ಟಿಪ್ಪು ಬಗ್ಗೆ ಯತ್ನಾಳ ವಿವಾದಾತ್ಮಕ ಹೇಳಿಕೆ: ಮುಧೋಳದಲ್ಲಿ ಕೆರಳಿದ ಮುಸ್ಲಿಂ ಸಮುದಾಯ..!
ಬಾಗಲಕೋಟೆ:ಮುಧೋಳದ ಜನತಾ ರಾಜಾ ಗಣೇಶ ವಿಸರ್ಜನೆ ವೇಳೆ ಟಿಪ್ಪು ಸುಲ್ತಾನ್ ಕುರಿತಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಆಡಿರುವ ಮಾತುಗಳು ವಿವಾದದ ಸ್ವರೂಪ ಪಡೆದಿದೆ.
ಗುರುವಾರ ಮುಧೋಳದಲ್ಲಿ ನಡೆದ ಜನತಾರಾಜಾ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಶಾಸಕ ಯತ್ನಾಳ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿದ್ದು ಸೆ.೨೦ರ ಶುಕ್ರವಾರ ಮುಧೋಳದಲ್ಲಿ ಪ್ರತಿಭಟನೆಗೆ ಮುಸ್ಲಿಂರು ಕರೆ ನೀಡಿದ್ದಾರೆ. ಬೆಳಗ್ಗೆ ೧೧ಕ್ಕೆ ಮುಧೋಳದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.