ಮುಚಖಂಡಿಯಲ್ಲಿ ಏ.೩೦ ರಂದು ರಾಜ್ಯಮಟ್ಟದ ಟಗರಿನ ಕಾಳಗ
ಬಾಗಲಕೋಟೆ : ತಾಲ್ಲೂಕಿನ ಮುಚಖಂಡಿ ಗ್ರಾಮದಲ್ಲಿ ಶ್ರೀ ಬಸವ ಜಯಂತಿ ನಿಮಿತ್ತ ಏಪ್ರೀಲ್ 30ರಂದು ಸಂಜೆ 6 ಗಂಟೆಗೆ ರಾಜ್ಯಮಟ್ಟದ ಬೃಹತ್ ಟಗರಿನ ಕಾಳಗವನ್ನು ಏರ್ಪಡಿಸಲಾಗಿದೆ.
ಮುಕ್ತ ಟಗರಿನ ಕಾಳಗದಲ್ಲಿ ಗೆಲುವು ಪಡೆಯುವ ಟಗರಿಗೆ ಪ್ರಥಮ ಬಹುಮಾನ ಒಂದು ತೊಲೆ ಬಂಗಾರ, ದ್ವಿತೀಯ ಬಹುಮಾನ ಅರ್ಧ ತೊಲೆ ಬಂಗಾರ, ತೃತೀಯ ಬಹುಮಾನ 15 ತೊಲೆ ಬೆಳ್ಳಿ ನೀಡಲಾಗುವುದು.
ನಾಲ್ಕು ಹಲ್ಲಿನ ಟಗರಿನ ಕಾಳಗದಲ್ಲಿ ಗೆಲುವು ಸಾಧಿಸುವ ಟಗರಿಗೆ ಪ್ರಥಮ ಬಹುಮಾನ 10,000 , ದ್ವಿತೀಯ ಬಹುಮಾನ 7001ರೂ., ತೃತೀಯ ಬಹುಮಾನ 4001 ರೂ.ಬಹಾನ ನೀಡಿದರೆ
ಎರಡು ಹಲ್ಲಿನ ಟಗರಿನ ಕಾಳಗದಲ್ಲಿ ಜಯ ಗಳಿಸೊದ ಟಗರಿಗೆ 8001 ರೂ., ದ್ವಿತೀಯ 5001 ರೂ.,ತೃತೀಯ 3001ರೂ., ಹಾಗೂ ಹಾಲು ಹಲ್ಲಿನ ಟಗರಿನ ಕಾಳಗದಲ್ಲಿ ಜಯ ಸಾಧಿಸುವ ಟಗರಿಗೆ ಪ್ರಥಮ ಬಹುಮಾನ 5001ರೂ., ದ್ವಿತೀಯ 3001 ರೂ.,ತೃತೀಯ 2001 ರೂ., ನೀಡಿಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ: 9964545480, 9008918143, 9742662120, 9900393969, 9741761843 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.