Good News: ಲೋಕಾಪುರವರೆಗೆ ಓಡಲಿವೆ ಗೂಡ್ಸ್ ರೈಲು..!
ಬಾಗಲಕೋಟೆ: ಮುಧೋಳ ತಾಲೂಕಿನ ಲೋಕಾಪುರ ರೈಲು ನಿಲ್ದಾಣವನ್ನು ಗೂಡ್ಸ್ ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸಕ್ಕರೆ, ಸಿಮೆಂಟ್ ಹಾಗೂ ಸುಣ್ಣದಕಲ್ಲು ಪೂರೈಕೆ ಸೇರಿದಂತೆ ಈ ಮಾರ್ಗದಲ್ಲಿ ರೈಲು ಓಡಾಟ ಆರಂಭಗೊಳ್ಳುವುದರಿAದ ಈ ಭಾಗದಲ್ಲಿ ಆರ್ಥಿಕವಾಗಿ ಸಾಕಷ್ಟು ಅನುಕೂಲಕರವಾಗಲಿದೆ ಎಂದು ಭಾವಿಸಲಾಗಿದ್ದು, ಜನರ ಓಡಾಟಕ್ಕೂ ಅನುಕೂಲವಾಗಲಿದೆ. ಪ್ರಸ್ತುತ ಗೂಡ್ಸ್ ರೈಲುಗಳ ಓಡಾಡ ಆರಂಭವಾಗಲಿದ್ದು, ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಹೊರತಾಗಿ ಇತರ ಎಲ್ಲ ಬಗೆಯ ಸರಕು ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ ಪ್ರತಿದಿನ ೬ ರಿಂದ ರಾತ್ರಿ ೧೦ರವರೆಗೆ ಸರಕು ಸಾಗಾಣಿಕೆಗಾಗಿ ನಿಲ್ದಾಣ ಕಾರ್ಯನಿರ್ವಹಿಸಲಿದೆ.