೭ ಕ್ಕೆ ಮಹಾದಾಯಿ ಅಧಿಕಾರಿಗಳ ಭೇಟಿ
Panaji,goa,Karnataka,magadayi,river, visit
೭ ಕ್ಕೆ ಮಹಾದಾಯಿ ಅಧಿಕಾರಿಗಳ ಭೇಟಿ
ಪಣಜಿ:ಮಹಾದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂದಿಸಿದ ಕೇಂದ್ರ ಸರಕಾರ ನೇಮಿಸಿರುವ ಮಹಾದಾಯಿ ನದಿ ಹರಿವು ಪ್ರಾಧಿಕಾರದ ಅಧಿಕಾರಿಗಳು ಜುಕೈ ೫ ಮತ್ತು ೬ ರಂದು ಗೋವಾ ಕ್ಕೆ ಭೇಟಿ ನೀಡುವರು. ೭ ರಂದು ಕರ್ನಾಟಕದ ಕಳಸಾ ಬಂಡೂರಿ ಸ್ಥಳಕ್ಕೆ ಅಧಿಕಾರಿಗಳ ತಂಡ ಆಗಮಿಸಲಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ ಶಿರೋಡಕರ ಹೇಳಿದ್ದಾರೆ.ರಾಜ್ಯಗಳ ಮಹಾದಾಯಿ ನದಿ ಹರಿವನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ ಜುಲೈ ೮ ರಂದು ಬೆಳಗಳೂರಿನಲ್ಲಿ ನದಿ ಪ್ರವಾಹ ಪ್ರಾಧಿಕಾರದ ಎರಡನೇ ಸಭೆ ನಡೆಯಲಿದೆ ಎಂದು ತಿಳಿಸಿದರು