ವಿದ್ಯಾಗಿರಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ 

ವಿದ್ಯಾಗಿರಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ 


ಬಾಗಲಕೋಟೆ:
ಮೂವರು ದುಷ್ಕರ್ಮಿಗಳು ಯುವಕನೋರ್ವನಿಗೆ ಚೂರಿ ಇರಿತಗೊಳಿಸಿ ಪರಾರಿಯಾಗಿರುವ ಘಟನೆ ವಿದ್ಯಾಗಿರಿಯ ಸಿಬಿಎಸ್‌ಇ ರಸ್ತೆಯಲ್ಲಿ  ನಡೆದಿದೆ. 

ಗಾಯಗೊಂಡ ಯುವಕನನ್ನು ಕೃಷ್ಣಾ ಹೆಳವರ ಎಂದು ಗುರುತಿಸಲಾಗಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ

 ಕಾರಿನಲ್ಲಿ ಬಂದ ಮೂವರು ಯುವಕರು ಬೈಕ್‌ನಲ್ಲಿ ಬಂದ ಯುವಕನ ಮೇಲೆ ಚೂರಿಯಿಂದ ಇರಿದಿದ್ದು, ನಂತರ ಪರಾರಿಯಾಗಿದ್ದಾರೆ.  ಮಹಾಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಓಡಾಡುತ್ತಿದ್ದ ಜನ ಯುವಕನ ಮೇಲಿನ ಹಲ್ಲೆಯ ಭಯಾನಕ ಚಿತ್ರಣವನ್ನು ಕಂಡು ಗಾಬರಿಯಾಗಿದ್ದಾರೆ.

ಗಾಯಗೊಂಡಿರುವ ಯುವಕನನ್ನು ನವನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಸ್ಪಿ ಜಯಪ್ರಕಾಶ, ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.