ಬನಶಂಕರಿದೇವಿ ದರ್ಶನ ಪಡೆಯಲು ಮೋದಿಗೆ ಪತ್ರ: ಉಡುಗೊರೆಯಾಗಿ ನೀಡಲು ೨ ಕೆಜಿ ಬೆಳ್ಳಿ ಮೂರ್ತಿ ಸಿದ್ಧ
ಬಾಗಲಕೋಟೆ:
ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಶಕ್ತಿ ದೇವತೆ ಬನಶಂಕರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವಂತೆ ದೇವಸ್ಥಾನ ಮಂಡಳಿ ಪತ್ರ ಬರೆದು ಮನವಿ ಮಾಡಿದೆ.
ಮೇ ೬ ರಂದು ಸಂಜೆ ೪ಕ್ಕೆ ಬಾದಾಮಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು ಈ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಮಂಡಳಿ ಮನವಿ ಮಾಡಿದೆ.
ಇದೇ ವೇಳೆ ಮೋದಿ ಅವರಿಗೆ ೨ಕೆಜಿ ಬೆಳ್ಳಿ ಬನಶಂಕರಿದೇವಿ ಮೂರ್ತಿಯನ್ನು ನೀಡಲು ಸಿದ್ಧಪಡಿಸಲಾಗಿದೆ.