ಬಾಗಲಕೋಟೆ: ಹೆಣ್ಣುಭ್ರೂಣ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯ ಮಹಾಲಿಂಗಪುರದಲ್ಲಿ ಗರ್ಭಪಾತಕ್ಕೊಳಗಾಗಿದ್ದ ಮಹಿಳೆಯೊರ್ವಳು ಅಸುನೀಗಿರುವ ಘಟನೆ ವರದಿಯಾಗಿದೆ. ರಾಜ್ಯದಲ್ಲಿ ಗರ್ಭಪಾತ ದಂಧೆ ಇನ್ನೂ ಜೀವಂತವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಮಹಾರಾಷ್ಟದ ಕೋಲಾಪುರದ ಸೋನಾಲಿ ಸಚಿನ್ ಕದಂ(೩೩) ಮೃತ ದುರ್ದೈವಿ. ಮಹಾರಾಷ್ಟçದ ಮೀರಜ್ ಅಥವಾ ಕುಪ್ವಾರ್‌ನಲ್ಲಿ ಸ್ಕಾö್ಯನಿಂಗ್ ಮಾಡಿಸಿರುವ ಶಂಕೆ ವ್ಯಕ್ತವಾಗಿದ್ದು, ನಂತರ ಮಹಾಲಿಂಗಪುರದ ಕವಿತಾ ಸುರೇಶ ಬಾದನ್ನವರ ಎಂಬ ಆಯಾ ಬಳಿ ಸೋನಾಲಿಯನ್ನು ಗರ್ಭಪಾತ ಸಂಬAಧ ಕರೆತರಲಾಗಿತ್ತು. ಗರ್ಭಪಾತದ ನಂತರ ಸೋನಾಲಿ ವಾಪಸ್ ಆಗುವ ವೇಳೆ ದಾರಿ ಮಧ್ಯೆ ಅಸುನೀಗಿದ್ದಳು. ಸಾಂಗ್ಲಿ ಆಸ್ಪತ್ರೆಗೆ ಸೋನಾಲಿಯನ್ನು ಆಕೆಯೊಂದಿಗೆ ಬಂದಿದ್ದ ಸಂಬAಧಿಕರು ಕರೆದೊಯ್ದಾಗ ಆಕೆ ಮೃತಪಟ್ಟಿರುವುದು ಖಚಿತವಾಗಿ ಆಸ್ಪತ್ರೆ ಸಿಬ್ಬಂದಿ ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಆ ವೇಳೆ ಘಟನೆ ಸಂಪೂರ್ಣ ಚಿತ್ರಣ ಹೊರಬಿದ್ದಿತ್ತು. ಇದೇ ಮೇ ೨೭ರಂದು ಈ ಎಲ್ಲ ಘಟನೆಗಳು ನಡೆದಿವೆ.
ಪ್ರಕರಣ ಸಂಬAಧ ಆಯಾ ಕವಿತಾ ಬಾದನ್ನವರ, ಮೀರಜ್ ಮೂಲದ ದಲ್ಲಾಳಿ ಮಾರುತಿ ಕರವಾಡ ಹಾಗೂ ಸೋನಾಲಿಯ ಸಂಬAಧಿಸಿ ವಿಜಯ ಗೌಳಿ ಎಂಬಾತನನ್ನು ಮಹಾಲಿಂಗಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕವಿತಾ ಬಾದನ್ನವರ ಕದ್ದುಮುಚ್ಚಿ ಗರ್ಭಪಾತ ಮಾಡುವ ಸಂಬAಧ ೨೦೨೨ರಲ್ಲೂ ಪ್ರಕರಣ ದಾಖಲಾಗಿದೆ. ಆಕೆಯ ಮನೆಯಲ್ಲಿ ಯಾವುದೇ ಯಂತ್ರೋಪಕರಣಗಳು ಸಿಕ್ಕಿದಿಲ್ಲವಾದರೂ ಮನೆಯಲ್ಲಿ ಗರ್ಭಪಾತ ನಡೆದಿರುವುದು ಮೇಲ್ನೋಟಕ್ಕೆ ಕೆಲವು ಸಂಗತಿಗಳು ಕಂಡು ಬಂದಿದ್ದರಿAದ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಆರೋಪಿಯಾಗಿರುವ ಮಾರುತಿ ಕರವಾಡ ದಲ್ಲಾಳಿಯಾಗಿದ್ದು, ಆತ ಕವಿತಾಳ ಜತೆಗೆ ನಂಟು ಹೊಂದಿದ್ದ. ಮಹಾರಾಷ್ಟçದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಏಳು ಜನರ ಮೇಲೆ ದೂರು ದಾಖಲಾಗಿದೆ. ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ಮೂರನೇಯದೂ ಹೆಣ್ಣೆಂದು ಗರ್ಭಪಾತ..!
