ ಕಾರಜೋಳ, ಬೀಳಗಿ ಕ್ಷೇತ್ರದಿಂದ ಮುರುಗೇಶ ನಿರಾಣಿ,  ಬಾಗಲಕೋಟೆ ಕ್ಷೇತ್ರದಿಂದ ಡಾ.ವೀರಣ್ಣ ಚರಂತಿಮಠ, ತೇರದಾಳದಿಂದ ಸಿದ್ದು ಸವದಿ, ಹುನಗುಂದ ಕ್ಷೇತ್ರದಿಂದ ದೊಡ್ಡನಗೌಡ ಪಾಟೀಲರಿಗೆ ಟಿಕೆಟ್ ಲಭ್ಯವಾಗಿದ್ದು, ಬಾದಾಮಿ ಹಾಗೂ ಜಮಖಂಡಿ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಲಭಿಸಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ. 
 ಮಂಗಳವಾರ ರಾತ್ರಿ ಟಿಕೆಟ್ ಘೋಷಣೆಯಾಗಲಿದ್ದು, ಜಿಲ್ಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ಹಿರಿಯ ನಾಯಕರೊಬ್ಬರು ನಾಡನುಡಿಗೆ ತಿಳಿಸಿದ್ದಾರೆ. ಹುಬ್ಬಳ್ಳಿ ಕ್ಷೇತ್ರದಿಂದ ಜಗದೀಶ ಶೆಟ್ಟರ್ ಅವರಿಗೆ ಬೇರೆಯವರಿಗೆ ಟಿಕೆಟ್ ಬಿಟ್ಟುಕೊಡುವಂತೆ ಹೈಕಮಾಂಡ್ ಕರೆ ಬಂದಿದ್ದು, ಅವರು ಮತ್ತೊಮ್ಮೆ ಸ್ಪರ್ಧಿಸುವ ಇಚ್ಛೆಯನ್ನು ನಾಯಕರೆದುರು ವ್ಯಕ್ತಪಡಿಸಿರುವುದರಿಂದ ಅವರಿಗೂ ಟಿಕೆಟ್ ಸಿಗಲಿದೆ ಎಂದು ಹೇಳಲಾಗಿದೆ.