ಬಿಪ್ಸ್ ಬಾಲಕರ ತಂಡಕ್ಕೆ ಚಾಂಪಿಯನ್ ಪಟ್ಟ 

 ಬಿಪ್ಸ್ ಬಾಲಕರ ತಂಡಕ್ಕೆ ಚಾಂಪಿಯನ್ ಪಟ್ಟ 
ಬಾಗಲಕೋಟೆ: ಬವಿವ ಸಂಘದ ಬಸವೇಶ್ವರ ಅಂತಾರಾಷ್ಟಿçÃಯ ಪಬ್ಲಿಕ್ ಶಾಲೆಯ ಹಾಕಿ ಕ್ರೀಡಾಪಟುಗಳು ಇತ್ತೀಚೆಗೆ ಕೊಡಗಿನ ಕ್ರೀಡಾ ಶಾಲೆಯಲ್ಲಿ ಜರುಗಿದ ದಕ್ಷಿಣ ಭಾರತ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಸಂಜೀವನ್ ಹಾಕಿ ತಂಡದ ವಿರುದ್ಧ ೪-೧ ಗೋಲುಗಳ ಅಂತರದ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದಾರೆ. 
ಅಕ್ಟೋಬರ್ ೪ ರಿಂದ ೭ರವರೆಗೆ ಕೊಡಗಿನ ಕ್ರೀಡಾ ಶಾಲೆಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಆಡಿದ ಶಾಲೆಯ ಹಾಕಿ ಪಟುಗಳು ಎಲ್ಲಾ ತಂಡಗಳ ವಿರುದ್ದ ಭಾರಿ ಅಂತರದ ಗೆಲುವು ಸಾಧಿಸಿ, ಉಪಾಂತ್ಯ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿರುವ ಆತಿಥೇಯ ಕೊಡಗು ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿ ಅರ್ಹ ಜಯ ಪಡೆದುಕೊಂಡಿತ್ತು. 
ಅಂತಿಮ ಹಣಾಹಣೆಯಲ್ಲಿ ಮಹಾರಾಷ್ಟ್ರದ ಸಂಜೀವನ್ ತಂಡವನ್ನು ಸಹ ೪-೧ಗೋಲುಗಳ ಅಂತರದಲ್ಲಿ ಸೋಲಿಸಿ ದಕ್ಷಿಣ ಭಾರತ ಮಟ್ಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವುದರ ಜೊತೆಗೆ ಅಖಿಲ ಭಾರತ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಅರ್ಹತೆಯನ್ನು ಗಿಟ್ಟಿಸಿಕೊಂಡಿತು.
ಶಾಲೆಯ ಹಾಕಿಪಟುಗಳ  ಸಾಧನೆಗೆ ಬವಿವಿ ಸಂಘದ ಕಾರ್ಯಾಧ್ಯಕ್ಷ  ಡಾ. ವೀರಣ್ಣ ಚರಂತಿಮಠ, ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಮಹಾಂತೇಶ್ ಶೆಟ್ಟರ್, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಾಲೆಯ ಪ್ರಾಚಾರ್ಯ ಸಿ.ಬಿ.ಸುರೇಶ್ ಹೆಗಡೆ ಉಪ ಪ್ರಾಚಾರ್ಯೆ ಮಂಗಳಗೌರಿ ಹೆಗಡೆ  ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶಾಂತು ಕಟ್ಟಿಮನಿ, ಹೊನ್ನಪ್ಪ  ಹಾಗೂ ಚಿದಾನಂದ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.