ಲಿಂಗಾಯತ ಹೋರಾಟದಲ್ಲಿ ಪೋಸು ಕೊಟ್ಟರು, ಈಗ ತಮ್ಮ ಸಮಾಜಕ್ಕೆ ಬೇಡಿಕೆ ಇಟ್ಟರು..!

ಪಂಚಮಸಾಲಿ ಜಗದ್ಗುರುಗಳ ವಿರುದ್ಧ ಬಸವ ಧರ್ಮಪೀಠದ ಮಾತೆ ಗಂಗಾದೇವಿ ಆರೋಪ * ಅಲ್ಪಸಂಖ್ಯಾತ ಸ್ಥಾನಮಾನವೇ ಬೇರೆ, ಜಾತಿ ಮೀಸಲಾತಿಯೇ ಬೇರೆ ಎಂದ ಸ್ವಾಮೀಜಿ

ಲಿಂಗಾಯತ ಹೋರಾಟದಲ್ಲಿ ಪೋಸು ಕೊಟ್ಟರು, ಈಗ ತಮ್ಮ ಸಮಾಜಕ್ಕೆ ಬೇಡಿಕೆ ಇಟ್ಟರು..!

ನಾಡನುಡಿ ನ್ಯೂಸ್
ಬಾಗಲಕೋಟೆ:
ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆದ‌ ಹೋರಾಟದಲ್ಲಿ ಪಾಲ್ಗೊಂಡು ಇದೀಗ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿರುವ ಪಂಚಮಸಾಲಿ ಜಗದ್ಗುರು ಬಸವಜಯ‌ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಬಸವ ಧರ್ಮ ಪೀಠಾಧ್ಯಕ್ಷೆ ಮಾತಾ ಗಂಗಾ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಿಂಗಾಯ ಸ್ವತಂತ್ರ ಧರ್ಮ ಹೋರಾಟದಲ್ಲಿ ಪಂಚಮಸಾಲಿ ಸ್ವಾಮೀಜಿ ಪೋಸು ಕೊಟ್ಟಿದ್ದು ಏಕೆ‌ ಎಂದು ಕಿಡಿಕಾರಿದ್ದಾರೆ.

ಸ್ವತಂತ್ರ ಧರ್ಮಕ್ಕಾಗಿ ನಡೆದ ಹೋರಾಟದಲ್ಲಿ ಜೋರು, ಜೋರು ಭಾಷಣ ಮಾಡುತ್ತಿದ್ದ ಸ್ವಾಮೀಜಿ ಈಗ ಮಾತು ಬದಲಿಸಿದ್ದಾರೆ. ರಾಜಮಾರ್ಗದಲ್ಲಿ ಸ್ವತಂತ್ರ ಧರ್ಮಕ್ಕಾಗಿ ಹೋರಾಡಿದರೆ ಅದರಲ್ಲಿರುವ ಎಲ್ಲ ಉಪಪಂಗಡಗಳಿಗೂ ಸೌಲಭ್ಯಗಳು ಲಭಿಸುತ್ತೆ ಎಂದು ಮಾತೆ ಗಂಗಾದೇವಿ‌ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಸಿರುವ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ನಡೆದಿದ್ದು, ಅದನ್ನೂ ಕೊಡ್ತಿದ್ರೆ ಕೊಡಲಿ ಯಾರು ಬೇಡ ಎನ್ನುತಾರೆ. ೨ಎ ಮೀಸಲಾತಿ ಹೋರಾಟವಯ ಜಾತಿ ಆಧಾರಿತವಾಗಿ ನಡೆಯುತ್ತಿದೆ ಎಂದಿದ್ದಾರೆ.