ಜಿಲ್ಲೆಯಲ್ಲಿ ಹೊಸದಾಗಿ ೮ ಮತಗಟ್ಟೆ ಸ್ಥಾಪನೆಗೆ ಅನುಮೋದನೆ 

ಜಿಲ್ಲೆಯಲ್ಲಿ ಹೊಸದಾಗಿ ೮ ಮತಗಟ್ಟೆ ಸ್ಥಾಪನೆಗೆ ಅನುಮೋದನೆ 


ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ ೮ ಮತಗಟ್ಟೆ ಸ್ಥಾಪನೆಗೆ ಸಲ್ಲಿಸಲಾದ ಪ್ರಸ್ತಾವನೆಗೆ ಚುನಾವಣಾ ಆಯೋಗವು ಅನುಮೋದ ನೀಡಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
 ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮತದಾನ ಕೇಂದ್ರಗಳ ತರ್ಕಬದ್ದಗೊಳಿಸುವಿಕೆ ಕುರಿತು ವಿವಿಧ ರಾಜಕೀಯ ಮುಖಂಡರ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ೧೫ ನೂರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಲಿ ಸಹಾಯಕ ಮತಗಟ್ಟೆ ಸ್ಥಾಪಿಸಲು ೧ ಹಾಗೂ ೨ ಕಿ.ಮೀ ಕ್ಕಿಂತ ಹೆಚ್ಚಿಗೆ ಕ್ರಮಿಸಬೇಕಾಗಿರುವ ಮತದಾರರಿಗೆ ಹೆಚ್ಚುವರಿಯಾಗಿ ೭ ಮತಗಟ್ಟೆಗಳು ಸೇರಿ ಒಟ್ಟು ೮ ಮತಗಟ್ಟೆ ಸ್ಥಾಪನೆಗೆ ಅನುಮೋದನೆ ದೊರೆತಿದೆ ಎಂದರು.
 ಹುನಗುAದ ಮತಕ್ಷೇತ್ರದ ಮತಗಟ್ಟೆ ಸಂ.೯೩ ನಗರ ಪ್ರದೇಶದಲ್ಲಿ ಇದ್ದು ೧೫೩೮ ಮತದಾರರು ಇದ್ದು, ಮತಗಟ್ಟೆ ಸಂ.೯೩ಕ್ಕೆ ೫೪೨ ಹಾಗೂ ಮತಗಟ್ಟೆ ಸಂ.೯೩ಎ ಗೆ ೯೯೬ ಮತದಾರರನ್ನು ವಿಭಾಗಿಸಿ ಎರಡು ಮತಗಟ್ಟೆ ಸ್ಥಾಲಿಸಲಾಗುತ್ತಿದೆ. ಒಂದು ಮತಗಟ್ಟೆಗೆ ಕನಿಷ್ಟ ೩೦೦ ಮತದಾರರು ಇರಬೇಕಾಗಿದ್ದು, ಈ ಹಿಂದೆ ಕೆಲವು ಮತಕ್ಷೇತ್ರದಲ್ಲಿ ಎರಡು ಗ್ರಾಮಗಳನ್ನು ಒಟ್ಟುಗೂಡಿಸಿ ಒಂದು ಮತಗಟ್ಟೆ ಸ್ಥಾಪಿಸಿದ್ದು, ಚುನಾವಣೆ ಸಮಯದಲ್ಲಿ ಮತದಾರರು ೨ ಕಿ.ಮೀಕಿಂತ ಹೆಚ್ಚಿಗೆ ಕ್ರಮಿಸಿ ಮತದಾನ ಮಾಡಬೇಕಾಗಿರುವದರಿಮದ ಪ್ರತ್ಯೇಕ ಗ್ರಾಮಗಳಿಗೆ ಮತಗಟ್ಟೆಗಳನ್ನು ಸ್ಥಾಪಿಸಲು ಕಳುಹಿಸಲಾದ ಪ್ರಸ್ತಾವನೆಗೆ ಅನುಮೋದ ದೊರೆತಿದೆ ಎಂದರು.
