ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿಎಂ ಭೇಟಿ: ತಕ್ಷಣ ಸ್ಪಂದನೆಗೆ ಅಧಿಕಾರಿಗಳಿಗೆ ಸೂಚನೆ
* ಜಮೀನು ನೀಡಿದರೆ ಶಾಶ್ವತ ಸ್ಥಳಾಂತರಕ್ಕೆ ಪುನರ್ವಸತಿ ಕೇಂದ್ರ * ಮುಧೋಳದಲ್ಲಿ ಕಾಳಜಿ ಕೇಂದ್ರ ಪರಿಶೀಲನೆ
ಬಾಗಲಕೋಟೆ ಆ.೧೯:
ಪ್ರವಾಹ ಬಾಧಿತಗೊಂಡ ಮುಧೋಳ ತಾಲೂಕಿನ ಮಿರ್ಜಿ, ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ಬೇಟಿ ನೀಡಿ ಹಾನಿಗೊಳಗಾದ ಮನೆ, ಬೆಳೆಯನ್ನು ಪರಿಶೀಲಿಸಿದರು. ಹಾನಿಗೊಳಗಾದ ಮನೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಸ್ಥಳೀಯರು ೪ ಎಕರೆಯಷ್ಟು ಭೂಮಿ ನೀಡಲು ಮುಂದಾದಲ್ಲಿ ಸರಕಾರದಿಂದ ಖರೀದಿಸಿ ಸಂತ್ರಸ್ಥರಿಗೆ ಶಾಶ್ವತವಾಗಿ ಪುನರ್ವತಿ ಕಲ್ಪಿಸಲಾಗುವುದೆಂದರು.
ಮಿರ್ಜಿ ಗ್ರಾಮದಲ್ಲಿ ಬಾಧಿತಗೊಂಡ ಸಂತ್ರಸ್ಥರಿಗಾಗಿ ಶಾಲೆಯೊಂದರಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಅಡುಗೆ ಕೋಣೆ, ಆಹಾರ ಸಾಮಗ್ರಿ ಹಾಗೂ ಇತರೆ ಸೌಲಭ್ಯಗಳನ್ನು ಪರಿಶೀಲಿಸಿದರು. ಬೆಳಗ್ಗೆ ಎಷ್ಟು ಜರನರ ಅಡುಗೆ ಮಾಡಿದ್ದಿರಿ ಈಗ ಎಷ್ಟು ಜನಕ್ಕೆ ಊಟ ತಯಾರಿಸುತ್ತಿರುವ ಬಗ್ಗೆ ಕೇಳಿದರು. ಕಾಳಜಿ ಕೇಂದ್ರದಲ್ಲಿರುವ ೧೫೦ ಸಂತ್ರಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಜಾನುವಾರುಗಳಿಗೆ ಮೇವಿನ ತೊಂದರೆಯಾಗದAತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ವಿವಿಧ ಬಾಧಿತ ಪ್ರದೇಶಗಳಿಗೆ ಭೇಟಿ ಪ್ರವಾಹ ಸ್ಥಿತಿಗತಿಯನ್ನು ಅವಲೋಕಿಸಿದರು. ಚಿಕ್ಕಪಡಸಲಗಿ ಬ್ಯಾರೇಜಗೆ ಬೇಟಿ ನೀಡಿದ ಸಂದರ್ಭದಲ್ಲಿ ಉಕ್ಕಿ ಹರಿಯುತ್ತಿರುವ ನೀರಿನ ಪ್ರಮಾಣದಿಂದ ಬಾಧಿತಗೊಳ್ಳುವ ಪ್ರದೇಶಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಧೋಳ ನಗರದ ಸುತ್ತಗಟ್ಟಿಗಲ್ಲಿ ವಾರ್ಡ ನಂ.೩೧ ರಲ್ಲಿರುವ ಸರಕಾರಿ ಸಾಲೆಯಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಕ್ಕೆ ಕಾರಜೋಳ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ಅಲ್ಲಿರುವ ೪೨ ಜನ ಸಂತ್ರಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ನಂತರ ಯಾದವಾಡ ಸೇತುವೆ ಬಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು. ಪ್ರವಾಹದಿಂದ ಬಾಧಿತಗೊಳ್ಳುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಇದ್ದರು.