ಮೃತ ಸೋನಾಲಿ ಕದಂಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದು, ಆಕೆ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಳು. ಹೀಗಾಗಿ ಮಹಾರಾಷ್ಟçದ ಮೀರಜ್‌ನಲ್ಲಿ ಆಕೆಯ ಸ್ಕಾö್ಯನಿಂಗ್ ಮಾಡಿಸಿದ್ದ ವೇಳೆ ಹೆಣ್ಣುಭ್ರೂಣಪತ್ತೆಯಾಗಿದೆ. ನಂತರ ಆಕೆಯನ್ನು ದಲ್ಲಾಳಿ ಮಾರುತಿ ಕರವಾಡ ಮೂಲಕ ಕವಿತಾ ಬಳಿ ತರಲಾಗಿದೆ. ಮಹಾರಾಷ್ಟçದ ಸಾಂಗ್ಲಿ, ಮೀರಜ್, ಜತ್ ಸೇರಿದಂತೆ ಹಲವು ಭಾಗಗಳ ಜಾಲ ಮಹಾಲಿಂಗಪುರವರೆಗೆ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಮೇ ೨೭ರಂದು ಸೋನಾಲಿ ಗರ್ಭಪಾತದ ನಂತರ ಊರಿಗೆ ಮರಳುವ ವೇಳೆ ಆಕೆ ಕಣ್ಣು ತಿರುಗಿದಂತೆ ಆಗಿದ್ದು, ನಂತರ ಪ್ರಜ್ಞೆ ತಪ್ಪಿದೆ ಆಸ್ಪತ್ರೆಗೆ ತೆರಳಿದಾಗ ಆಕೆ ಜೀವ ಬಿಟ್ಟಿರುವುದು ಗೊತ್ತಾಗಿದೆ.
ಬಾಕ್ಸ್
ಜತ್ ಮೂಲದ ಗರ್ಭಿಣಿ ರಕ್ಷಣೆ
ಮೇ ೨೭ರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಹಾಲಿಂಗಪುರ ಪೊಲೀಸರು ಕವಿತಾ ಬಾದನ್ನವರ ವಿಚಾರಣೆಗೆ ತೆರಳಿದ ವೇಳೆ ಜತ್ ಮೂಲದ ೫ ತಿಂಗಳ ಗರ್ಭಿಣಿ ಕವಿತಾ ಮನೆಯಲ್ಲಿ ಪತ್ತೆಯಾಗಿದ್ದಾರೆ ಕೂಡಲೇ ಪೊಲೀಸರು ಗರ್ಭಿಣಿಯನ್ನು ರಕ್ಷಿಸಿ ಆಕೆಯನ್ನು ಕರೆತಂದಿದ್ದು ಯಾರು, ಕವಿತಾ ವಿಳಾಸ ಮಹಾರಾಷ್ಟçದಲ್ಲಿ ಹಬ್ಬಿರುವುದು ಹೇಗೆ. ಇದರ ಹಿಂದೆ ಜಾಲ ಕೆಲಸ ಮಾಡುತ್ತಿದೆಯೇ ಎಂಬುದರ ಪತ್ತೆಗೆ ಜಾಲ ಬೀಸಿದ್ದಾರೆ.
ಬಾಕ್ಸ್
ಖಾಸಗಿ ಆಸ್ಪತ್ರೆಯ ಆಯಾ ದಂಧೆಯ ರೂವಾರಿ..!
ಬಂಧಿತ ಕವಿತಾ ಬಾದನ್ನವರ ಮಹಾಲಿಂಗಪುರದ ಆಸ್ಪತ್ರೆಯೊಂದರಲ್ಲಿ ಆಯಾ ಕೆಲಸದಲ್ಲಿ ಇದ್ದಳು. ವೈದ್ಯರು ಶಸ್ತçಚಿಕಿತ್ಸೆ ಮಾಡುವುದನ್ನು ನೋಡುತ್ತಲೇ ಕಲಿತಿರುವ ಈಕೆ ಮುಂದೆ ತಾನೇ ಗರ್ಭಪಾತ ಮಾಡುವ ದಂಧೆ ನಡೆಸುತ್ತಿದ್ದಳು ಎನ್ನಲಾಗಿದೆ. ೨೦೨೨ರಲ್ಲಿ ಇಂಥದೇ ಅನುಮಾನದ ಮೇಲೆ ಆಕೆಯ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಯದಲ್ಲಿ ವಿಚಾರಣೆ ಮುಂದವರಿದಿದೆ. ಅಷ್ಟರಲ್ಲಿ ಆಗಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ಕವಿತಾ ದ್ವಿತೀಯ ಪಿಯುಸಿಯಲ್ಲೂ ಪಾಸಾಗಿಲ್ಲ ಎಂಬ ಮಾಹಿತಿಯಿದ್ದು, ಈಕೆ ದಂಧೆ ಆರಂಭಿಸಿದ್ದು ಹೇಗೆ, ಮಹಾರಾಷ್ಟçದವರೆಗೆ ಈಕೆಯ ಖ್ಯಾತಿ ಹಬ್ಬಿದ್ದು ಹೇಗೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
ಕೋಟ್ಸ್
ಮಹಾಲಿಂಗಪುರ ಘಟನೆ ಸಂಬAಧ ಮೂವರನ್ನು ಬಂಧಿಸಲಾಗಿದ್ದು, ಮಹಾರಾಷ್ಟçದಿಂದ ಜಿಲ್ಲೆಯ ಮಹಾಲಿಂಗಪುರದವರೆಗೆ ಜಾಲವಿದೆಯೇ ಎಂಬುದರ ತನಿಖೆಯನ್ನೂ ನಡೆಸಲಾಗುತ್ತಿದೆ. ಪೊಲೀಸರು ಕವಿತಾಳ ವಿಚಾರಣೆಗೆ ತೆರಳಿದ ಸಂದರ್ಭದಲ್ಲೂ ಮಹಾರಾಷ್ಟçದ ಜತ್ ಮೂಲದ ಮಹಿಳೆಯನ್ನು ರಕ್ಷಿಸಲಾಗಿದೆ. ಪ್ರಕರಣವನ್ನು ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ.
ವೈ.ಅಮರನಾಥ ರೆಡ್ಡಿ, ಎಸ್‌ಪಿ