 ಬೀಳಗಿ ಮತಕ್ಷೇತ್ರದಲ್ಲಿ ಯಳ್ಳಿಗುತ್ತಿ ಗ್ರಾಮದಲ್ಲಿ ೧೪೮ ಮತ್ತು ೧೪೯ ಮತಗಟ್ಟೆಗಳು ಇದ್ದು, ಸದರಿ ಗ್ರಾಮಗಳು ಭಾಗಶಃ ಮುಳುಗಡೆಯಾಗಿ ಯಳ್ಳಿಗುತ್ತಿ ಪುನರ್ವಸತಿ ಕೇಂದ್ರ-೨ಕ್ಕೆ ಸ್ಥಳಾಂತರಿಸಿದ ಹಿನ್ನಲೆಯಲ್ಲಿ ಸದರಿ ಯಳ್ಳಿಗುತ್ತಿ ಪುನರ್ವಸತಿ ಕೇಂದ್ರಕ್ಕೆ ೧೦ ಕಿ.ಮೀ ಅಂತರವಿದ್ದು, ಪುನರ್ವಸತಿ ಕೇಂದ್ರ-೨ರಲ್ಲಿ ವಾಸಿಸುವ ೩೩೮ ಮತದಾರರಿಗೆ ಪುನರ್ವಸತಿ ಕೇಂದ್ರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಹಿರೇಮಾಗಿ ಹಾಗೂ ಬೂದಿಹಾಳ ಗ್ರಾಮಗಳನ್ನು ಒಟ್ಟುಗೂಡಿಸಿ ಹಿರೇಮಾಗಿ ಗ್ರಾಮದಲ್ಲಿರುವ ಮ.ಸಂ.೨೪೪ನ್ನು ವಿಂಗಡಿಸಿ ಹಿರೇಮಾಗಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
 ಹುನಗುಂದ ಮತಕ್ಷೇತ್ರದಲ್ಲಿ ೫ ಮತಗಟ್ಟೆಗಳು ಎರಡು ಗ್ರಾಮಗಳನ್ನು ಒಳಗೊಂಡು ಮತಕ್ಷೇತ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಒಂದು ಗ್ರಾಮದವರು ಮತದಾನ ಮಾಡಲು ೨ ಕಿ.ಮೀ ಕ್ರಮಿಸಿ ಮತದಾನ ಮಾಡಬೇಕಿತ್ತು. ಈ ತೊಂದರೆ ನಿವಾರಿಸಲು ಐದು ಕಡೆಗಳಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಅನಪಕಟ್ಟಿ, ಇಂದವಾರ, ಮೇದಿನಾಪೂರ, ಕಿರಸೂರ, ವೀರಾಪೂರ, ಚಿಕ್ಕಬಾದವಾಡಗಿ, ಹೊನ್ನರಹಳ್ಳಿ, ಹಿರೇಕೊಡಗಲಿ ಹಾಗೂ ಹಿರೇಕೊಡಗಲಿ ತಾಂಡಾದಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 
 ಬಾಗಲಕೋಟೆ ಮತಕ್ಷೇತ್ರದ ಹೊನ್ನಾಕಟ್ಟಿ ಗ್ರಾಮದಲ್ಲಿರುವ ೭೭ ಮತ್ತು ೭೮ ಮತಗಟ್ಟೆಗಳ ಕಟ್ಟಡವು ಶಿಥಿಲಾವಸ್ತಿಯಲ್ಲಿರುವದರಿಂದ ಅದೇ ಶಾಲೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ ಕೆಲವು ಶಾಲೆಗಳು ಉನ್ನತೀಕರಣಗೊಂಡು ನಾಮಫಲಕಗಳನ್ನು ಬದಲಾವಣೆಯಾದ ಹಿನ್ನಲೆಯಲ್ಲಿ ಮತದಾರರಿಗೆ ಮತಗಟ್ಟೆ ಗುರುತಿಸಲು ಮಗಟ್ಟೆಯ ಕಟ್ಟಡ ಹೆಸರುಗಳನ್ನು ಬದಲಾವಣೆ ಮಾಡಲಾಗಿದೆ. ತೇರದಾಳ ಕ್ಷೇತ್ರದಲ್ಲಿ ೨೩, ಬೀಳಗಿ ಕ್ಷೇತ್ರದಲ್ಲಿ ೧೩, ಬಾದಾಮಿ ಕ್ಷೇತ್ರದಲ್ಲಿ ೬, ಬಾಗಲಕೋಟೆ ಕ್ಷೇತ್ರದಲ್ಲಿ ೪, ಹುನಗುಂದ ಕ್ಷೇತ್ರದಲ್ಲಿ ೫ ಮತಗಟ್ಟೆಗಳ ಹೆಸರು ಬದಲಾವಣೆ ಮಾಡಲಾಗಿದೆ ಎಂದರು.
 ಸಭೆಯಲ್ಲಿ ತಹಶೀಲ್ದಾರ ಅಮರೇಶ ಪಮ್ಮಾರ, ಚುನಾವಣಾ ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಚುನಾವಣಾ ಶಿರಸ್ತೇದಾರ ಮಹೇಶ ಪಾಂಡವ ಸೇರಿದಂತೆ ವಿವಿಧ ರಾಜಕೀಯ ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಕೃಷ್ಣಾ ಪಾಟೀಲ, ಮಲ್ಲಿಕಾರ್ಜುನ ಕಾಂಬಳೆ, ಶಿವಾನಂದ ಸುರಪುರ ಉಪಸ್ಥಿತರಿದ್ದರು.