೨೧ ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ..!

೨೧ ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ..!

ಬಾಗಲಕೋಟೆ: ಬಾಗಲಕೋಟೆ ವಿಭಾಗ ವ್ಯಾಪ್ತಿಯ ೨೨೦ ಕೆವಿ ಸ್ವೀಕರಣಾ ಕೇಂದ್ರದಿAದ ಪೂರೈಕೆಯಾಗುವ ೧೧೦ ಕೆವಿ, ೩೩ ಕೆವಿ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೆöÊಮಾಸಿಕ ನಿರ್ವಹಣೆ ಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ ೨೧ ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
 ೨೨೦ ಕೆವಿ ಬಾಗಲಕೋಟೆ ಸ್ವೀಕರಣಾ ಕೇಂದ್ರದಿAದ ಪೂರೈಕೆಯಾಗುವ ೧೧೦ ಕೆವಿ ಮಾರ್ಗಗಳಾದ ನವನಗರ, ನವನಗರ ಯುನಿಟ್-೧, ಯುನಿಟ್-೨, ಹಳೆ ಬಾಗಲಕೋಟೆ, ಅಚನೂರ, ಶಿಗಿಕೇರಿ, ಬೆನಕಟ್ಟಿ, ರಾಂಪೂರ, ಕಲಾದಗಿ, ಗುಳೇದಗುಡ್ಡ, ಕೆರೂರ, ಕುಳಗೇರಿ ಕ್ರಾಸ್, ಹೆಬ್ಬಳ್ಳಿ, ಬಾದಾಮಿ, ಕೈನಕಟ್ಟಿ, ನೀರಬೂದಿಹಾಳ, ನಾಗರಾಳ ಎಸ್.ಪಿ, ೩೩ ಕೆವಿ ಕೇಂದ್ರಗಳಾದ ಶಿರೂರ, ಕಮತಗಿ, ಹಾಲಿಗೇರ, ಕಟಗೇರಿ, ನಂದಿಕೇಶ್ವರ, ಗದ್ದನಕೇರಿ, ಬಂಟನೂರ, ೧೧೦ ಕೆವಿ ಇ.ಎಚ್.ಟಿ ಗ್ರಾಹಕರಾದ ಬಾಗಲಕೋಟೆ ಉದ್ಯೋಗ ಸಿಮೆಂಟ್ಸ್, 
೧೧೦ ಕೆವಿ ಐ.ಪಿ.ಪಿ ಗ್ರಾಹಕರಾದ ಎಂ.ಆರ್.ಎನ್ ಕೇನ್ ಪವರ್ ಶುರ‍್ಸ್, ಕೇದರನಾಥ ಶುರ‍್ಸ್, ಬಾದಾಮಿ ಶುರ‍್ಸ್, ಹೆರಕಲ್ ಎಲ್.ಐ.ಎಸ್, ೩೩ ಕೆವಿ ಇ.ಎಚ್.ಟಿ ಗ್ರಾಹಕರಾದ ಕಾಟವಾ ಸಿಮೆಂಟ್ಸ್, ೩೩ ಕೆವಿ ಐ.ಪಿ.ಪಿ ಗ್ರಾಹಕರಾದ ಅಕಮಿ ಸೋಲಾರ್, ದೊಡ್ಡನ್ನವರ ಇ.ಎಚ್.ಟಿ ಲೈನ್ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.