ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗದೆ ಯುವಕರು ಜಾಗೃತೆಯಿಂದಿರಿ : ಅಮರನಾಥ ರೆಡ್ಡಿ 

ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗದೆ ಯುವಕರು ಜಾಗೃತೆಯಿಂದಿರಿ : ಅಮರನಾಥ ರೆಡ್ಡಿ 
             
ಬಾಗಲಕೋಟೆ: ಭಾರತ ದೇಶದ ಗಡಿ ಪ್ರದೇಶಕ್ಕೆ ಅಂಟಿಕೊ0ಡ ದೇಶಗಳು ನಮ್ಮ ದೇಶದ ಯುವಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ತಮ್ಮ 'ಡ್ರಗ್ಸ್' ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರ ಆರಂಭಿಸಿವೆ. ಹೀಗಾಗಿ ಯುವಕರು ಡ್ರಗ್ಸ್ ಮಾಫಿಯಾಕ್ಕೆ ಒಳಗಾಗಿ ಬದುಕು ಹಾಳು ಮಾಡಿಕೊಳ್ಳದೆ ಜಾಗೃತಿ ವಹಿಸಬೇಕಾದ ಅಗತ್ಯತೆ ಇದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವೈ.ಅಮರನಾಥ ರೆಡ್ಡಿ ಯುವಕರಿಗೆ ಕರೆ ನೀಡಿದರು.  

ನಗರದ ಬ.ವಿ.ವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಶಹರ ಪೊಲೀಸ್ ಠಾಣೆಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತು ಹಾಗೂ ಕಳ್ಳಸಾಗಾಣಿಕೆ ಮಾರಾಟ ವಿರೋಧದ ಅಂತಾರಾಷ್ಟಿಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.  
ಇಂದು ದೇಶಾದ್ಯಂತ ಯುವಕರು ತಮ್ಮ ಸುಂದರ ಬದುಕಿನ ಕಡೆ ಲಕ್ಷ ಕೊಡಬೇಕಾದ ಜರೂರತ್ತಿದೆ. ಓದು ನಮ್ಮ ನಿತ್ಯದ ಚಟವಾಗಬೇಕೆ ವಿನಃ ನಾವು ದುಶ್ಚಟಗಳ ದಾಸರಾಗಬಾರದು. ವಿದ್ಯಾರ್ಥಿ ದೆಸೆಯಲ್ಲಿ ಅನುಭವಸ್ತರು ಹಾಗೂ ಗುರುಗಳು ಹೇಳಿದ ಮಾರ್ಗಗಳನ್ನು ಅನುಸರಿಸುವ ಗುಣಬೆಳಸಿಕೊಳ್ಳಬೇಕು. ದುಶ್ಚಟಕ್ಕೆ ಒಳಗಾದ ಯುವಕರು ಕುಟುಂಬ, ಸಮಾಜ, ಔದ್ಯೋಗಿಕ ಕ್ಷೇತ್ರಗಳಲ್ಲಿ ತೀರ ಅವಮಾನ ಅನುಭವಿಸುತ್ತಾರಲ್ಲದೆ, ಆರ್ಥಿಕವಾಗಿಯೂ ದಿವಾಳಿಯಾಗಿ ಸಾವಿನ ಮನೆಯತ್ತ ಪಯನ ಬೆಳೆಸುತ್ತಾರೆ, ಯುವಕರು ಈ  ಡ್ರಗ್ಸ್ನಂತಹ ದುಶ್ಚಟಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಿ ಎಂದರು.    
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎಂ.ಗಾAವಕರ್ ಅವರು ಮಾತನಾಡಿ ಮಾದಕ ವ್ಯಸನಕ್ಕೆ ದೇಶದ ಅನೇಕ ಗಡಿ ರಾಜ್ಯಗಳು ಒಳಗಾಗುತ್ತಿರುವುದು ಖೇದದ ಸಂಗತಿ. ಇಂಥ ಮಾದಕ ವಸ್ತುಗಳ ಮಾರಕ ರೋಗಕ್ಕೆ ನಮ್ಮ ವಿದ್ಯಾರ್ಥಿಗಳು ಒಳಗಾಗದಂತೆ ಪೊಲೀಸ್ ಇಲಾಖೆ ಇಂದು ದೇಶಾದ್ಯಂತ ಹಮ್ಮಿಕೊಳ್ಳುತ್ತಿರುವ ಜಾಗೃತಿ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹ ಎಂದರು.
ಸಿಪಿಐ ಗುರುನಾಥ ಚವಾಣ ದುಶ್ಚಟದಿಂದ ದೂರವಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಎನ್.ಎಚ್. ಬೇವಿನಹಳ್ಳಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಎಸ್.ಜಿ. ಹುನಸಿಕಾಯಿ ವೇದಿಕೆಯಲ್ಲಿದ್ದರು. 
ಐಕ್ಯೂಎಸಿ ಸಂಯೋಜಕ ಡಾ. ಡಿ.ಎಸ್. ಲಮಾಣಿ ಅತಿಥಿಗಳನ್ನು ಸ್ವಾಗತಿಸಿದರು. ಶಿಲ್ಪಾ ವೈದ್ಯ ಮತ್ತು ಗೀತಾ ಯಡಹಳ್ಳಿ ಪ್ರಾರ್ಥಿಸಿ, ಸವಿತಾ ದಾದನಟ್ಟಿ ನಿರೂಪಿಸಿದರು,ಶಿವಾನಂದ ಶಿವನಗುತ್ತಿ ವಂದಿಸಿದರು.